ನೆಮ್ಮದಿ ಹುಡುಕಿ



ಬದುಕಿನ ಜಂಜಾಟಾದಲ್ಲಿ

ಎತ್ತಾ ಸಾಗಿಹೇವು ನಾವು

ಸುತ್ತಲೂ ಮಾನವರ

ನೆರಳು ಕಾಣುವೆವು

ಎಲ್ಲರಲು ಒಂದೇ ಹಣ ಗಳಿಸುವ ಗುರಿಯು

ಮರೆತು ಬದುಕು ಬೇಕು ಇಲ್ಲಿ

ಮಕ್ಕಳು ಮರಿಯು


ನಿತ್ಯವೂ ಸಾಗುತಿದೆ ಎಳು ಬೀಳಿನ ಜೀವನ

ನೆಮ್ಮದಿಯ ಹುಡುಕುತಿರು

ಜನ ಕಣ್ಣು ಬಿಟ್ಟು

ಎದ್ದು ಕೆಲಸಕೆ ಹೋಗುವ ಗೋಜು

ಶನಿವಾರ ಬಂದರೆ ವಾರದ ಕೊನೆ ಮೋಜು

ಹೊರಟಿಹರು ಹುಡುಕುತ

ನೆಮ್ಮದಿ ಅರಸಿ ಬದುಕನು ಸವೆಸಿ 


ಮಕ್ಕಳು ಶಾಲೆಗೆ ಅಪ್ಪ ಅಮ್ಮನು ಕೆಲಸಕೆ

ಸಂಜೆ ಕವಿದ ಮೇಲೆ

ಮಂಜು ಮುತ್ತಿದ ಹಾಗೆ ಎಲ್ಲರೂ

ಉಂಡು ತಿಂದು ಮಲಗಿ ಕಾಯುತಿಹರು ಇಲ್ಲಿ 

ಮುಂಜಾನೆ  ಸೂರ್ಯನ ಕಿರಣ


ನಗುವ ಹುಡುಕಲು ಇಲ್ಲಿ

ದುಡ್ಡು ಕೊಡಬೇಕಂತೆ

ಅಪ್ಪ ಅಮ್ಮನಿಗೆ ವೃದ್ಧರ ಕೇಂದ್ರವಂತೆ

ಅನಾಥ ಮಕ್ಕಳಿಗೂ ಆಶ್ರಮವಂತೆ

ಮರೆತು ಬಾಳಬೇಕು ನೂರೆಂಟು ಚಿಂತೆ


ನನ್ನವರು ಯಾರಿಲ್ಲ ಅಕ್ಕರೆಯ ತವರಿಲ್ಲ

ಆಸೆಗಳಿಗೆ ರೆಕ್ಕೆ ಪುಕ್ಕ ಬಂದಿದ್ದೇಯೆಲ್ಲಾ

ಕನಸುಗಳು ನನಸು ಮಾಡಲು

 ದಿನವೂ ದುಡಿಯುವರು ಎಲ್ಲಾ

ವೇಗದಲಿ ಹೊಡುತಿಹಾ ಜೀವನ

ಮೆಟ್ರೋ ರೈಲಿನತೆಲ್ಲಾ


ಸಾಕು ಎಂದರೆ ಬಿಡಲು ಹಾಗುವುದಿಲ್ಲ

ಚಿಂತೆಗಳ ಸಂತೆಯಲಿ ನೆಮ್ಮದಿ ಅರಸುತ

ಬದುಕು ದೂಡ ಬೇಕು ಮೂಕರಾಗಿ

ವಾಹನದ ದಟ್ಟನಿಯ ಜಗದ ಒಳಗೆ ಜಾಗೂರುಕರಾಗಿ


ಮಳೆ ಬಂದಾಗ ರಸ್ತೆಗಳು ಹಾಗಿಹವು ಗುಂಡಿಗೋಟರು

ನಾನಿರುವ ಬೀದಿ ತುಂಬಾ ನೀರಿನ ತೊಡರು 

ಮುಳುಗಿ ಹೇಳುಬೇಕು ಇಲ್ಲಿ

ನೀರನು ಮೊಗೆದು 

ಕಟ್ಟೀಹರು ಮನೆಯ ಇಲ್ಲಿ ಮಣ್ಣ ಬಗೆದು


ಬೇಕು ಸಾಕುಗಳ ಬದಿಗಿಟ್ಟು ಎಲ್ಲಾ

 ಕುಣಿದು ಬದುಕಬೇಕು

ಕಾಣದ ಊರಿನಲ್ಲಿ ಕಾಣುವ ಬದುಕಲ್ಲಿ 

ಕಾಲವನು ನಾವು ನೂಕಬೇಕು 


**********ರಚನೆ *********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20