ನೋವು
ಕಾಲಲ್ಲಿ ಚುಚ್ಚಿದ ಮುಳ್ಳು
ಕಣ್ಣೀರು ತರುತಿಲ್ಲ ಕಂದ
ನಿನ್ನ ಕೈ ಮುರಿದ ನೋವಲ್ಲಿ
ನಿನ್ನ ತೆಗೆದ ಮುಳ್ಳು
ನನ್ನ ಮನದ ಅಳುವನು ನುಂಗಿತ್ತಲ್ಲ ಕಂದ
ಬಡತನವು ನಮ್ಮನ್ನು ಸುಟ್ಟು ಬಿಟ್ಟಿದೆ
ಬಗಲ್ಲಲ್ಲಿ ಮಗುವೊಂದು ನಾ ಬಾಚಿ ತಬ್ಬಿದೆ
ತಲೆ ಮೇಲೆ ನೀರಿನ ಬಿಂದಿಗೆ ಹೊತ್ತಿದೆ
ನೆತ್ತಿಯ ಸೂರ್ಯ ಸುಡುತಿಹನು
ಬಡತನವ ಕೊಟ್ಟ ದೇವರು ನಗುತಿಹನು
ಕಣ್ಣೀರು ಬಾರದ ಕಣ್ಗಳು ನಿನ್ನ
ನೋಡಿವೆ
ನಿನ್ನಯ ನೋವಿಗೆ ನೊಂದು ಹೇಳಿವೆ
ಆನಂದಬಾಷ್ಪ ಮನದುಂಬಿ ಹಾಡಿವೆ
ನನ್ನೆದೆಯ ಮಡಿಲಲ್ಲಿ ಹೊತ್ತು ಹೆತ್ತ ಮನಸ್ಸು ಓ ಮಗುವೇ
ಸಾಕು ಮೇಲೇಳು ಮುಂದೆ ಹೆಜ್ಜೆ ಹಾಕುವೆ ಕೂಗಿ ಹೇಳಿದೆ
********ರಚನೆ **********
ಡಾ. ಚಂದ್ರಶೇಖರ. ಸಿ. ಹೆಚ್
********ರಚನೆ **********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment