ಗುರು ನೀನೆ
ಗುರುವೇ ನೀನು ವಿದ್ಯೆಗೆ ಜಗವು
ಗುರುವೇ ನಿನ್ನಿಂದ ತಾನೇ ಗೆಲುವು
ಗುರುವೇ ನಿನ್ನಿಂದ ಕುಣಿವುದು ಮನವು
ಗುರುವೇ ನೀನು ಪ್ರೀತಿಯ ಒಲವು
ಗುರುವೇ ನಿನ್ನಿಂದ ಬಾಳಲಿ ಬೆಳಕು
ಗುರುವೇ ನಿನ್ನಿಂದ ಮಾಯಾ ಕೊಳಕು
ಗುರುವೇ ನಿನ್ನಿಂದ ಖುಷಿ ಈ ಬದುಕು
ಗುರುವೇ ನಿನ್ನಿಂದ ಮುಚ್ಚಿದೆ ಬಿರುಕು
ಗುರುವೇ ನೀನೆ ಒಲವ ಚಲವು
ಗುರುವೇ ನೀನು ಮನದ ಅರಿವು
ಗುರುವೇ ನೀನು ತಾಳ್ಮೆಯ ಭಯವು
ಗುರುವೇ ನೀನು ನಮ್ಮಯ ನಗುವು
ಗುರುವೇ ನೀನು ಶಿಕ್ಷಣ ಲೋಕ
ಗುರುವೇ ನೀನು ಅಕ್ಷರ ಪಾಕ
ಗುರುವೇ ನೀನು. ಮಾತಲಿ ತೂಕ
ಗುರುವೇ ನೀನು ಮನದಿ ಮೂಕ
ಗುರು ಇಲ್ಲದೆ ಗುರಿ ಎಲ್ಲಿದೆ
ಶಿಕ್ಷಣ ಇಲ್ಲದೆ ಮನೆ ಎಲ್ಲಿದೆ
ಅಕ್ಷರ ಇಲ್ಲದೆ ಬದುಕು ಎಲ್ಲಿದೆ
ಅಕ್ಕರೆ ಇಲ್ಲದೆ ಪ್ರೀತಿ ಎಲ್ಲಿದೆ
ಗುರುವೇ ನೀನು ತಾನೇ ಚಲ
ಗುರುವೇ ನೀನು ತಾನೇ ಬಲ
ಗುರುವೇ ನೀನು ವಿದ್ಯೆ ಫಲ
ಗುರುವೇ ನೀನು ಪ್ರಬಲ
ಎಲ್ಲಾ ನನ್ನ ಗುರುಗಳಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು
************** ರಚನೆ *****
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment