ಮಾಯೆ
ಮನಸು ಕರಗದ ಮಾಯೆ
ಕಾಡಿದೆ ನಿನ್ನಯ ಛಾಯೆ
ಏತಕೆ ನನಗೆ ಈ ಮೋಹ
ತೀರದ ಒಲವಿನ ದಾಹ
ನೆನಪೊಂದು ಸವಿ ಮಾತು
ಬಿಡದೆ ನನ್ನ ಕಾಡಿತು
ಹೃದಯದಿ ನದಿಯೊಂದು
ಓಡಿತು
ಕಾಣದ ಕಡಲಿಗೆ ಸೇರಿತು
ಮನಸು ಕರಗದ ಮಾಯೆ
ಕಾಡಿದೆ ನಿನ್ನಯ ಛಾಯೆ
ಕಣ್ಣೀರು ಕಥೆಯ ಹೇಳಿದೆ
ನಯನ ನಗುತಾ ಬಾಡಿದೆ
ಕನಸು ಏಕೊ ಕರಗಿದೆ
ಮತ್ತೊಂದು ಬಿಡಿಸದ ಒಗಟು
ಮನವು ನುಸುಳುವ ಗಂಟು
ಗಂಟ್ಟಿನಲಿ ನಮ್ಮಯ ನಂಟು
ಏನು ಹೇಳಲಿ ಒಲವೇ
ಆಸೆ ದುಃಖದ ಮಗುವೇ
ಏಕೊ ಬಾರದು ದುಗುಡದಿ ನಗುವೇ
ಮನಸು ಕರಗಿದ ಮಾಯೆ
ಕಾಡಿದೆ ನಿನ್ನಯ ಛಾಯೆ
**********ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment