ಪ್ರೀತಿ ಮಾಡ ಹೋದೆ




ಪ್ರೀತಿ ಮಾಡ ಹೋದೆ

ತರುಣಿಯೊಡನೆ ಬಂದೆ

ತರುಣಿ ಸೇರ ಹೋಗಿ

ಒಲವ ಮಳೆಯಲ್ಲಿ ನೆನೆದೆ

ಮಳೆಯ ಹಿಡಿಯ ಹೋದೆ

ನಗುವ ನದಿಯಂತೆ ಹರಿದೆ

ಕಣ್ಣ ನೋಟಕೆ ಕಾದು

ಸೆಳೆವ ಹುಡುಗಿಯೊಡನೆ ಬಂದೆ

ತಿರುಗಿ ನೋಡಲು ಇವಳು ಕಾಣೆಯಾದಳು


ಪ್ರೀತಿ ಮಾಡ ಹೋದೆ

ತರುಣಿಯೊಡನೆ ಬಂದೆ

ನಕ್ಕರೆ ನಾಚಿ ಮುತ್ತು ತರುವ

ಕಲೆತರೆ ಮನಸ್ಸು ಕೊಟ್ಟು ಬಿಡುವ


ಪ್ರೇಮ ಸಂಚಿಕೆ

ರಾಗ ಮಾಲಿಕೆ

ತಿರುಗಿ ನೋಡಲು ಇವಳು ಕಾಣೆಯಾದಳು


ಪ್ರೀತಿ ಮಾಡ ಹೋದೆ

ತರುಣಿಯೊಡನೆ ಬಂದೆ

ಅರಿತರೆ ಚೆಂದದಿ ನಗುವೇ

ಬೇರೆತರೆ ನನ್ನನ್ನು ಕಾಡುವ ಒಲವೇ


ಸೌಂದರ್ಯ ಕನ್ನಿಕೆ

ಕವಿಯ ಬೇಡಿಕೆ

ತಿರುಗಿ ನೋಡಲು ಇವಳು ಕಾಣೆಯಾದಳು

ಪ್ರೀತಿ ಮಾಡ ಹೋದೆ

ತರುಣಿಯೊಡನೆ ಬಂದೆ


ಕಣ್ಣ ನೋಟಕೆ ಕಾದು

ಸೆಳೆವ ಹುಡುಗಿಯೊಡನೆ ಬಂದೆ

ತಿರುಗಿ ನೋಡಲು ಇವಳು ಕಾಣೆಯಾದಳು


*********ರಚನೆ**********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಭಾವಗೀತೆ -51

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ