ನಾ ನೆಟ್ಟ ಗಿಡ
ನಾ ಮುರಿದ ಗಿಡವೊಂದು
ನಗುತಾ ಸತ್ತಿತು
ನನ್ನೆದೆಯ ಆಳದಲ್ಲಿ ನೋವು
ಅಳುತಾ ಕೂಗಿತ್ತು
ಎರಡು ವರ್ಷ ಸಾಕಿ ಸಲುವಿದ
ಮಗುವು ಬಿಟ್ಟಂತೆ
ನನ್ನ ಬಿಟ್ಟು ಮಣ್ಣಲ್ಲಿ ಬೇರುಗಳು ಹೂತಿಟ್ಟು
ಮತ್ತೆ ಚಿಗುರದೆ ಮಸಣ ಸೇರಿತು
ಮನವೆಕೋ ಇಂದು ಕಂಬನಿ ಮಿಡಿಯಿತು
ಸಾಕಲು ನಿನ್ನ ನೀರು ಬಿಟ್ಟಿದೆ
ಗೊಬ್ಬರ ಹಾಕಿ ನಾನು ಸಲುವಿದ್ದೆ
ನೀ ಬೆಳೆಯಲು ನಾ ನಿಗಾ ಇಟ್ಟಿದೆ
ದಿನವೂ ಸಾಯುವವು ಸಾವಿರ ಗಿಡಗಳು
ಯಾವತ್ತೂ ದುಃಖ ದುಮ್ಮಿಕ್ಕಿರಲಿಲ್ಲ
ಕಣ್ಣೆದುರೇ ನಿನ್ನ ಮೇಲೆ ನನ್ನ ಟ್ರ್ಯಾಕ್ಟರ್ ಅತ್ತಿತಲ್ಲ
ಕಾಣದ ನೋವೊಂದು ಮನವ ಕಾಡಿತಲ್ಲ
ಯೋಚಿಸಲು ನಾ ಅರಿತೆ ನೀನು ನನ್ನ ಹಣ
ಬಿಟ್ಟೋದೇ ನನ್ನ ಒಲವ ಹಣವಿಲ್ಲದ ಹೆಣ
ಹಣವಿಲ್ಲದೆ ಇದ್ದರೆ ನೋವು ಹಾಗುತ್ತಿರಲಿಲ್ಲವೇನೋ
ಯಾಕೆಂದರೆ ದಿನವೂ ಸಾಯುವವು ನೂರಾರು ಗಿಡಗಳು ಮರ ಹಾಗುವ ಒಳಗೆ
ನಿನ್ನ ಕಣ್ಣೀರಿಗೆ ನಾ ಹೇಗೆ ಬೆಲೆ ಕಟ್ಟಲಿ
ಇದ್ದರೆ ನೀ ಕೊಡುತ್ತಿದೆ ಜೀವದ ಬೆಲೆ ಇಲ್ಲಿ
ನೋವಿನಲ್ಲಿ ಹೇಳುವೆನು ನಿನಗೆ ವಿಧಾಯ
ಸಸಿ ಬೇರೆ ನೆಟ್ಟು ಮತ್ತೆ ಹಾಡುವೆನು ನಿನಗೆ ಮುಕ್ತಾಯ
ನೋವು ಒಂದು ಹಾಗೆ ಹೇಳಿದೆ
ನಿನ್ನಿಲ್ಲದೆ ಇಲ್ಲ ಆಧಾಯ
ಕಾಪಾಡು ಓ ದೇವರೇ ಈ ಬಡಪಾಯ
*********ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment