ನಗಲು ಆದಿತೆ




ಆಸೆಗಳ ಅದುಮಿಟ್ಟು

ಭಾವನೆಗಳ ಬದಿಗಿಟ್ಟು

ಕನಸುಗಳ ಮಡಿಚ್ಚಿಟ್ಟು

ದುಃಖವ ತಡೆದಿಟ್ಟು

ನಗಲು ಆದಿತೆ ಮೊಗದಲಿ ಮರೆತು  ನೋವ ಬಿಟ್ಟು


ಭ್ರಮೆಯಲಿ ತೆಲಾಡಿ

ಖುಷಿಯಲಿ ಓಲಾಡಿ

ನೋವನ್ನು ಜಾಲಾಡಿ

ನಿಜದಲ್ಲಿ ತೂರಾಡಿ

ಮರೆಯಲಾದಿತೆ ಮಾಸಿದ ಬಣ್ಣ ತುಳುಕಾಡಿ 


ಬದುಕು ಜಂಜಾಟ

ದಿನವೂ ಜೂಜಾಟ

ಕಷ್ಟ  ಏಕೊ ಗೊಳಾಟ

ಮರೆಯಲಾದಿತೆ ಕಣ್ಣ ಹನಿ ನೀರಿನ ಪರದಾಟ 


ಬಯಕೆ ಒಂಚೂರು

ಕಾಸು ಬರಿ ಬೆವರು

ದೂರಸೆ ಕಹಿ ನೀರು

ದೇಹ ದುಃಖದ ತೇರು

ಅಂಬಿಗನ ದೋಣಿ ಬಲ್ಲವರು ಯಾರು 


ಜೀವನ ಒಂದು ಸಂತೆ

ಸಾಗುವ ಒಲವ ಕಂತೆ

ಬೇಜಾರಿನ ತಕ್ಕ ಬಂತೆ

ಬದುಕು ಬುತ್ತಿ  ಚಿಂತೆ 

ತಿಂದವನೇ ಬಲ್ಲ ಸವಿರುಚಿಯ ಅಂತೇ


**********ರಚನೆ **********

   ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20