ತನು ಕರಗದಾಗಿದೆ
ಮೋಸದ ವ್ಯಥೆ ನೂರಿದೆ
ಕಣ್ಣೀರು ಕಥೆ ಹೇಳಿದೆ
ಮನಸು ಮಸಣದಂತಿದೆ
ತನು ಏಕೊ ಕರಗದಾಗಿದೆ
ಜೀವನದಿ ನಗು ಜೋಕಲಿ
ಮಾತು ಪ್ರೀತಿ ಉಯ್ಯಾಲಿ
ಕನಸು ಇಲ್ಲಿ ಮಾಮೂಲಿ
ನನಸು ಕಾಣದ ಖಯಾಲಿ
ಅತ್ತರೆ ಮನವೆಕೋ ಭಾರ
ಯಾರಿಗೆ ನೀಡಲಿ ದೂರ
ತನು ಕರಗದ ಚಿತ್ತ ಚೋರ
ದೇಹ ಬಣ್ಣದ ಬರಿ ಆಕಾರ
ನೂರೆಂಟು ಕನಸು ಮನದಿ
ಮೂಡಿತು ಹಾಗೆ ಭಯದಿ
ಕುಣಿಯಿತು ಪ್ರೀತಿ ಬಲದಿ
ಆತ್ಮ ಹರಿಯಿತು ಕಾಣದ ಜಲದಿ
*************ರಚನೆ *******
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment