ಜಾಲಿ ಮರ
ಬರಡು ಭೂಮಿಯಲಿ ಹಸಿರು
ಅಂಬರ ನೀನು
ನನ್ನ ಹೊಲವ ಕಾಯುವ ತಂತಿ
ಬೇಲಿಯೇ ನೀನು
ಮೈತುಂಬಾ ಮುಳ್ಳು ಹೊದ್ದು
ನಗುತಿರುವ ನಲ್ಲೆ ನೀನು
ಊರು ತುಂಬಾ ಸಾವಿರ
ಮರಗಳಲಿ ಗಟ್ಟಿಗಿತ್ತಿ ನೀನು
ನನ್ನೆದಯ ಆಳದಲ್ಲಿ ಮುಳ್ಳು
ಚುಚ್ಚಿ ಸಕ್ಕರೆಯ ಕಾಯಿಲೆಗೆ
ಓಷಧಿಗೆ ಗುರಿಯಾದೆ ನೀನು
ಆಗ್ಗದ ಮರಗಳು ನೂರು
ಕೂಗ್ಗದ ಮರ ನೀನು
ಜಗ್ಗಲು ಮುಳ್ಳಿನಿಂದ
ಮುತ್ತಿಕುವವಳು ನೀನು
ಬೀಟೆ, ಸಾಗೂನಿ ಮರಕೆ ಸಡ್ದು
ಒಡೆದು ಮಂಚವಾದೆ
ಕವಿ ಬರೆಯೋ ಕವನದ
ಪದಗಳಲಿ ಕುಂಚವಾದೆ
ಬೆಂದು ಬೆಯ್ದು ಬೆಂಕಿಯಲಿ
ಕೆಂಡದ ಕಪ್ಪು ಇದ್ದಿಲಾದೆ
ಭಾವನೆಗಳ ಇಲ್ಲದ ಬದುಕಿಗೆ
ನೀ ಕುಕ್ಕಿ ಅಳುವಾದೆ
ಯಾರು ಬೆಳೆಯದ ಬರಡಲಿ
ಸಾಮ್ರಾಜ್ಯ ನಿನದೆ
ಇತಿಹಾಸ ಸೃಷ್ಟಿಸುವ ರಾಜನಂತೆ
ಮೈಯೆಲ್ಲಾ ಮುಳ್ಳ ಕವಚವಾದೆ
ನೀರು ಕಾಣದ ನೆಲದಲ್ಲಿ
ಬೆಂಕಿಗೆ ಕಾಡಗಿಚ್ಚು ನೀನಾದೆ
ಶ್ರೀಗಂಧದ ಸುಗಂಧದ
ಕಂಪಿನಲಿ ನೀನು ಮರೆಯಾದೆ
ಕಾಣದೆ ಕಾಲಿಗೆ ನೀ ಕಚ್ಚಿ
ಕಂಬನಿಯಲಿ ಕಣ್ಣ ನೀರ ಹನಿಯಾದೆ
ಮನುಷ್ಯನ ಕಾಲುತುಳೀತಕೆ ಸಿಗದೇ
ಬಂಡಾಯದ ಜಾಲಿ ಮರವಾದೆ
************ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment