ನನ್ನ ನಾ ಮರೆತೆ
ನನ್ನ ನಾ ಮರೆತೆ
ನಿನ್ನಲಿ ಏಕೊ ಬೇರೆತೆ
ಮನಸ್ಸು ಅರಳೋ
ಒಳಗೆ
ನೀ
ದುಂಬಿಯಂತೆ ಕಲೆತೆ
ಆಸೆ ನೂರು ನನಗೆ
ಉಸಿರು ನೀನು ನನಗೆ
ಪ್ರೀತಿಯ ಬಲೆಗೆ
ಸಿಲುಕಿದೆ ಕೊನೆಗೆ
ಕಣ್ಣ ಅಂಚಿನಲ್ಲಿ
ಕಾಡಿದೆ ನೀನು
ಕನಸ್ಸ ಮತ್ತಿನಲ್ಲಿ
ಬೇಡಿದೆ ನಿನ್ನೆ ನಾನು
ಈ ಹೃದಯದಲ್ಲಿ
ನಿನ್ನದೆ
ಬಡಿತ
ಪ್ರೀತಿಯ ಸವಿ ಮನಕೆ
ನಿನ್ನದೆ
ಮಿಡಿತ
ನನ್ನ ನಾ ಮರೆತೆ
ನಿನ್ನಲಿ ಏಕೊ ಬೇರೆತೆ
ಮನಸ್ಸು ಅರಳೋ
ಒಳಗೆ
ನೀ
ದುಂಬಿಯಂತೆ ಕಲೆತೆ
ಹರಿವ ನದಿಯು
ಮರೆತು ನಿಂತಂತೆ
ಮೋಡದಿ ಮಳೆಯೂ
ಧುಮುಕಿ ಬಂದಂತೆ
ಹುಚ್ಚು ಮನಕೆ
ನಿನ್ನ ಪ್ರೀತಿಯ
ಚಿಂತೆ
ಒಲವ ಜಾತ್ರೆಯಲ್ಲಿ
ನಿನ್ನ ಕನಸ್ಸಿನ
ಸಂತೆ
ಬಾರೋ ನನ್ನ
ಗೆಳೆಯ
ನೀನೆ ನನ್ನ
ಹೃದಯ
ನನ್ನ ನಾ ಮರೆತೆ
ನಿನ್ನಲಿ ಏಕೊ ಬೇರೆತೆ
ಮನಸ್ಸು ಅರಳೋ
ಒಳಗೆ
ನೀ
ದುಂಬಿಯಂತೆ ಕಲೆತೆ
**********ರಚನೆ ********
ಡಾ. ಚಂದ್ರಶೇಖರ ಸಿ. ಹೆಚ್
👌
ReplyDelete