ಓ ಮಂಜುನಾಥ




ಬಿಟ್ಟೋಗೋ ಬದುಕಲ್ಲಿ

ಯಾರು ನನ್ನವರಲ್ಲ

ಸುಟ್ಟಿರುವ ನಸೀಬು

ಬಿಡದೆ ಕಾಡಿದೆಯಲ್ಲಾ

ಕಾಯೋ ಹರ ನೀನೇ ಮಂಜುನಾಥ


ಮೂರು ದಿನದ ಬಾಳು

ಗೆಲುವು ಸೋಲು ಎಲ್ಲಾ 

ಕಷ್ಟ ದುಃಖಗಳನ್ನು

ಹೊತ್ತು ಒಯ್ಯುವರು ಯಾರಿಲ್ಲ

ಕಾಯೋ ಕರುಣಾಮಯಿ ನೀನೇ ಮಂಜುನಾಥ


ಬಣ್ಣ ಬಣ್ಣದ ಮಾತು

ನಟಿಸಿ ನಡೆದರು ಎಲ್ಲಾ

ನಾಳೆಯ ಬಲ್ಲವರು

ಯಾರು ಕಾಣವರು ಇಲ್ಲ 

ಕಾಣುವನು ಎಲ್ಲಾ ನೀನೇ ಕಾಯೋ ತಂದೆ ಮಂಜುನಾಥ


ಬದುಕು ಜಟಕಾ ಬಂಡಿ

ಸಾಗಿಸು ಗಂಡ ಗುಂಡಿ

ವಿಧಿಯೂ ಆಡೋ ಬಂಡಿ

ತುಂಬಿಸು ದೇವರ ಹುಂಡಿ

ನಂಬಿರುವೆ ಕಾಯೋ ಮಂಜುನಾಥ


ಜೀವನ ಜಾತ್ರೆ ಜೋರು

ನಿನದೆ ಪೂಜೆ ತೇರು

ಹೂವು ಹಾರವ ಮುಡಿದು

ಹರಸು ನಮ್ಮ ಕರೆದು

ಭಕ್ತಿಯು ನಿನಗೆ ತಾನೇ ಕಾಯೋ ಮಂಜುನಾಥ


ಮನವು ಕದಡಿದ ನೀರು

ಹರಿವ ನದಿಯು ನೂರು

ಕನಸು ಕಾಣದ ಊರು

ಬಲ್ಲವ ನೀನೇ ಜೋರು

ಕಾಯೋ ನಮಿಸುವೆ ನಿನ್ನ  ಮಂಜುನಾಥ


ನುಡಿದಂತೆ ನಡೆವರು ಇಲ್ಲ 

ನಂಬಿ ಕೆಟ್ಟವರಿಲ್ಲ

ಬೇಡದೆ ಕಂಡವರಿಲ್ಲ

ಸಾವನು ಯಾರು ಬಲ್ಲ

ಅರಿತವಾ ನೀನೇ ಎಲ್ಲಾ ಕಾಯೋ ಮಂಜುನಾಥ 


ಆಸೆಗಳು ನೂರು ಹುಟ್ಟಿ

ಮೊಳಕೆಗಳಾಗಿ ಚಿಗುರಿ

ಬೇರುಗಳ ಬೆನ್ನಟ್ಟಿ

ದಿಕ್ಕೇಟ್ಟು ಕೂತಿರುವೆ ನಾನು

ಕಾಯೋ ಆತ್ಮಲಿಂಗ, ಜ್ಯೋತಿರಲಿಂಗ ಓ ಮಂಜುನಾಥ


ದಿಕ್ಕು ದಿಕ್ಕಲು ನೀನೇ

ಕಲ್ಲಿನ ಗುಡಿಯಲು ನೀನೇ

ಜಾರುವ ಹಿಮದಲು ನೀನೇ

ಕಾಣುವ ಲಿಂಗವು ನೀನೇ

ಮುಕ್ಕಣ್ಣು ಶಿವನೇ,  ಓ ಹರ ನೀನೇ ಕಾಯೋ ಮಂಜುನಾಥ 

*********ರಚನೆ *********

ಡಾ. ಚಂದ್ರಶೇಖರ. ಸಿ. ಹೆಚ್

Comments

Post a Comment

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20