ಓಡು ಗೆಳೆಯ ಓಡು& ಓಡು ಗೆಳತಿ ಓಡು

 


ಓಡು ಗೆಳೆಯ ಓಡು

ನೋಡು ಗೆಳತಿ ನೋಡು 

ಕಾಲ ಒಡುತಿದೆ

ಕನಸ್ಸು ಅರಳುತಿದೆ

ಮನಸ್ಸು ಕೇರಳುತಿದೆ

ಭಾವನೆ ಮಿಡಿಯುತಿದೆ

ನೆನಪು ಕಾಡುತಿದೆ

ವಯಸ್ಸು ಉರುಳುತಿದೆ

ಜೀವನ ಸಾಗುತಿದೆ

ಆಸೆ ನೂರೆಂಟಿದೆ

ಭಾಷೆ ಬಾಡಿದೆ

ಬದುಕು ಸವೆಯುತಿದೆ

ಕಷ್ಟ ಕರಗುತಿದೆ

ನಷ್ಟ ಮರುಗುತಿದೆ

ಇಷ್ಟ ಇಂಡುತಿದೆ

ಮಾತು ಮುತ್ತಾಗಿದೆ

ಪ್ರೀತಿ ಮತ್ತಾಗಿದೆ

ಸುಖ ಕರೆಯುತಿದೆ

ದುಃಖ ದೂರವಾಗಿದೆ

ಚಿಂತೆ ಮರೆಯಾಗಿದೆ 

ಓಡು ಗೆಳೆಯ ಓಡು

ಜೀವನ ಜಿಕುವ ವರೆಗೆ ಓಡು

ಭರವಸೆಯೇ ಬದುಕು

ಚಿಂತೆ ಬಿಟ್ಟು ಬದುಕ ಬಂಡಿ ನೂಕು

ಮದ್ಯೆ ಅನ್ಸಿದ್ರೆ ಇನ್ನು ಬೇಕು

ಬೇಜಾರಾದ್ರೆ ಒಂದೂ ಕ್ವಾಟ್ರು ಹಾಕು

ಓಡು ಗೆಳಯ ಓಡು ಅನ್ಸೋವರೆಗೂ ಸಾಕು

ಹಾಗದಿದ್ದರೆ ಒಮ್ಮೆ ದೇವರ ಬೇಡು

ಬೇಡುತ ಒಮ್ಮೆ ಹರಿ ನಾಮ ಹಾಡು 

ಕಾಪಾಡುವನು ದೇವರು ನೋಡು


*********ರಚನೆ *********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35