ಬಾಡಿದ ಹೂವು
ನನ್ನೆದೆಯ ಬಾಂಧಳದಿ
ಚಿಗುರಿದ ಗಿಡದಿ ನಕ್ಕ ಮೊಗ್ಗು ನೀನು
ಅರಳುವ ಒಳಗೆ ಮುದುಡಿದೆ
ಕಟ್ಟಿದ ಕನಸುಗಳು ಕರಗಿದೆ
ಭಾವನೆಗಳ ಬಳ್ಳಿಯಲಿ
ಬಳುಕುವ ಬಣ್ಣ ಸೋರಗಿದೆ
ಯಾರ ಕಣ್ಣು ನಿನ್ನ ಸೋಕಿತು
ಮೂಡಿಯುವಾಸೆ ಮನದಿ
ಮೂಡಿತೋ
ದುಂಬಿಯೊಂದು ನಿನ್ನ ಹುಡುಕಿತೋ
ಅರಿಯದಾದೆ ನಿನ್ನ ನೆನಪಲಿ ನಾನು
ಮನದಿ ಮನೆ ಮಾಡಿ ನಿನ್ನ ತಂದಿಡುವಾಸೆ ನನಗೆ
ನೂರೆಂಟು ತುಮುಲ ಒಳಗೊಳಗೇ
ಏಕೆ ಬಾಡಿದೆ ನೀನು
ನಿನ್ನ ಕೈಡಿದ ನನ್ನ ಕೈಯಲ್ಲಿ ಕೆಂಪು ಕಾರಂಜಿ
ತಿಂದಗಾಯಿತು ನಿನ್ನ ನೋಡಿ ಗುಳಗಂಜಿ
ನೋವು ಮನವ ಕದಡಿದೆ
ಕಣ್ಣೀರು ಕಂಬನಿ ಮಿಡಿದಿದೆ
ಭಾವನೆಗಳು ಬತ್ತಿದೆ
ಜೀವವೇ ಸುಮ್ಮನೆ ಸೊರಗಿದೆ
ಎದೆಯಾಳದಿ ಕನಸ್ಸು ಕೊಳೆತಿದೆ
ಹನಿಯೊಂದು ಹಾಗೆ ಜಾರಿದೆ
ನನ್ನೆದೆಯ ಬಾಂಧಳದಿ
ಚಿಗುರಿದ ಮೊಗ್ಗು ನೀನು
ಅರಳುವ ಒಳಗೆ ಮುದುಡಿದೆ
***********ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment