ಆಸೆ ನೀನು




ಹೇ ಹೇ

ಮನದ ಆಸೆ ನೀನು 

ನನ್ನ ಕನಸು ನೀನು 

ಹೃದಯ ಗೆದ್ದ ಗೆಳೆಯ ನೀನು 


ಬಾಳಲಿ ಬಂದ

ಸವಿ ಕನಸು ನೀನಾಗಿ

ಹೃದಯದಿ ಮಿಡಿತ

ನೀನಾಗಿ

ನನ್ನ ಪ್ರೀತಿ ತೇರಾಗಿ

ಜಾತ್ರೇಲಿ ನನ್ನ ಜೊತೆಯಾಗಿ 


ಮನದಿ ನಿನ್ನಯ ಉದಯ

ಮರೆತೇನು ಬೆಳಗೋ ರವಿಯ

ಕಂಡೆನು ಒಲವ ಸವಿಯ

ನೀನೆ ನನ್ನಯ ಇನಿಯ


ಹೇ ಹೇ

ಮನದ ಆಸೆ ನೀನು 

ನನ್ನ ಕನಸು ನೀನು 

ಹೃದಯ ಗೆದ್ದ ಗೆಳೆಯ ನೀನು 


ಬದುಕು ಒಂದು

ಪ್ರೀತಿಯ ಸಂತೆ

ಬಾಳುವ ನಾವು

ಮರೆತು ಚಿಂತೆ

ನಗುವ ಮರೆತು

ನೋವಿನ ಕಂತೆ


ಹೇ ಹೇ 

ನನ್ನಯ ಉಸಿರು ನೀನು 

ಬಾಳಿನ ಹಸಿರು ನೀನು 

ಪ್ರೀತಿಗೆ ಹೆಸರು ನೀನು 



***********ರಚನೆ *******

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ನೋವು ತುಂಬಿ

ಹಣತೆ ಆಳುತಿದೆ

Author biography of Chandrashekhar Channapura Halappa