ಮಳೆ ಹನಿ
ಮುಂಗಾರು ಮಳೆಗೆ
ಈ ದೇಹ ನೆನೆದಿದೆ
ನಿನ್ನ ಜೊತೆ ಕೂಡಿ
ಕನಸು ಕುಣಿದಿದೆ
ಮೈಗೆ ಮೈ ತಾಗಿ
ಮಿಂಚೊನ್ದು ಮೂಡಿದೆ
ಕಣ್ಣ ಸನ್ನೆಯಲಿ
ಏನೇನೊ ಬೇಡಿದೆ
ತುಟಿ ಅಂಚಲಿ
ಸುರಿವ ಜೇನೊಂದು ಕೇಳಿದೆ
ಮನಸು ಮನಸು ಬೆರೆತು
ಪ್ರೀತಿ ಹಾಡು ಹಾಡಿದೆ
ಹೃದಯದಲಿ ಏಕೊ
ನದಿಯೊಂದು ಓಡಿದೆ
ಏಕೊ ಸುಡುತಿದೆ ದೇಹ
ಬಾರೆ ನೀನು ಸನಿಹ
ತಾಳೇನು ಇನ್ನು ವಿರಹ
ಬರೆಯುವೆ ಪ್ರೀತಿ ಬರಹ
ಮನದ ಹಾಳೆಯಲಿ
ಮೂಡಿದ ಚಿತ್ರ ನೀನು
ಕಣ್ಣ ರೆಪ್ಪೆಯಲಿ
ಗೀಚಿದ ಪ್ರೇಮ ಪತ್ರ ನೀನು
ನಿನ್ನ ಒಲವ ಬೆಂಕಿಯಲ್ಲಿ
ಹನಿವ ಮಳೆ ಹನಿಗೆ
ಕರಗೋ ಕೆಂಡ ನಾನು
ನೋಡುತ ಭೂಮಿ ಭಾನು
***********ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Super
ReplyDelete