ಬಾರೋ ಚೆಲುವ
ಹೇ ತನ ನಾನಾ ನನಾ
ತನ ನಾನಾ ನನಾ
ಬಾರೋ ಬಾರೋ ಚೆಲುವ
ಕೊಡುವೆ ನಿನಗೆ ಮನವ
ಜಗವ ನಾವು ಗೆಲುವ
ನೋವ ಮರೆತು ಕುಣಿವ
ಪ್ರೀತಿಯಲಿ ಹೃದಯ ಕರೆದಿದೆ
ನೀನೇ ನನ್ನ ಕನಸು ಎಂದಿದೆ
ನೂರೆಂಟು ಆಸೆ ತಂದಿದೆ
ಮನವೆಕೋ ಒಲವ ಸವಿಯ
ಕೇಳಿದೆ
ಎಳು ಹೆಜ್ಜೆಯಲಿ ಗಂಟಾದೆ
ನೀನು
ಸ್ವಪ್ತ ಸ್ವರದಲ್ಲಿ ಹಾಡಾದೆ
ನೀನು
ನನ್ನ ಜೀವಕೆ ಉಸಿರಾದೆ
ನೀನು
ಈ ಬಾಳಲಿ ನಂಟಾದೆ ನೀನು
ಬಾರೋ ಬಾರೋ ಚೆಲುವ
ಕೊಡುವೆ ನಿನಗೆ ಮನವ
ಜಗವ ನಾವು ಗೆಲುವ
ನೋವ ಮರೆತು ಕುಣಿವ
ನೂರು ಜನ್ಮಕೂ ನೀನೆ
ನನ್ನ ಇನಿಯ
ಏಕೆ ನೋಡುವೆ ಬಾರೋ
ನನ್ನ ಗೆಳೆಯ
ಹೃದಯ ಬಡಿದಿದೆ ಕೇಳು
ಆ ನುಡಿಯ
ಹರೆಯ ಕುಣಿದಿದೆ ಬಾರೋ
ನೋಡು ಸಿಹಿಯ
ಕಣ್ಣ ನೋಟ ಮಿಂಚಂತೆ
ಬಂದು
ಮನದ ಮನೆಯಲಿ
ಮಳೆಯ ತಂದು
ಪ್ರೀತಿ ಹನಿಯಲಿ ನಾನು
ಮಿಂದು
ನಿನ್ನ ಕೂಗಿದೆ
ಬಾರೋ ಬಾರೋ ಚೆಲುವ
ಕೊಡುವೆ ನಿನಗೆ ಮನವ
ಜಗವ ನಾವು ಗೆಲುವ
ನೋವ ಮರೆತು ಕುಣಿವ
ಹೇ ತನ ನಾನಾ ನನಾ
ತನ ನಾನಾ ನನಾ
**************ರಚನೆ *****
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment