ಗೆಳತಿ ನೀ ನಗಬೇಕು




ನಗಬೇಕು ಗೆಳೆತಿ ನೀ ನಗಬೇಕು

ನನ್ನೆದೆಯ ತೋಟದಲ್ಲಿ

ಮಲ್ಲಿಗೆಯ ಗಿಡವಾಗಿ

ಮೋಗ್ಗೊಂದು ಅರಳಿದಂತೆ

ನೀ ನಗಬೇಕು


ನಗಬೇಕು ಗೆಳೆತಿ ನೀ ನಗಬೇಕು

ಕನಸ್ಸುಗಳು ಮುದುಡಿದರು 

ಮನಸ್ಸುಗಳು ಕದಡಿದರು 

ಹರಿವ ಜರಿಯಂತೆ

ನೀ ನಗಬೇಕು


ನಗಬೇಕು ಗೆಳೆತಿ ನೀ ನಗಬೇಕು

ದೇಹಕೆ ಅವರಿಸಿದ ಮುಪ್ಪು

ಮುಖದ ತುಂಬಾ ಸುಕ್ಕು

ಕಾಂತಿಹೀನ ಕಣ್ಗಳು

ಬಿರುಕಿನ ಕೆಂಪು ತುಟಿ ಬಿಟ್ಟು 

ಹೊಳೆವ ಹಲ್ಲಿನಂತೆ

ನೀ ನಗಬೇಕು


ನಗಬೇಕು ಗೆಳೆತಿ ನೀ ನಗಬೇಕು

ಇರುಳ ಕತ್ತಲೆಯಲಿ

ಆಕಾಶದ ಊರಿನಲ್ಲಿ

ನಕ್ಷತ್ರಗಳ ಮನೆಯಲಿ

ಚಂದ್ರ ನಕ್ಕಂತೆ

ನೀ ನಗಬೇಕು


ನಗಬೇಕು ಗೆಳೆತಿ ನೀ ನಗಬೇಕು

ಇರುಳ ಕತ್ತಲೆ ಮನೆಯಲಿ

ಮನಸ್ಸುಗಳು ಕುಣಿವ ಖುಷಿಲಿ 

ಬೆಳಕು ಹುಡುಕುವ ಬರದಿ

ಊರಿವ ದೀಪದ ಹಣತೆಯಂತೆ

ನೀ ನಗಬೇಕು


ನಗಬೇಕು ಗೆಳೆತಿ ನೀ ನಗಬೇಕು

ಭೂತಾಯಿಯ ಮಡಿಲಲ್ಲಿ

ನದಿಗಳ ಒಡಲಲ್ಲಿ

ಹಸಿರು ಕಾಣುವ ರೀತಿ

ನೀ ನಗಬೇಕು


ನಗಬೇಕು ಗೆಳೆತಿ ನೀ ನಗಬೇಕು

ನಮ್ಮೂರ ಜಾತ್ರೆಯಲಿ

ಬಸವಣ್ಣನಾ ಬೀದಿಯಲ್ಲಿ

ದೇವರ ಗುಡಿಗೆ ಎಳೆದ

ಸೀರಿಯಲ್ ಸೆಟ್ ಬೆಳಕಂತೆ

ನೀ ನಗಬೇಕು


ನಗಬೇಕು ಗೆಳತಿ ನೀ ನಗಬೇಕು

ಹಸಿರು ಮೈಯ್ದು ಆಕಳು

ಕರುವನ್ನು ಇಯ್ದು

ಕರು ಕುಡಿವ ಬಿಳಿ ಕೆನೆ ಹಾಲಂತೆ

ನೀ ನಗಬೇಕು


ನಗಬೇಕು ಗೆಳತಿ ನೀ ನಗಬೇಕು

ಮನವು ನೋವಿಂದ ಬೆಂದು

ದುಃಖವ ಹೊತ್ತು ತಂದರು 

ಹೊಳೆವ ಕಣ್ಣೀರ ಹನಿಯಂತೆ

ನೀ ನಗಬೇಕು 


********ರಚನೆ ********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20