Posts

Showing posts from July, 2022

ಬೆಂಕಿಗಾಹುತಿ

Image
ಒಳಗೊಳಗೇ ಕುದಿಯುತಿದೆ ಬೆಂಕಿಯ ಒಡಲು  ಆ ಮುಗಿಲು ಕಪ್ಪಿಟು ಉಗಿಯುತಿದೆ ಕಾರ್ಮೋಡಕೆ ಹೊಗೆಯ ಬುಗಿಲು ಉರೊಂದು ಮಸಣದ ಕೇರಿ ಸುಟ್ಟ. ಕಪ್ಪಿಟ್ಟ. ರಕ್ತ ಹೆಪ್ಪು ಗಟ್ಟಿ ನೋಡತ ಕಣ್ಣೀರ ಹನಿಗಳ ಕಡಲು ಆಸೆಗಳು ಹೂತಿಟ್ಟ ಸ್ಮಶಾನ ರೋಧಿಸಿದೆ ಮರ ಗಿಡ ಬಳ್ಳಿ ಚಿಟ ಪಟ, ಕೊತ ಕೊತ ಕುದಿದು ಕಾಡಲ್ಲಿ ಹರೆ ಬರೆ ಬೆಂದ ಪ್ರಾಣಿಗಳ ಕಣ್ಣೀರು. ನೆತ್ತರು ಸುರಿದು ರಕ್ಷಸನಂತೆ ನಗುವ ಕೆಂಪು ಬೆಂಕಿ ನಂದಿಸಲು ತಿಣು ಕಾಡಿದ ಫೈರ್ ಇಂಜಿನ್ ಚಿಮ್ಮತಿದೆ ನೀರು ಆಕಾಶಕೆ ನುಂಗುತಿದೆ ನೀರ ಕೆಂಪು ಕೆನ್ನಾಲಗೆ ಮನದಿ ಬೆಂದ ದೇಹದ ವಾಸನೆ ಕಪ್ಪಾನೆಯ ಹೊದಿಕೆಯ ಹುಟ್ಟು ಕೆಂಪನೆಯ ಸೀರೆಯ ಹುಟ್ಟ ರೀತಿ ಕೇಳುವರು ಯಾರು ಗೋಳು ಸುಡಿತಿದೆ ಜೀವ ರಾಶಿಗಳು ಕೆಂಡಾಡೋಕುಳಿಯಲ್ಲಿ ಮಿಂದು ರಕ್ತವು ಜಿನುಗಿ ಬೆಂದು, ನೊಂದು ನೀರಿಗಾಗಿ ಬೇಡಿದೆ ಪ್ರಾಣಿ ಕಾಣದ ಕಾಡಲ್ಲಿ ಹಸಿದು ಬಸಿದ ಬಯಕೆಗಳು ಕೊಂದು ಬಾಡಿದೆ ದೇಹ  *********ರಚನೆ *********** ಡಾ. ಚಂದ್ರಶೇಖರ. ಸಿ. ಹೆಚ್

ಬೆಂಗಳೂರು ಹುಡುಗಿರ ಸೂಪರ್ ಕಾಣಣ್ಣ

Image
ಪೆಗ್ ಮೇಲೆ ಪೆಗ್ ಕುಡಿದು ಒಮ್ಮೆ ಹಾಗೆ ಗಾಂಜಾ ಹೊಡೆದು ತೂರಾಡೋ ಹುಡುಗೀರ್ ನೋಡಣ್ಣ ಬ್ರಿಗೇಡ್ ರೋಡ್ ರಾತ್ರಿಯಲ್ಲಿ ಚೆಂದ ಕಾಣಣ್ಣ ರೋಡ್ ತುಂಬಾ ಲೈಟ್ ನೋಡು ಹುಡುಗೀರ್ ಬಣ್ಣ ವೈಟ್ ನೋಡು ಸೀರೆ ಎಲ್ಲಿ ಕಾಣೆ ನೋಡಣ್ಣ ಬ್ರಿಗೇಡ್ ರೋಡ್ ರಾತ್ರಿಯಲ್ಲಿ ಚೆಂದ ಕಾಣಣ್ಣ ಹುಡುಗೀರ ಏಕೊ ತುಂಬಾ ಸ್ವೀಟ್  ಲುಕ್  ಹಾಗೆ ಕ್ಯೂಟ್  ಕಿಕ್ಕು ಹಾಗೆ ಲೈಟ್ ನೋಡು ಒಮ್ಮೆ ಬಂದು ತಮಣ್ಣ  ಬ್ರಿಗೇಡ್ ರೋಡ್ ರಾತ್ರಿಯಲ್ಲಿ ಚೆಂದ ಕಾಣಣ್ಣ ಮಾತಿನಲ್ಲಿ ನಶೆ ಪ್ರೀತಿಯಲ್ಲಿ ಉಷೆ ಕಣ್ಣಿನಲ್ಲಿ ಚೂರಿ  ಇವಳು ತುಂಬಾ ಪ್ಯಾರಿ ಜೀನ್ಸ್ ಚಡ್ಡಿ  ನಾರಿ ನೋಡಣ್ಣ ಬ್ರಿಗೇಡ್ ರೋಡ್ ರಾತ್ರಿಯಲ್ಲಿ ಚೆಂದ ಕಾಣಣ್ಣ ಸೈಟ್ ಮೇಲೆ ಸೈಟ್ ಕೊಟ್ಟು ಹುಡುಗರ ಹೃದಯ ಅರಿದು ಬಿಟ್ಟು ನಕ್ಕು ನಡೆವ ಸುಂದರಿ ನೋಡಣ್ಣ ಬ್ರಿಗೇಡ್ ರೋಡ್ ರಾತ್ರಿಯಲ್ಲಿ ಚೆಂದ ಕಾಣಣ್ಣ ನೋಡಕೆನೆ ತುಂಬಾ ಹಾಟ್ Perfume ಏಕೊ ತುಂಬಾ ಗಾಟು ಟಚ್ ಮಾಡಿದ್ರೆ ಸ್ಟಾರ್ಟ್ ಕಾಣಣ್ಣ ಬ್ರಿಗೇಡ್ ರೋಡ್ ರಾತ್ರಿಯಲ್ಲಿ ಚೆಂದ ಕಾಣಣ್ಣ ಪೆಗ್ ಮೇಲೆ ಪೆಗ್ ಕುಡಿದು ಒಮ್ಮೆ ಹಾಗೆ ಗಾಂಜಾ ಹೊಡೆದು ತೂರಾಡೋ ಹುಡುಗೀರ್ ನೋಡಣ್ಣ ಬೆಂಗಳೂರು ಹುಡುಗಿರ ಸೂಪರ್ ಕಾಣಣ್ಣ *********ರಚನೆ *********** ಡಾ. ಚಂದ್ರಶೇಖರ. ಸಿ. ಹೆಚ್

ಮಳೆ ಹನಿ

Image
ಹನಿ ಹನಿ ಹನಿ ಹನಿ ಚಿಟ ಪಟ ಮಳೆ ಹನಿ ಕಣ್ಣಲೇ ಸುಡುತಿದೆ ವಿರಹದ ಪ್ರತಿ ಧ್ವನಿ ನೋಟ ನೋಟ ಕಲೆತು ನನ್ನೇ ನಾನು ಮರೆತು ಬೀಳುವ ಮಳೆಗೆ ಕಣ್ಣು ಕಣ್ಣು ಬೆರೆತು ಪ್ರೀತಿ ಬಂತು ಹಾಗೆ ಮಳೆ ಹನಿ ನಿಂತ ಮೇಗೆ ಹೃದಯದಲ್ಲಿ ನಡುಕ ಕೈ ಒಮ್ಮೆ ಇಡುಕ ಒಲವು ನಿನ್ನ ಕರೆದು ನುಡಿಯಿತು ಇಂದು ಬಾರೆ ನನ್ನ ಚೆಲುವೆ ಒಲವ ಮಳೆಯಲೇಕೆ ನೆನೆವೆ ಕೈ ಇಡಿದು ನಡೆವೆ ಮನದ ಆಸೆ ಇಂದು ಮಿಂಚಿನಂತೆ ಬಂದು ಕೂಗಿ ಕೂಗಿ ಕರೆಯಿತು ಲವ್ ಯು ಎಂದು ಹೇಳಿತು ತಾರೆಗಳ ತೋಟ ತಾಗಿತ್ತು  ನೋಟ ನನ್ನ ಎದೆಯ ಮೇಲೆ ಪ್ರೀತಿಯ ಆಟ  ಕೈಲಿ ಇಡಿದ ಕೊಡೆ ಮಳೆ ನೀಲ್ತು ನಡೆ ಪ್ರೀತಿ ಏಕೊ ಮೌನ ನಮ್ಮ ನೋಟ ಕವನ  ಹನಿ ಹನಿ ಹನಿ ಹನಿ ಚಿಟ ಪಟ ಮಳೆ ಹನಿ ಕಣ್ಣಲೇ ಸುಡುತಿದೆ ವಿರಹದ ಪ್ರತಿ ಧ್ವನಿ ***********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

2. ಹಾರ್ಮೋನುಗಳು ನಮ್ಮ ಭವಿಷ್ಯ ರೂಪಿಸುವವೇ

Image
ಹಾರ್ಮೋನಗಳು ರಾಸಾಯನಿಕ ಸಂದೇಶವಾಹಕಗಳು ಅವುಗಳು ನೇರವಾಗಿ ರಕ್ತದಲ್ಲಿ ಸ್ರವಿಸಿ. ರಕ್ತದ       ಮೂಲಕ    ಹಾರ್ಮೋನ್ಗಳು ನಮ್ಮ ದೇಹದ ಅಂಗಗಳು ಮತ್ತು ಅಂಗಾಂಶಗಳಲ್ಲಿ ತಮ್ಮ ಕೆಲಸವನ್ನು ಮಾಡುತ್ತವೆ. ಈ ಹಾರ್ಮೋನಗಳು ಮನುಷ್ಯನ ದೇಹದಲ್ಲಿ ಹಲವಾರು ಪರಿಣಾಮಗಳನ್ನು ಉಂಟು ಮಾಡುತ್ತವೆ. 1) ಪ್ರಚೋದನೆ ಮತ್ತು ಬೆಳವಣಿಗೆಯ ಪ್ರತಿಬಂದ 2) ಎಚ್ಚರ ನಿದ್ದೆ ಚಕ್ರದ ನಿರ್ವಹಣೆ 3) ಮನಸ್ಥಿತಿಯ ಏರುಪೇರು 4) ರೋಗನಿರೋಧಕ  ವ್ಯವಸ್ಥೆಯ ಸಕ್ರಿಯ ಅಥವಾ ಪ್ರತಿಬಂದ 5) ಚಯಾಪಚಯ ಕ್ರಿಯೆಯ ನಿಯಂತ್ರಣ 6) ಮಿಲನ, ಹೋರಾಟ, ಪಲಾಯನ ಕ್ರಿಯೆಗೆ ಸಜ್ಜುಗೊಳಿಸುವುದು 7) ದೇಹವನ್ನು ನಮ್ಮ ಜೀವನದ ಹೊಸ ಹಂತಗಳಾದ ಪ್ರೌಢವಸ್ಥೆ, ಪೋಷಕ್ತವ, ಋತುಬಂದ 8) ಸಂತಾನೋತ್ಪತ್ತಿ  ಚಕ್ರದ ನಿಯಂತ್ರಣ 9) ಹಸಿವಿನ ಕಡುಬಯಕೆಗಳು ಹಾರ್ಮೋನಗಳನ್ನು ಆರ್ನಲ್ಡ್ ಆಡೋಲ್ಫ್ ಬೆರ್ಥಡ್ (1849), ಚಾರ್ಲ್ಸ್ ಫ್ರಾನ್ಸಿಸ್ ಢಾರ್ವಿನ (1880), ಬೇಲಿಸ್ ಮತ್ತು ಸ್ಟಾರ್ಲಿಂಗ್ (1902) ಅನ್ವೇಷಣೆ ಮಾಡಿದ್ದಾರೆ. ನಮ್ಮ ದೇಹದಲ್ಲಿ ಹಾರ್ಮೋನಗಳ ಪಾತ್ರ ದೊಡ್ಡದು ಏಕೆಂದರೆ ಅವುಗಳ ಸ್ರವಿಸುವಿಕೆ ನಮ್ಮ ದೇಹದಲ್ಲಿ ಸಾಕೋಷ್ಟ್ಟು ಪರಿಣಾಮಗಳನ್ನು ಉಂಟು ಮಾಡುತ್ತವೆ. ಹೀಗೆ ಹಾರ್ಮೋನಗಳು ಬಾಲ್ಯದಿಂದ ಪ್ರೌಢವಸ್ಥೆಯ ತನಕ ಅವುಗಳು ನಮ್ಮ ದೇಹದಲ್ಲಿ ವಿಧವಿದ ಕಾರ್ಯಗಳನ್ನು ನಿರ್ವಹಿಸುತ್ತವೆ. ಮನುಷ್ಯನ ದೇಹದಲ್ಲಿ ವಿವಿಧ ಹಾರ್ಮೋನ್ಗಗಳು  ಮತ್ತು ಲೈಂಗಿಕಹಾರ...

ವಚನಗಳು -30

Image
ಕಾಯಕವು ನನ್ನ ಪ್ರಾಣ. ಕಾಯಕವೇ ನನ್ನ ಉಸಿರು  ಕಾಯಕವೇ ನನ್ನ ಖುಷಿ, ಕಾಯಕವೇ ನನ್ನ ದೇವರು  ಕಾಯಕವೇ ನನ್ನ ಗೆಲುವು, ಕಾಯಕವೇ ನನ್ನ ಬದುಕು ಕಾಯಕವೇ ನನ್ನ ಫಲ, ಕಾಯಕವೇ ನನ್ನ ಬಲ ಕಾಯಕದಿ ನಾನು ಸರ್ವಸ್ವ ಕಂಡೆನು ನನ್ನೊಡೇಯಾ ನಮ್ಮ ಬಸವಣ್ಣ ನುಡಿವ ಮಾತಿನಲ್ಲಿ ಬಸವಣ್ಣನ ಕಾಣಿರೋ ನೋಡುವ ನೋಟದಲ್ಲಿ ಬಸವಣ್ಣನ ಕಾಣಿರೋ ಉಣ್ಣುವ ಊಟದಲ್ಲಿ ಬಸವಣ್ಣನ ಕಾಣಿರೋ ಪೂಜುವ ಲಿಂಗದಲಿ ಬಸವಣ್ಣನ ಕಾಣಿರೋ  ಮಾಡುವ ಕೆಲಸದಲಿ ಬಸವಣ್ಣನ ಕಾಣಿರೋ ಕಾಯುವನು ನಮ್ಮ ಬಸವಣ್ಣ ನೋಡಿರೋ ತಂದೆ ತಾಯಿಗಳಿರ ಜಂಗಮ  ಲಿಂಗಾಯಿತರಿಗೂ ಲಿಂಗವೆ ದೇವರು ಮಾದರ ಲಿಂಗಯಿತರಿಗೂ ಲಿಂಗವೆ ದೇವರು ಕುರುಬ ಲಿಂಗಾಯಿತರಿಗೂ ಲಿಂಗವೆ ದೇವರು ವೀರಶೈವ ಲಿಂಗಾಯಿತರಿಗೂ ಲಿಂಗವೆ ದೇವರು ಸಕಲ ಜಾತಿ ಲಿಂಗಾಯಿತರಿಗೂ ಲಿಂಗವ ಹಿಡಿದ   ಕಾಯಕವೇ ಕೈಲಾಸದ  ಯೋಗಿ ನಮ್ಮ ಬಸವಣ್ಣನೆ ದೇವರು  ****************ರಚನೆ **************          ಡಾ. ಚಂದ್ರಶೇಖರ. ಸಿ. ಹೆಚ್ 

ವಚನಗಳು -29

Image
ಕಾಯವು ಭಕ್ತಿಯೇಂದೊಡೆ, ಜೀವವು ಭಕ್ತಿಯೆಂದೊಡೆ ಪ್ರಾಣವೂ ಭಕ್ತಿಯೆಂದೊಡೆ, ಧನವು ಭಕ್ತಿಯೆಂದೊಡೆ ಭಾವವು ಭಕ್ತಿಯೆಂದೊಡೆ, ದೇಹವು ಭಕ್ತಿಯೆಂದೊಡೆ ಕಾಯಕವ ಕೈ ಮುಗಿದು ಮಾಡು ಭಕ್ತಿಯ ಪರಮಾನಂದ ನೋಡೆಂದ ನಮ್ಮ ಬಸವಣ್ಣ ನಮ್ಮಯ ಹೊಟ್ಟೆ ಕಿಚ್ಚು ನಮ್ಮನೆ ಸುಟ್ಟಿತು  ಮಾಡಿಕೊಂಡ ಗಾಯ ಮನವ ಹುಣ್ಣಗಿಸಿತು ಸುಖವು ಎಲ್ಲಾ ಕೇಡು ದುಃಖಗಳ ನುಂಗಿತ್ತು ಕಾಯಕವು ಎನ್ನ ಜೀವನವ ಪಾವನ ಮಾಡಿತು ನಮ್ಮ ಬಸವಣ್ಣ ಕೋಲು ಮುರಿದ ಕಡ್ಡಿಯಂತೆ,ನೇಣು ಬಿಗಿದ ಗೊಂಬೆಯಂತೆ ಈ ಜೀವ ನೀ ಆಡಿಸಿದ ಬುಗುರಿಯಂತೆ ನೀ ನುಡಿಸಿದಂತೆ ನುಡಿವೆನು, ಕುಣಿಸಿದಂತೆ ಕುಣಿವೆನು ನಡೆಸಿದಂತೆ ನಡೆವೆನು, ನೀ ಇರಿಸಿದಂತೆ ಇರುವೆನು ಕಾಯಕವ ಕೈ ಮುಗಿದು ಮಾಡುವೆನು ನಮ್ಮ ಬಸವಣ್ಣ ****************ರಚನೆ *****************            ಡಾ. ಚಂದ್ರಶೇಖರ. ಸಿ. ಹೆಚ್ 

1. ಹಣವೇ ಜೀವನವೇ

Image
ಜೀವನ ಸಾಗಿಸಲು ಹಣ ತುಂಬಾ ಮುಖ್ಯ ನಮ್ಮ ಸಕಲ ಆಸೆ ಆಕಾಂಕ್ಷೆಗಳನು ಈಡೇರಿಸಿಕೊಳ್ಳಲು ಹಣ ಆಗತ್ಯ. ಹಣವನ್ನು ದುಡಿಯುವುದಕ್ಕಾಗಿ ಜೀವನ ಮಡುಪಿಟ್ಟರೆನಮ್ಮ ಅತ್ಯ ಅಮೂಲ್ಯ ಸಂತೋಷದ ಕ್ಷಣಗಳನ್ನು ನಾವು ಕಳೆದು ಕೊಳ್ಳಬೇಕಾಗುತ್ತದೆ. ನಾವು ಸಂಪಾದಿಸುವ ಹಣ  ಸರಿಯಾದ ಕಾಲದಲ್ಲಿ ನಮ್ಮ ಸಂತೋಷಕ್ಕೆ ವಿನಿಯೋಗವಾದರೆ ಎಷ್ಟು ಚೆಂದ ಅಲ್ಲವೆ. ಇಂದಿನ ಪೀಳಿಗೆಯ ಜನಗಳಾದ ನಾವು ಶ್ರಮಪಟ್ಟು ಹಣವನ್ನು ದುಡಿದು ಸಮಯವಿಲ್ಲದೆ ಚಿಂತೆಯಲಿ ಮುಳುಗಿ ನೋವಿನಿಂದ ಜೀವನವನ್ನು ಸಾಗಿಸುತ್ತಿದ್ದೇವೆ. ಈಗ ಒಬ್ಬ ಕೋಟ್ಯಧಿಪತಿಯ ಕಥೆ ಹೇಳಲು ಹೊರಟಿದ್ದೇನೆ ಈತನೆ ಕೆಂಟುಕಿ ಚಿಕನ್ ಫ್ರೈ ಮಾಲೀಕ ಕಲನೆಲ್ ಹೊರಲ್ಯಾಂಡ್ ಡೇವಿಡ್ ಸ್ಯಾಂಡರ್ಸ್ ಹುಟ್ಟಿದ್ದು ಸೆಪ್ಟೆಂಬರ್ 9-1890, ಇಂಡಿಯಾನ ಹೆನ್ರಿವಿಲ್ಲೆ ಅಮೇರಿಕಾ, ಇವರಿಗೆ ಇಬ್ಬರು ಹೆಂಡತಿಯರು ಮೂರು ಜನ ಮಕ್ಕಳು. ಸ್ಯಾಂಡರ್ಸ್ನ ಜೀವನ ಅಷ್ಟು ಸಮಾಧಾನಕರದ ಸ್ಥಿತಿಯಲ್ಲಿ ಇರಲಿಲ್ಲ. ತನ್ನ ಜೀವನ ಸಾಗಿಸಲು ಹಲವಾರು ಹುದ್ದೆಗಳನ್ನು ಮಾಡಿದ್ದಾನೆ, ಸ್ಟೀಮ್ ಇಂಜಿನ್ ಸ್ಟಾಕರ್, ಇನ್ಸೇಶುರೆನ್ಸ್ ಸೇಲ್ಸ್    ಮ್ಯಾನ್ ಮತ್ತು ಫಿಲ್ಲಿಂಗ್ ಸ್ಟೇಷನ್ ಆಪರೇಟರ     ಹೀಗೆ     ಸಾಲು    ಸಾಲು      ಉದ್ಯೋಗ ಮಾಡಿದ್ದರು ಯಾವುದು ಆತನಿಗೆ ನೇರವಾಗಲಿಲ್ಲ ಸ್ಯಾಂಡರ್ಸ್ 40 ವರ್ಷ ವಯಸ್ಸಿನಲ್ಲಿ ಉತ್ತರ ಕಾರೋಲಿನ ಕೆಂಟುಕಿ ನಗರದ ರಸ್ತೆ ಬದಿಯಲ್ಲಿ ಚಿಕನ್ ಫ್...

ನಾನು ಗೆಲ್ಲಬಹುದೇ??? -ವ್ಯಕ್ತಿತ್ವ ವಿಕಾಸನ

Image
ನಾನು ಗೆಲ್ಲಬಹುದೇ??? ವ್ಯಕ್ತಿತ್ವ ವಿಕಾಸನ (personality devolopment ) ಲೇಖಕರು  ಡಾ. ಚಂದ್ರಶೇಖರ. ಸಿ. ಹೆಚ್  🌹ಹಾಯ ಗೆಳೆಯರೆ ನಮಸ್ಕಾರ 🌹 ನಾನು ಇಂದಿನಿಂದ ವ್ಯಕ್ತಿತ್ವ ವಿಕಾಸನಕೆ ಸಂಬಂಧಪಟ್ಟಂತೆ ಪುಸ್ತಕವನ್ನು ಬರೆಯುತ್ತಿದ್ದೇನೆ. ಹಾಗು ಮೊದಲು ಬ್ಲಾಗ್ನಲ್ಲಿ ಪ್ರಕಟಿಸುತ್ತಿದ್ದೇನೆ, ಓದುವುದರ ಮೂಲಕ ನಿಮ್ಮ ಪ್ರೋತ್ಸಾಹವನ್ನು ನಾನು ಕೇಳುತ್ತಿದ್ದೇನೆ. ಹಾಗು ಕಾಮೆಂಟ್ ಮಾಡಿ ನಿಮ್ಮ ಅನಿಸಿಕೆಯನ್ನು ತಿಳಿಸಿ. ಇಂತಿ ನಿಮ್ಮವನು ಡಾ. ಚಂದ್ರಶೇಖರ. ಸಿ. ಹೆಚ್ ಪರಿವಿಡಿ 1. ಹಣವೇ ಜೀವನವೇ 2. ಹರ್ಮೋನುಗಳು ನಮ್ಮ ಭವಿಷ್ಯ ರೂಪಿಸುವುದೇ 3. ಓದುವುದು ಹೇಗೆ 4. ಜ್ಞಾಪಕದಲ್ಲಿಟ್ಟು ಕೊಳ್ಳುವುದು ಹೇಗೆ 5. ಬಾಲ್ಯದಿ ದಡ್ಡ ಬುದ್ದಿವಂತನಾದರೆ  6.  ಕಾಲೇಜು ಜೀವನದಿ ಏನು ಕಲಿತೆ 7.  ಶಿಕ್ಷಣದಿ ನಮ್ಮಯ ಬೆಳವಣಿಗೆ  8. ಗೆಲುವು ಎಂದರೇನು 9. ಅಪ್ಪ ಹಾಕಿದ ಆಲದ ಮರ 10. ಜೀವನದ ಮೌಲ್ಯ 11.  ನಮ್ಮಲ್ಲಿನ ಫ್ಯಾಷನ್ ಹುಡುಕುವುದು ಹೇಗೆ 12. ಸಾವಿರ ದೇವರುಗಳಲಿ ನನ್ನವನಾರು 13. ಧ್ಯಾನದಿಂದ ಮನಸ್ಸಿಗೆ ಶಕ್ತಿ 14. ನಾನು ನಾಯಕ ಆಗಬಲ್ಲೆನೇ 15. ಹದಿಹರೆಯದ ಕಳವಳಗಳು 16.  ನನ್ನಲ್ಲಿ ಒಬ್ಬ ಸೈಕೋ ಇದ್ದರೆ 17. ಪ್ರೀತಿ ಪ್ರೇಮ ಪ್ರಣಯದಿ ಕಲಿತೆ 18.  ಭರವಸೆಯೇ ಬೆಳಕು 19.  ಬದುಕಲು ನೂರು ದಾರಿ 20.  ನಮ್ಮ ನಡೆ ದೈವತ್ವದ ಕಡೆ 21. ದುಶ್ಚಟ್ಟಗಳಿಂದ  ದೂರ 22. ಆಹಾರ ಕ್ರ...

ವಚನಗಳು -28

Image
ಎಲ್ಲಾ ವಿದ್ಯೆಯ ಕಲಿತೆ,ಆಕಾಶದಿ ಹಕ್ಕಿಯಂತೆ ಹಾರಲು ಕಲಿತೆ ಮಂಗಳ ಗ್ರಹದಿ ಸುತ್ತಿದೆ , ಸಮುದ್ರದಿ ಈಜಿದೆ. ದೇಶಗಳನ್ನು ನೋಡಿದೆ, ಕೋಶವನ್ನು ಓದಿದೆ ಯಾವುದನ್ನೂ ಕಲಿತರೇನು, ವಿಧಿ ಬರೆದ ಸಾವನ್ನು ಗೆಲ್ಲಲದೀತೇ..... ನಮ್ಮ ಬಸವಣ್ಣ   ಸಕಲವನು ತಿಳಿದು ಉಪಯೋಗವೇನು ನೂರು ಸ್ತೋತ್ರಗಳನ್ನು ಭಜಿಸಿ ಪ್ರಯೋಜವೇನು ದೇವರಿಗೆ ಪಂಚಾಮೃತ ನೈವೇದ್ಯದಿ ಫಲವೇನು ಸತ್ಸಂಗದಿ ಜ್ಞಾನಿಗಳ ಮಾತು ಕೇಳಿದರೆ ಫಲವೇನು ನಿನ್ನ ನೀ ಅರಿಯದೆ, ಕಾಯಕವ ತಿಳಿ ಕೈ ಇಡಿದು ನಡೆಸುವನು ನಮ್ಮ ಬಸವಣ್ಣ ಭಯ ಭೂತವಾಗಿ. ಕಾಮ ನೆಲೆಯಾಗಿ. ಮದ ಹುಚ್ಚಾಗಿ. ಕ್ರೋದ ಕುದಿಯಾಗಿ ಲೋಭ ನನ್ನ ಹಾಳಿ, ಮತ್ಸರ್ಯ ನನ್ನ ಚುಚ್ಚಿ ಇರಿದು ಕೊಲ್ಲುವಾಗ.... ಮೆಚ್ಚುವ ಕಾಯಕವ ಮಾಡು ಕೈಲಾಸದಿ ನಮ್ಮ ಬಸವಣ್ಣ ಕರೆವನು ****************ರಚನೆ *************            ಡಾ. ಚಂದ್ರಶೇಖರ. ಸಿ. ಹೆಚ್ 

ವಚನಗಳು -27

Image
ಅಜ್ಞಾನ ಮನೆ ಆಳಿದೊಡೆ ಜ್ಞಾನವೆಲ್ಲಿ ಸುಜ್ಞಾನಿ ಸಂಗವಿಲ್ಲದೊಡೆ ಒಳಿತೆಲ್ಲಿ ಭಕ್ತಿಯೇ ಇಲ್ಲದೊಡೆ ದೇವರೆಲ್ಲಿ ಕರ್ಮವೇ ಮನೆ ಕಾಡಿದೊಡೆ ಉಳಿವೆಲ್ಲಿ ಕಾಯಕದಿ ಮನಸ್ಸು ನೆಟ್ಟೋಡೇ ಲಿಂಗದ ನಮ್ಮ ಬಸವಣ್ಣನು ನಗುವನಲ್ಲೀ ಬಲ್ಲೆ ಅಂದೋಡೆ ಬಿಟ್ಟಿತೆ ಅರಿಷಡ್ವರ್ಗ ಒಲ್ಲೆ ಎಂದೊಡೆ ಬಿಟ್ಟಿತೆ ನಮ್ಮ ಅರಿಷಡ್ವರ್ಗ ಒಪ್ಪಿ ಶರಣಾದೊಡೆ ಬಿಟ್ಟಿತೆ ಈ ಅರಿಷಡ್ವರ್ಗ ಗೆಲ್ಲುವೆ ಏನಲು ಕೊಲ್ಲಲು ಬಿಟ್ಟಿತೆ ಅರಿಷಡ್ವರ್ಗ ಕಾಯಕವ ಕೈ ಮುಗಿದು ಮಾಡು ಅರಿಷಡ್ವರ್ಗ ಬಿಟ್ಟೋಗುವುದು ನಮ್ಮ ಬಸವಣ್ಣ ಮನವು ಹಿಂಡಿತಯ್ಯ,  ಕನಸ್ಸು ಕುಕ್ಕಿತಯ್ಯ ಆಸೆ ಹೊಕ್ಕಿತಯ್ಯ, ಜೀವ ಬೆಂದಿತಯ್ಯ ಅರಿಷಡ್ವರ್ಗ ಸುಟ್ಟಿತಯ್ಯ, ಭಾವನೆ ಎಕ್ಕಿತಯ್ಯ ಚಿಂತೆ ತಾಕಿತಯ್ಯ, ಭ್ರಮೆ ಬುಸುಗುಟ್ಟಿತಯ್ಯಾ ಕಾಯಕದ ಅರಿವಿಲ್ಲದವನಿಗೆ ಬದುಕು ಬರೆ ನಮ್ಮ ಬಸವಣ್ಣ  ******************ರಚನೆ ***************                  ಡಾ. ಚಂದ್ರಶೇಖರ. ಸಿ. ಹೆಚ್ 

ವಚನಗಳು -26

Image
ಮನಸ್ಸು ಮಾರ್ಕಟವಾದೋಡೇ ಲಿಂಗ ಮೆಚ್ಚುವುದೇ ಕನಸ್ಸು ಕರ್ಮವಾದೊಡೆ ಲಿಂಗ ಮೆಚ್ಚುವುದೇ ಭಾವಗಳು ಬವಣೆಯಾದರೆ ಲಿಂಗ ಮೆಚ್ಚುವುದೇ ಕೈ ಕಟ್ಟಿ ಕುಳಿತ ಸೋಂಬೇರಿಯಾ ಲಿಂಗ ಮೆಚ್ಚುವುದೇ ಕಾಯಕದ ನೀರಲ್ಲಿ ಕೈ ತೊಳೆ ಮೆಚ್ಚುವನು ಲಿಂಗದ ನಮ್ಮ ಬಸವಣ್ಣ ಕತ್ತಲೆಯ ಕಳೆದೋಡೆ ಬೆಳುಕು ನೋಡ ಅಜ್ಞಾನ ಕಳೆದೋಡೆ ಸುಜ್ಞಾನ ನೋಡ ಇರುಳು ಕಳೆದೋಡೆ ಹಗಲು ನೋಡ ಸತ್ಕಾರವಿದ್ದರೆ ದೇವರ ಸಾಕ್ಷಾತ್ಕಾರ ನೋಡ ಕಾಯಕದಿ ಮನಸ್ಸು ಮಿಂದೆದ್ದರೆ ಭಕ್ತಿನೋಡ ನಮ್ಮ ಬಸವಣ್ಣ ಅಯ್ಯ ಕುರಿ ಕಾಯುವನಿಂದ ಬೆಚ್ಚನೆ ಹೊದಿಕೆ ನನದಾಯಿತು ಕುಂಬಾರನನಿಂದ ತುಂಬಿದ ಧಾನ್ಯ ನನದಾಯಿತು ಅಕ್ಕಸಾಲಿಗನಿಂದ ಹೊಳೆವ ಚಿನ್ನ ನನದಾಯಿತು ಗಾರೆಯವರಿಂದ ನೆಲೆಸುವ ಮನೆ ನನದಾಯಿತು ಇಡಿದ ಕಾಯಕವ ಮಾಡಿ ಲಿಂಗದ ನಮ್ಮ ಬಸವಣ್ಣನ ಅರಿವಾಯಿತು **************ರಚನೆ ******************* ಡಾ. ಚಂದ್ರಶೇಖರ. ಸಿ. ಹೆಚ್ 

ಮುನ್ನುಡಿ

Image
  ಒಡೆದ  ಮನಸ್ಸಿಗೆ ಇಡಿಯಲೇಗೆ ಕನ್ನಡಿಯ ದೇವರು ಬರೆದ ಬದುಕಿಗೆ ಮುನ್ನುಡಿಯ  ಆಡಿಸಿದ ಅಟಿಕೆಯಂತೆ ಜೀವನ  ಓ ಗೆಳೆಯ  ಕೋಲು ಮುರಿಯಲಿಲ್ಲ ಹಾವು ಸಾಯಲಿಲ್ಲ ತಿಳಿ ಗಾದೆಯ ಕಾಲಿ ಹಾಳೆ ಮೇಲೆ ಗೀಚಿದೆ ಕವನ ಒಲವೆ ನನ್ನುಸಿರು ಬದುಕು ನಿನ್ನ ಹೆಸರು  ಕಾಲದ ಕೊಲಮಿಂಚಿಗೆ  ಭೂಮಿ ಹಸಿರು ಜೀವನದಿ ನಗುತಿರು ದುಃಖವ ಮರೆಯುತಿರು ಅನುಭವದಿ ಕಲಿತ ಪಾಠ ಎಲ್ಲಿಯೂ ದೊರಕದು ನೋವಿನಲ್ಲಿ ಮಾಗಿದ ಮನಸ್ಸು ಎಂದು ಸೋಲದು ಸತ್ಯದ ನೆಲೆಯಲಿ ಧರ್ಮ ಸುಳ್ಳು ಎಂಬ ಕರ್ಮ ಮಡಿವಂತಿಕೆಯ ನೆರಳು ಉದುರಿದಂತೆ ಅರಳು ಕಾಣದ ಕೈಯಲ್ಲಿ ಬದುಕಿನ ಸೂತ್ರ ಸುಮ್ನೆ ಬಜಿಸಿದರೆ ಸಿಕ್ಕುವುದೇ ಪಾತ್ರ  ನೋವು ನಲಿವುಗಳ ಪ್ರಪಂಚ ಸುತ್ತಿದೆ ನೇತ್ರ ಕರ್ಮವ ಕಳೆಯಲು ತೀರ್ಥ ಯಾತ್ರ ಕನಸ್ಸುಗಳ  ಗೂಡಲಿ ಬದುಕಿನ ಪಯಣ ಮರೆ ಮಾಚಿದಂತೆ ಒಲವ ತಳಿರು ತೋರಣ ಬಯಕೆಯ ಹೋತ್ತಾ ನಿನ್ನಯ ಚಿತ್ರಣ ಕಣ್ಣು ಮುಚ್ಚಿ ಬಿಡುವ ಹೊಳಗೆ ಜೇವವೇ ಮರಣ  **********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ದೇವರು ಎಲ್ಲಿ ಮಾಟವೆ ಇಲ್ಲಿ

Image
ನನ್ನಮ್ಮ ಮುಂಜಾನೆ ಎದ್ದು ನಿದ್ದೆಯ ಗೆದ್ದು,ಕಣ್ಮುಚ್ಚಿ ಕಣ್ಣೂಜ್ಜಿ  ಹಾಸಿಗೆಯ ಮಡಿಸಿ, ನೀರಿನ ಒಲೆಗೆ ಊರಿ ಹಾಕಿ ಸ್ನಾನದಿ ಮಿಂದೆದ್ದು, ಹೂವು ಕಿತ್ತು ಪೂಜೆಗೆ ತಂದು, ಪೂಜೆಗೆ ಸಕಲವನು ಅಣಿಗೊಳಿಸಿ ಭಕ್ತಿಯಲ್ಲಿ ಬೇಡುವಳು.  ತಂದಿಟ್ಟ ದೇವರುಗಳ ತಿಮ್ಮಪ್ಪ ಕಾಯೋ, ಶಿವನೇ, ಹರನೇ, ಮಂಜುನಾಥನೆ, ಸುಬ್ರಮಣ್ಯನೆ, ಕರಿಬಸವೇಶ್ವರನೇ, ಈಗೆ ಸಾಲು ಸಾಲು ದೇವರು.... ಭಕ್ತಿಯಲಿ ಪೂಜಿ ಹೂವಲ್ಲಿ ಸಿಂಗರಿಸಿ...  ಕರ್ಪೂರದ ಆರತಿಯ ಮಾಡಿ ದೇವರ ನಾಮವನು ಹಾಡಿ ಕರೆವಳು ದೇವರ ಕಷ್ಟವ ನಿಗೂ.  ಮನೆಯವರ ಯೋಗ ಕ್ಷೇಮದಿ ಸಾಗುವಂತೆ ಮಾಡು ದೇವರು ಕಂಡಿಲ್ಲ ಪೂಜೆಯು ನಿಂತಿಲ್ಲ ಯಾರೋ ಮಾಡಿಸಿದ್ದಾರಂತೆ ಮಾಟ ಅಮ್ಮಂಗೆ ಕೈ ಮುಗಿದು ಪಟ್ಟಣದಿ ತಗಡುಗಳು. . ನಿಂಬೆಹಣ್ಣು, ತಾಯತ, ತಾಳಿ, ತಗಡಿನಲಿ  ಬಿಡಿಸಿದ ಕೈ ಮುರಿದ ಗೊಂಬೆ.. ಹಂದಿಯ ಕೂದಲು.  ಹರಿಶಿನ ಕುಂಕುಮ, ತ್ರಿಶುಲ.... ಇಟ್ಟು ಕಳಿಸಿದ್ದಾನೆ  ಪಂಡಿತನು ಮನೆಯ ಹೆಸರ ಹೇಳಿ, ಅದು ಚಲಿಸುತ್ತಿದೆಯಂತೆ ಭೂಮಿಯೊಳಗೆ..... ಲೋಹಗಳಿಗೆ ಭೂಮಿಯಲಿ ಚಲನವುಂಟು......  ಹರಿದು ಬಂದು ನಮ್ಮನೆಯ ಸುಡುತ ಉಂಟು ಗೋಳಿಟ್ಟು ಅತ್ತು ಕರೆದು  ಪಕ್ಕದ ಊರ ದೇವರ ತಂದು ಕೀಳಿಸಿದಳು ಮಾಟಾ.... ಸಿಕ್ಕ ಲೋಹಗಳನ್ನು ಬೆಂಕಿಯಲ್ಲಿ ಸುಟ್ಟು...... ಕಷ್ಟಗಳನ್ನು ದೇವರಿಗೆ ಬಿಟ್ಟು ಬೇಡುತಿಹಳು ಅಮ್ಮ ಮತ್ತೆ ದೇವರ........ ಮತ್ತೆ ಇರಬಹುದೇ ಮಾಟದ ಅಪಸ್ವರ ದೇವರು ಮೇಲೋ ದೆವ್ವವೇ ಮ...

ಸಾಲು ಇರುವೆ

Image
  ಸಾಲು ಸಾಲು ಇರುವೆಗಳು ಕಟ್ಟಿದ ಹಾಗೆ ಸೇತುವೆ ಬಾಳಿನಲ್ಲಿ ಸಾಗಿ ಸಾಗಿ ಒಗ್ಗಟ್ಟಿನಲ್ಲಿ ನಿಂತಿವೆ ಹೊಟ್ಟೆಗಾಗಿ ಊಟ ಹುಡುಕಿ ಅನ್ನದ ಅಗುಳು ಸಾಗು ಹಾಕಿ ಸಾಲು ಕಟ್ಟಿ ನಿಂತಿವೆ ಮೂಲೆಯಲ್ಲಿ ಸಕ್ಕರೆ ಮನವ ಕಲಕಿ  ಕರುಳ ಬಗೆವ ಹಸಿವು ನಾನು ಹೊರಟು ನಿಂತೇ ತರಲು ದಾರಿಯಲ್ಲಿ ಗುಂಡಿ. ನೋವಾಯಿತು ಮಂಡಿ ಹಿಂದೆ ಹಿಂದೆ ಅನ್ನದ ಹಗುಳ ನೂಕಿ ಸೂರ್ಯನ ಬೆಳಕು ಕಂಡು, ಇಡಿದೆ ನಾನು ಊರ ದಾರಿಯ ನಮ್ಮೂರ ಕೇರಿಯ ಯಾರೋ ಇಟ್ಟರು ಅಕ್ಕಿ ಚೂರು ಹರಸಿ ಬಂದರು ನನ್ನ ಅವರು ದೇವರೆಂದು ಬೇಡಿ ನನಗೆ ಅನ್ನ ನೀಡಿ ಕೈ ಮುಗಿದು ಹೊರಟರು ಸಾವು ಕಂಡು ಸೋತೆವು ನಾವು ನಮ್ಮನು ನೋಡಿ ತುಳಿವರು ನೋವ ನರ್ತನ,ಮನವ ಇಂಡಿ ಮುರಿದರು ಕಾಲ ಮಂಡಿ ಕಾಲಿನಲ್ಲಿ ಹೋದೇವರು ಕಣ್ಣಲಿ ನೀರು ತರಿಸುವರು *********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಏಕೆ ಹೀಗೆ

Image
ಕನಸ್ಸುಗಳ ಸಂತೆಯಲಿ ಬೆಂದು ಮನಸ್ಸಿನ ಚಿಂತೆಯಲಿ ನೊಂದು ಕಾಲವ ನೋವಿನಲಿ  ಕೊಂದು ಆಸೆಗಳ ಕನಸ್ಸು ನೀನು ತಂದು  ಬಯಸಿದರೆ ಸುಖವು ಸಿಗುವುದೆಲ್ಲಿ ಮೂರು ದಿನದ ಪಯಣ ಪ್ರೀತಿಯ ಬೆಳಕು ಕಾರಣ ಖುಷಿಯೇ ಇಲ್ಲಿ ಆಭರಣ ಸಮಯ ಏಕೊ ಮರಣ  ದುಃಖವು ಏಕೆ ನನ್ನ ಕಾಡಿತಿಲ್ಲಿ ಹೆಜ್ಜೆ ಹೆಜ್ಜೆಗೂ ಅವಮಾನ ಒಲವ ಅಕ್ಕರೆ ಬಹುಮಾನ ನೋವು ನಲಿವ ಯಜಮಾನ ಇರುಳು ಬೆಳಕಿಗೆ ನಮನ  ನೊಂದ ಜೀವಕೆ ಸಾಂತ್ವನವೆಲ್ಲಿ ಕಾಲ ಕಾರಣ ಕೇಳದೆ ಹೋಯ್ತು ವಯಸ್ಸು ದಿನ ಕಳೆದರೆ ಹೋಯ್ತು ಆಸೆಗಳ ಗಂಟು ದಿನವೂ ಹೆಚ್ಚಾಯ್ತು ಕನಸ್ಸು ಆಸೆಗೆ ಮನವು ಹುಚ್ಚಯ್ತು ಬದುಕು ಅರಿಯದ  ಒಗಟಾಯ್ತು  ಯಾರು ಹೆಣೆದರು ಬಲೆಯ ನಾನು ಶಪಿಸಿದೆ  ವಿಧಿಯ ಮನಸ್ಸು ಹೋಡುವ ನದಿಯ ಹಾಗೆ ಬದುಕಲಿ ಹುರುಳಿತು ಸಮಯ ಕಾರಣವಿಲ್ಲದೆ ಕಾಲದ ಕರೆಯ ************ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಮೂರು ದಿನದ ಬದುಕು

Image
ಮೂರು ದಿನದ ಈ ಬದುಕು ಜಯಿಸುಲು ಪ್ರೀತಿ ಹುಡುಕು ಆಸೆಗಳೇ   ಇಲ್ಲಿ     ಕೆಡುಕು ನೆನಪುಗಳ ಹಾಕು ಮೆಲುಕು ಸುಟ್ಟ ಗಾಯಗಳು ಎಷ್ಟೋ ಮಾದ ನೋವುಗಳು ಎಷ್ಟೋ ಕಾಡಿದ ಕನಸ್ಸುಗಳು ಎಷ್ಟೋ ತಿಂದ ಕಹಿ ನೆನಪು ಎಷ್ಟೋ ಮನದಿ ಹಾಗೆ ಬಂದು ಹೋಗಿ ಬದುಕು ಈಗ  ಒಲವ  ಮಾಗಿ ಪ್ರೀತಿಯಲಿ ಈ ಜೀವ ಕೂಗಿ ವಾಸಿಯದಂತೆ  ಪ್ರೀತಿ ರೋಗಿ ಕನಸ್ಸುಗಳ ಸಂತೆಯಲಿ ನಾನು ಮನಸ್ಸಿನ ಚಿಂತೆಯಲಿ ನಾನು ಜೀವ ಏಕೊ ನೋವಲಿ ಬೆದರಿದೆ ಕಹಿ ನೆನಪಿನಿಂದ ಕೂಗಿ ಒದರಿದೆ ಕಾರ್ಮೋಡವೊಂದು ಭೂಮಿಗೆ ಸುರಿಸಿದಂತೆ ಒಲವೆ ಜೇನ ಮಳೆ ನೆನೆದು ಪ್ರೀತಿಯಲಿ ತುಂಬಿ ಇಳೆ ಬರಡು ಬದುಕಲಿ ಹಸಿರು ಬೆಳೆ  ನಾನು ಎಂಬ ಮಾತು ಬಲು ವಿಷ ತೊಳೆದು ಅಹಂಕಾರದ ಕಸ ಹುಡುಕು ಸಿಹಿಯ ರಸ ನಿಮಿಷ ಸುಖದಿ ಬಾಳಲಿ ಬಂದು ಹರುಷ ***********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಸುಖವೆಲ್ಲಿದೆ

Image
ನನ್ನವರು ನನಗೆ  ಮುಳ್ಳಾದ ಮೇಲೆ ಬದುಕಲ್ಲಿ ಸುಖವೆಲ್ಲಿದೆ ನಂಬಿದವರು ನನ್ನ ಚುಚ್ಚಿ ಇರಿದ ಮೇಲೆ ಬಾಳಲ್ಲಿ ಹಿತವೆಲ್ಲಿದೆ ಮರಳುಗಾಡಿನಲ್ಲಿ ನೀರನ್ನು ಬಯಸಿದರೆ ಬಾಯಾರಿಕೆ ನಿಂತು ಹೋಗುವುದೇ ಇಟ್ಟ ಗುರಿ ತಪ್ಪಿದ ಮೇಲೆ ಬಾಣ ಬಿಡುವವನ ಬೆಲೆ ಎಲ್ಲಿದೆ ತಿನ್ನುವ ಅನ್ನ ವಿಷವಾದ ಮೇಲೆ ಹಸಿವ ಹೊಟ್ಟೆ ತುಂಬುವುದೇ ಮನವು ಮರ್ಕಟವಾದ ಮೇಲೆ ಹೊತ್ತ ದೇಹಕ್ಕೆ ಸುಖವೆಲ್ಲಿದೆ ಬೀಜವೇ ವಿಷದಿಂದ ಇರುವಾಗ ಬೆಳೆದ ರಾಗಿಗೆ ಉಳಿವೆಲ್ಲಿದೆ ಸುರೊಂದು ಮಳೆಗೆ ಸೋರುವಾಗ ಮಲಗಲು  ನೆಲೆ ಎಲ್ಲಿದೆ ಕನಸ್ಸೊಂದು ನನ ಕೊಲ್ಲುತಿರುವಾಗ  ಆಸೆಗಳಿಗೆ ಸಾವು ಬಳಿ ಬಂದಿದೆ ನೆನಪುಗಳು ನನ ಸುಡುತ್ತಿರುವಾಗ ದೇಹವು ಮುಪ್ಪಾಗದೆ ***********ರಚನೆ **** ಡಾ. ಚಂದ್ರಶೇಖರ. ಸಿ. ಹೆಚ್

ಓ ಗುರುವೆ

Image
ಗುರಿಯಿಲ್ಲದ ಮೂಡನಿಗೆ ಗುರಿ ತೋರು ಗುರುವೇ ವಿದ್ಯೆ ಇಲ್ಲದ ದಡ್ಡನಿಗೆ ಬುದ್ದಿ ತೋರು ಗುರುವೇ ನೆಲೆ ಇಲ್ಲದೆ ಅಲೆವವನಿಗೆ ಸೂರಾಗು ನೀನು ಗುರುವೇ ಎಳುಬಿಳಿನ ದಾರಿಯಲಿ ದಾರಿ ದೀಪಾವಾಗು ಗುರುವೇ ಕರುಣೆ ಇಲ್ಲದ ಈ ಮನಕೆ ಕರುಣಾಳು ನೀನಾಗು ಗುರುವೇ ಕತ್ತಲೆ ಕವಿದ ಈ ಮನಕೆ ಸಡ್ಬುದ್ದಿಯ ಬೆಳಕಾಗು ಗುರುವೇ ವಿಷ ತುಂಬಿದ ಜನಕೆ ಅಮೃತ ನೀಡು ಗುರುವೇ ನನ್ನಾಸೆ ದುಃಖ ನೀಡುವಾಗ ಸುಖ ನೀಡುವ ಕನಸ್ಸಗೂ ಗುರುವೇ ನಿನ್ನ ಒಲುಮೆ ಇಂದಲೇ ಈ ಜೀವಕೆ  ಮುಕ್ತಿ ಗುರುವೇ  ಕೊಡು ನೀನು ನೋವಲು   ಜೀವನ ಎದುರಿಸುವ ಶಕ್ತಿ ಗುರುವೇ  ***********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಗಂಗೆ ಹರಿದವಳೇ

Image
ಹರಿಯುತಿಹಾ ನದಿ ಊಕ್ಕಿ ಹರಿದಿದೆ ಹಸಿರು ಪೈರುಗಳ ಕೋಚ್ಚಿ ಸಾಗಿದೆ ತಡೆಯಲ್ಲಿ ನನಗೆ ಗುಡುಗುವ ಶಬ್ದ ಹೇಳಿದೆ ನೆಲವನ್ನು ಚುಚ್ಚಿ ಮಣ್ಣು ಬರಿದಾಗಿದೆ ನದಿಯ ಬಣ್ಣದಿ ನೆತ್ತರು ಕಂಡಂತೆ ಹರಿವ ರಬಸಕೆ ಮನವು ಬೆಂದಂತೆ ತಡೆ ಎಲ್ಲಿ ನನಗೆ ಕೂಗಿ ನುಡಿದಂತೆ ನೋವಲಿ ಮನುಷ್ಯ ತೇಲಿ ಹೋದಂತೆ ಪ್ರಕೃತಿಗೆ ತೊಡೆ ತಟ್ಟಿದ ಮನುಜ ಮಾರಿ ಹಬ್ಬಕೆ ಬಲಿ ಹಾದಂತೆ ಹುಂಜ ತಡಕಿದರೆ ಸಿಕ್ಕದು ನೀರಿನಲ್ಲಿ ಮುಕ್ಕಿಹುದು ನರ ಮಾನವನ ಸೋಕ್ಕು ನೀರಿನಲ್ಲಿ ಬರಿದು ದೇವರೇ ತಬ್ಬಿಬ್ಬು ಪ್ರಕೃತಿಯ ನರ್ತನಕೆ ಗಂಗೆ ಹೊಡವಳೇ, ಕುಣಿದವಳೇ, ನಲಿದವಳೇ ತಣ್ಣಗಾಗುವ ಹೊಳಗೆ ನೆಲವ ಗುಡಿಸವಳೇ ಮಾನವವ ಆಸೆ, ಕನಸ್ಸುಗಳ ಪುಡಿ ಮಾಡವಳೇ ************ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಖಾಲಿ ಪುಟ

Image
ನಾ ಹುಟ್ಟುವ  ಮುಂಚೆ ಈ ಜೀವನ ಒಂದು ಖಾಲಿ ಪುಟ ನನ್ನ ಅಮ್ಮನ ಗರ್ಭದಲಿ ನಾ ಜನಿಸಿದೆ ಮಾಡಿ ಸಣ್ಣ ಹಠ  ಬದುಕನು ಬರೆದ  ಬ್ರಹ್ಮ ನೋಡದೆ ನನ್ನ ಹಣೆಯ ಹುಡುಕುತ ಹೊರಟೆ ನಾನು ನನ್ನವರ ಶಪಿಸಿ ವಿಧಿಯ ಕೂಡುತ ಕಳೆಯುವ ಒಲವು ನಲಿವು ನೋವಲಿ ಬೆಂದ ಮನವು ಭಾವನೆಗಳ ಮೇಲೆ ನೆನಪಿನ ಗೆಲುವು ಕನಸ್ಸುಗಳು ಕೈ ಜಾರಿದ ಹಾಗೆ ಮನವು ಖಾಲಿ ಜೀವನದಿ ಗೀಚಿದವನಿಗೆ ತಿಳಿಯದೆ ಬದುಕಿನ ಒಗಟು ಬಿಡಿಸುತ ಹೊರಟೆ ಗಾದೆಯ ಪ್ರೀತಿ ಪ್ರಣಯದ  ಸಗಟು ಯಾರು ಗೆದ್ದರು ಈ ಜೀವನದ ಆಟ ಬದುಕು ಸುಖ ದುಃಖದ ಓಟ ಮಾಡುತ್ತಿರುವನು ಕಣ್ಣಿಗೆ ಬೀಳದೆ ಪಾಠ ಸೆಳೆಯುತಿದೆ ನನ್ನ ಮಿಂಚಿನ ನೋಟ ಮನಸ್ಸಿನ ಬೇಲಿಯಲಿ ಅರಳಿದ ಹೂವು ವಸಂತದ ಚಿಗುರಲಿ ಅವಿತ ಮಾವು ಪಯಣ ಹಬ್ಬಗಳ ಸಿಹಿ ಬೇವು ದೇವರೇ ನೀಡಬೇಡ ಮನಕೆ ನೋವು ಕಣ್ಣ ಅಂಚಿನ ನೋಟದಿ ಕಾರ್ಮೋಡದ ಮುಗಿಲು ತಾರೆಗಳ ತೋಟದಿ ನಕ್ಷತ್ರಗಳ ಬುಗಿಲು ಲೆಕ್ಕ ತಪ್ಪಿದೆ ಈ ಬಾಳು ಒಲವಲಿ ದಿಗಿಲು ಬದುಕು ಬಣ್ಣದ ನೀಲಿ ಕಡಲು **********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಓ ಮಗುವೇ

Image
  ಕನಸ್ಸುಗಳ ಸಂತೆಯಲಿ ಮನದಿ   ಕೂತ  ವನಿತೆ ನನ್ನ ಓಡಲ    ಅಳದಲಿ ಮೂಡಿದ  ಒಲವ ಕವಿತೆ ಗರಿ ರೆಕ್ಕೆ ಬಿಚ್ಚಿ   ಜಿಗಿದು  ಮೇಲೆ ಹಾರಲು  ಕಲಿತೆ ನಿನ್ನ ಒಲವ ನೆನಪಿನಲಿ ಬದುಕ    ನಾ     ಮರೆತೆ ನೂರು ದಾರಿ  ಕಂಡರು ನೀನೆ    ನನ್ನ   ಉಸಿರು ಬಣ್ಣಗಳ   ಜಾತ್ರೆಯಲಿ ನಿನ   ಹೆಸರೇ   ಹಸಿರು ಕನಸ್ಸು ಹೊತ್ತು ಸಾಗುತ ಮಿಡಿವ ಪ್ರೀತಿ ಮಂಪರು  ಮನದಲ್ಲಿ ಆಸೆ ಮೂಡಿ ಚಿಗುರಿದಂತೆ    ಬಸಿರು ಒಡಲಲ್ಲಿ ಪುಟ್ಟ ಹೆಜ್ಜೆ ಇಟ್ಟು   ಅಂಗಲೂ  ಬಡಿವ   ಸದ್ದು ನರನಾಡಿಗಳಲಿ ಹರಿವ  ರಕ್ತ ಕುಣಿದಿದೆ   ಖುಷಿಯ  ಗೆದ್ದು ಹೇಗೆ ಬರಲಿ ಹೊರ ನಾನು ಅಮ್ಮನ ಹೊಟ್ಟೆ ಹೋದ್ದು ಕಾಲವು ಹೇಳುತಿದೇ ಹೊರಡು ನೀನು ನೆತ್ತರಲಿ   ಜಾರಿ ಬಿದ್ದು ಹೆತ್ತ ಕರುಳು ಪ್ರೀತಿಲಿ ಕೂಗಿದೆ ನೀನೆ ನನ್ನ   ಮುದ್ದು    ಕಂದ ನಗುವ     ಮೊಗದ   ಚೆಲುವ ನೀನು    ಎಷ್ಟು     ಚೆಂದ ನೋಡುತ  ಮರೆತೆ    ಜಗವ ಆ ನಿನ್ನ ಸೋಜಿಗದ ಅಂದ ಉಸಿರು  ಉಸಿರು  ಹೇಳಿದೆ ಬಿಡಿಸದ     ಒಲವ  ಬಂದ ******...

ಹೇ ಹೃದಯ ನೀನು

Image
ಹಾಯ್ ನಾನು ಬರೆದಿರುವ  ಸಾಹಿತ್ಯದ ಹಾಡು ಕೇಳಿ ಆನಂದಿಸಿ ಶುಭ ಹಾರೈಕೆ ಇರಲಿ ನಿಮ್ಮವ  ಡಾ. ಚಂದ್ರಶೇಖರ. ಸಿ. ಹೆಚ್