1. ಹಣವೇ ಜೀವನವೇ




ಜೀವನ ಸಾಗಿಸಲು ಹಣ ತುಂಬಾ ಮುಖ್ಯ ನಮ್ಮ ಸಕಲ ಆಸೆ ಆಕಾಂಕ್ಷೆಗಳನು ಈಡೇರಿಸಿಕೊಳ್ಳಲು ಹಣ ಆಗತ್ಯ. ಹಣವನ್ನು ದುಡಿಯುವುದಕ್ಕಾಗಿ ಜೀವನ ಮಡುಪಿಟ್ಟರೆನಮ್ಮ ಅತ್ಯ ಅಮೂಲ್ಯ ಸಂತೋಷದ ಕ್ಷಣಗಳನ್ನು ನಾವು ಕಳೆದು ಕೊಳ್ಳಬೇಕಾಗುತ್ತದೆ. ನಾವು ಸಂಪಾದಿಸುವ ಹಣ  ಸರಿಯಾದ ಕಾಲದಲ್ಲಿ ನಮ್ಮ ಸಂತೋಷಕ್ಕೆ ವಿನಿಯೋಗವಾದರೆ ಎಷ್ಟು ಚೆಂದ ಅಲ್ಲವೆ.

ಇಂದಿನ ಪೀಳಿಗೆಯ ಜನಗಳಾದ ನಾವು ಶ್ರಮಪಟ್ಟು ಹಣವನ್ನು ದುಡಿದು ಸಮಯವಿಲ್ಲದೆ ಚಿಂತೆಯಲಿ ಮುಳುಗಿ ನೋವಿನಿಂದ ಜೀವನವನ್ನು ಸಾಗಿಸುತ್ತಿದ್ದೇವೆ. ಈಗ ಒಬ್ಬ ಕೋಟ್ಯಧಿಪತಿಯ ಕಥೆ ಹೇಳಲು ಹೊರಟಿದ್ದೇನೆ ಈತನೆ ಕೆಂಟುಕಿ ಚಿಕನ್ ಫ್ರೈ ಮಾಲೀಕ ಕಲನೆಲ್ ಹೊರಲ್ಯಾಂಡ್ ಡೇವಿಡ್ ಸ್ಯಾಂಡರ್ಸ್ ಹುಟ್ಟಿದ್ದು ಸೆಪ್ಟೆಂಬರ್ 9-1890, ಇಂಡಿಯಾನ ಹೆನ್ರಿವಿಲ್ಲೆ ಅಮೇರಿಕಾ, ಇವರಿಗೆ ಇಬ್ಬರು ಹೆಂಡತಿಯರು ಮೂರು ಜನ ಮಕ್ಕಳು.

ಸ್ಯಾಂಡರ್ಸ್ನ ಜೀವನ ಅಷ್ಟು ಸಮಾಧಾನಕರದ ಸ್ಥಿತಿಯಲ್ಲಿ ಇರಲಿಲ್ಲ. ತನ್ನ ಜೀವನ ಸಾಗಿಸಲು ಹಲವಾರು ಹುದ್ದೆಗಳನ್ನು ಮಾಡಿದ್ದಾನೆ, ಸ್ಟೀಮ್ ಇಂಜಿನ್ ಸ್ಟಾಕರ್, ಇನ್ಸೇಶುರೆನ್ಸ್ ಸೇಲ್ಸ್    ಮ್ಯಾನ್ ಮತ್ತು ಫಿಲ್ಲಿಂಗ್ ಸ್ಟೇಷನ್ ಆಪರೇಟರ     ಹೀಗೆ     ಸಾಲು    ಸಾಲು      ಉದ್ಯೋಗ ಮಾಡಿದ್ದರು ಯಾವುದು ಆತನಿಗೆ ನೇರವಾಗಲಿಲ್ಲ

ಸ್ಯಾಂಡರ್ಸ್ 40 ವರ್ಷ ವಯಸ್ಸಿನಲ್ಲಿ ಉತ್ತರ ಕಾರೋಲಿನ ಕೆಂಟುಕಿ ನಗರದ ರಸ್ತೆ ಬದಿಯಲ್ಲಿ ಚಿಕನ್ ಫ್ರೈ ಮಾಡುವ ರೆಸ್ಟೋರೆಂಟನಿಂದ ಬಂದ ಹಣದಿಂದ ಜೀವನ ಸಾಗಿಸುತ್ತಿದನು. ಆ ಸಮಯದಲ್ಲಿ ಸ್ಯಾಂಡರ್ಸ್ ಒಂದು ಸೀಕ್ರೆಟ್ ರೆಸಿಪಿ ತಯಾರಿಸಿ ಅದನ್ನು ಪ್ರೆಷರ್ ಫ್ರೈಯೆರ್ ನಿಂದ ಬೇಯಿಸಿ ಪೇಟೆಂಟ್ ಪಡೆಯುವನು.

1950 ರಲ್ಲಿ     ಅಂತರ ರಾಜ್ಯ      ಹೈವೇ ನಿರ್ಮಾಣವಾಗಿ ಇವರ ರೆಸ್ಟೋರೆಂಟ್ ಬೈ ಪಾಸ್ ರಸ್ತೆ ಮಾಡಲಾಗುತ್ತದೆ. ಚಿಕನ್ ಫ್ರೈಡ್ ಬ್ಯುಸಿನೆಸ್ ಸಂಪೂರ್ಣ ಬಿದ್ದು ಹೋಗುತ್ತದೆ ತನ್ನೆಲ್ಲ ಅಸ್ತಿಯನ್ನು ಹರಾಜು ಹಾಕಿ ಜೀವನದಲ್ಲಿ ಹತಾಶನಗುವನು ಆಗೇ ಸುಮಾರು 65 ವರ್ಷ ಕಳೆಯುತ್ತದೆ ಮತ್ತೆ ಅವನು ತನ್ನ ರೆಸಿಪಿಯನ್ನು ತಯಾರಿಸಲು ಹೋಟೆಲಗಳನ್ನು ಹುಡುಕುತ್ತಾನೆ, ಎಲ್ಲೂ ಅವನಿಗೆ ಅವಕಾಶ ಸಿಗುವುದಿಲ್ಲ ಭರವಸೆಯನ್ನು ಕಳೆದುಕೊಳ್ಳದೆ ಊರು ಊರು ಸುತ್ತುತ ಅವಕಾಶಕ್ಕಾಗಿ ಕೇಳುತ್ತಾನೆ ಕೊನೆಗೆ ಒಂದು ಅವಕಾಶ ಸಿಕ್ಕುತ್ತದೆ. ಅದಾದ ಮೇಲೆ ಫ್ರ್ಯಾಂಚಿಸ್ ಕಾನ್ಸೆಪ್ಟ್ ನಿಂದ ಕೆ. ಎಫ್. ಸಿ ಚಿಕನ್  ಶಾಪ್ ಗಳನ್ನು ಅಮೇರಿಕಾದ ಸೌತ್ ಸಾಲ್ಟ್ ಲೇಕ್ ಊಟಾಹ್ ನಲ್ಲಿ ಆರಂಭಿಸಿ ತದನಂತರ ಶಾಪಗಳು ಪ್ರಪಂಚದ ಎಲ್ಲಾ ದೇಶಗಳಲ್ಲಿ  ತೆರೆದುಕೊಳ್ಳುತ್ತವೆ. ಇಂದು ಈತ ಒಬ್ಬ ಬಿಲೆನಿಯರ್   ಆಗಿ   ಹೊರ ಹೊಮ್ಮಿದ್ದಾನೆ ಸುಮಾರು 1964 ನೆ ಇಸವಿಗೆ 73 ವಯಸ್ಸು.


ಇನ್ನೊಂದು ವಿಷಯವನ್ನು ಹೇಳುವುದಾದರೆ ಪುನೀತ್ ರಾಜಕುಮಾರ ಹುಟ್ಟಿದ್ದು ಮಾರ್ಚ್ 17-1975 ಚನ್ನೈನಲ್ಲಿ. ಇವರ ತಂದೆ ಡಾ. ರಾಜಕುಮಾರ, ತಾಯಿ ಪಾರ್ವತಮ್ಮ ರಾಜಕುಮಾರ ಮತ್ತು ಹೆಂಡತಿ ಅಶ್ವಿನಿ ಹಾಗು ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ.

ತಂದೆ ಹೆಸರಾಂತ ಕನ್ನಡ ಸಿನಿಮಾ ನಟ, ಪುನೀತ್ ಗೆ ಅಪ್ಪನ ಬಳುವಳಿಯಿಂದ ಬಂದ ಕಲೆ ಬಾಲ ನಟನಾಗಿ ಸಿನಿಮಾಗಳಲ್ಲಿ ನಟಿಸಿ ಹಲವಾರು ಬಾರಿ ರಾಷ್ಟ್ರೀಯ ಪ್ರಶಸ್ತಿಗಳು ಅರಸಿ ಬಂದವು. ಇವರು ಕನ್ನಡ ಸಿನಿಮಾ ಲೋಕದಲ್ಲಿ ಪವರ್ ಸ್ಟಾರ್ ಎಂದು ಕರೆಯಲ್ಪಟ್ಟರು, ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಉತ್ತಮ ಜನಮನ್ನಣೆ ಗಳಿಸಿದರು ಹಾಗು ಸಾಕಷ್ಟು ಹಣವನ್ನು ತಮ್ಮ ಚಿಕ್ಕ ವಯಸ್ಸಿನಲ್ಲಿ ಸಂಪಾದಿಸಿದರು ಮತ್ತು ಹಣವನ್ನು ಚಾರಿಟೇಬಲ್ ಟ್ರಸ್ಟ್, ಸಮಾಜ ಸೇವೆಗೆ ದಾನ ಮಾಡಿದರು.    ಇದ್ದಕ್ಕಿದ್ದ    ಹಾಗೆ ಒಂದು ವಿಧಿಯೂ ಅವರ ಬಾಳಿನಲ್ಲಿ ಆಟವನ್ನು ಆಡಿದ, ತಿಳಿಯದೇ ಸಂಭವಿಸಿದ ಹೃದಯ ಸಂಬಂದಿ ಕಾಯಿಲೆಯಿಂದ ಮರಣ ಹೊಂದಿದರು. ತಮ್ಮ  ಸರ್ವಸ್ವವನ್ನು ಬಿಟ್ಟು ಪರ ಲೋಕಕ್ಕೆ ಹೋದರು. ಈಗ ಅವರು ಮಾಡಿದ ಹೆಸರು,ಗಳಿಸಿದ ಕೀರ್ತಿ, ಸಮಾಜ ಸೇವೆ ಅವರ ಹೆಸರನ್ನು ಅಜರಾಮರಗೊಳಿಸಿವೆ.

ಈ ಎರಡು ಸಾಧಕರ ವಿಷಯವನ್ನು ಚರ್ಚಿಸುವುದಾದರೆ  ಸ್ಯಾಂಡರ್ಸ್  73 ನೆ ವಯಸ್ಸಿಗೆ ಸಾವಿರಾರಿ ಕೋಟಿ ಒಡೆಯನಾದನು, ಈಗ ಏನು ಬೇಕಾದರೂ ಕೊಂಡುಕೊಳ್ಳಬಹುದು. ಆದರೇ ಹಣವಿಲ್ಲದೆ ಕಳೆದ ಸಮಯ ಅವನ ಸಂತೋಷ ಕಸಿದು ಕೊಂಡಿತು. ಹಾಗೆಯೇ ಪುನೀತ್ ರಾಜಕುಮಾರ ತಮ್ಮ ಚಿಕ್ಕ ವಯಸ್ಸಿನಲ್ಲಿ ಎಲ್ಲವನ್ನು ಸಾದಿಸಿ ಹೆಸರು ಹಣ ಮಾಡಿ ನಮ್ಮನ್ನು ಬಿಟ್ಟು ಹೋದರು. ಹಣವನ್ನು ದುಡಿಯುವುದು ನಮ್ಮ ಜೀವನವನ್ನು ಸಂತೋಷವಾಗಿ ಕಳೆಯಲು,  ಹಣವನ್ನು ಗಳಿಸುವುದೇ ನಮ್ಮ ಜೀವನವಾದರೆ ನಮ್ಮ ನೆಮ್ಮದಿ ಕಳೆದುಕೊಂಡು ಜೀವನ ದುಃಖವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಎರಡು ಉದಾಹರಣೆಯನ್ನು ಅವಲೋಕಿಸುವುದಾದರೆ ಸ್ಯಾಂಡರ್ಸ್ 73ನೆ ವಯಸ್ಸಿನಲ್ಲಿ ಸಾವಿರಾರು ಕೋಟಿ ಹಣ ದುಡಿದು ಸಂತೋಷದಿಂದ ಜೀವನ ಸಾಗಿಸಿದ್ದಾನೆ ಎನ್ನುವುದು ಕಷ್ಟ ಹಾಗೆಯೇ ಪುನೀತ್ ರಾಜಕುಮಾರ ಜೀವನ ನೋಡುವುದಾದರೆ ಎಲ್ಲವೂ ಇತ್ತು ಆದರೇ ಅವರೇ ನಮ್ಮೊಂದಿಗಿಲ್ಲ.

ಹಣೆಬರಹ ಬರೆದ ಬ್ರಹ್ಮ ಎಷ್ಟು ಕ್ರೂರಿ ಅಲ್ಲವೆ ಸಮಯಕ್ಕೆ ಸರಿಯಾಗಿ ನಮಗೆ ಏನನ್ನೂ ಸುಲಭವಾಗಿ ದೊರಕದಂತೆ ಮಾಡಿರುತ್ತಾನೆ, ಕೆಲವರಿಗೆ ಬೇಡವೆಂದರೂ ನೀಡುತ್ತಾನೆ. ಆದ್ದರಿಂದ ನಾವು ಜೀವನದಿ ಹತಾಶರಾಗದೆ ಗಳಿಸಿದ ಹಣದಲ್ಲಿ ನಮ್ಮ ಜೀವನವನ್ನು ಸಂತೋಷದಿಂದ ಕಳೆಯಬೇಕು ಹಾಗು ನೆಮ್ಮದಿಯನ್ನು ನಾವೇ ಕಂಡು ಕೊಳ್ಳಬೇಕು.

ಈಗ ನೀವೇ ಹೇಳಿ ಹಣವೇ ಜೀವನವೇ?

                       ವಿಧಿ ನೀನು ಕ್ರೂರ

                       ಜೀವನವೇ ಭಾರ

                       ಹಣವೇಕೋ ದೂರ 

                       ಮನಸ್ಸು ಏಕೊ ಚೋರ

                       ನೆಮ್ಮದಿ ಹುಡುಕುವ ಬಾರ 

ಮೂರು ದಿನದ ಈ ಜೀವನದಿ ಚಿಂತೆ ಏಕೆ ಗೆಳೆಯ ಕಷ್ಟ ಪಡು ಮಿಕ್ಕಿದ್ದು ದೇವರಿಗೆ ಬಿಡು. ಸಂತೋಷವನ್ನು ಪಡಲು ಪಣ ತೋಡು.ಹಣವೇ ಜೀವನವಲ್ಲ ತಿಳಿದು ಬಿಡು.

************ಲೇಖಕರು *****************

     ಡಾ. ಚಂದ್ರಶೇಖರ. ಸಿ. ಹೆಚ್ 

Comments

Post a Comment

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20