ಬೆಂಕಿಗಾಹುತಿ




ಒಳಗೊಳಗೇ ಕುದಿಯುತಿದೆ

ಬೆಂಕಿಯ ಒಡಲು

 ಆ ಮುಗಿಲು ಕಪ್ಪಿಟು ಉಗಿಯುತಿದೆ

ಕಾರ್ಮೋಡಕೆ ಹೊಗೆಯ ಬುಗಿಲು


ಉರೊಂದು ಮಸಣದ ಕೇರಿ

ಸುಟ್ಟ. ಕಪ್ಪಿಟ್ಟ. ರಕ್ತ ಹೆಪ್ಪು ಗಟ್ಟಿ

ನೋಡತ ಕಣ್ಣೀರ ಹನಿಗಳ ಕಡಲು

ಆಸೆಗಳು ಹೂತಿಟ್ಟ ಸ್ಮಶಾನ


ರೋಧಿಸಿದೆ ಮರ ಗಿಡ ಬಳ್ಳಿ

ಚಿಟ ಪಟ, ಕೊತ ಕೊತ ಕುದಿದು

ಕಾಡಲ್ಲಿ ಹರೆ ಬರೆ ಬೆಂದ

ಪ್ರಾಣಿಗಳ ಕಣ್ಣೀರು. ನೆತ್ತರು ಸುರಿದು


ರಕ್ಷಸನಂತೆ ನಗುವ ಕೆಂಪು ಬೆಂಕಿ

ನಂದಿಸಲು ತಿಣು ಕಾಡಿದ ಫೈರ್ ಇಂಜಿನ್

ಚಿಮ್ಮತಿದೆ ನೀರು ಆಕಾಶಕೆ

ನುಂಗುತಿದೆ ನೀರ ಕೆಂಪು ಕೆನ್ನಾಲಗೆ


ಮನದಿ ಬೆಂದ ದೇಹದ ವಾಸನೆ

ಕಪ್ಪಾನೆಯ ಹೊದಿಕೆಯ ಹುಟ್ಟು

ಕೆಂಪನೆಯ ಸೀರೆಯ ಹುಟ್ಟ ರೀತಿ

ಕೇಳುವರು ಯಾರು ಗೋಳು

ಸುಡಿತಿದೆ ಜೀವ ರಾಶಿಗಳು


ಕೆಂಡಾಡೋಕುಳಿಯಲ್ಲಿ ಮಿಂದು

ರಕ್ತವು ಜಿನುಗಿ ಬೆಂದು, ನೊಂದು

ನೀರಿಗಾಗಿ ಬೇಡಿದೆ ಪ್ರಾಣಿ

ಕಾಣದ ಕಾಡಲ್ಲಿ ಹಸಿದು ಬಸಿದ

ಬಯಕೆಗಳು ಕೊಂದು ಬಾಡಿದೆ ದೇಹ 


*********ರಚನೆ ***********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಭಾವಗೀತೆ -51

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ