ವಚನಗಳು -26
ಮನಸ್ಸು ಮಾರ್ಕಟವಾದೋಡೇ ಲಿಂಗ ಮೆಚ್ಚುವುದೇ
ಕನಸ್ಸು ಕರ್ಮವಾದೊಡೆ ಲಿಂಗ ಮೆಚ್ಚುವುದೇ
ಭಾವಗಳು ಬವಣೆಯಾದರೆ ಲಿಂಗ ಮೆಚ್ಚುವುದೇ
ಕೈ ಕಟ್ಟಿ ಕುಳಿತ ಸೋಂಬೇರಿಯಾ ಲಿಂಗ ಮೆಚ್ಚುವುದೇ
ಕಾಯಕದ ನೀರಲ್ಲಿ ಕೈ ತೊಳೆ ಮೆಚ್ಚುವನು ಲಿಂಗದ ನಮ್ಮ ಬಸವಣ್ಣ
ಕತ್ತಲೆಯ ಕಳೆದೋಡೆ ಬೆಳುಕು ನೋಡ
ಅಜ್ಞಾನ ಕಳೆದೋಡೆ ಸುಜ್ಞಾನ ನೋಡ
ಇರುಳು ಕಳೆದೋಡೆ ಹಗಲು ನೋಡ
ಸತ್ಕಾರವಿದ್ದರೆ ದೇವರ ಸಾಕ್ಷಾತ್ಕಾರ ನೋಡ
ಕಾಯಕದಿ ಮನಸ್ಸು ಮಿಂದೆದ್ದರೆ ಭಕ್ತಿನೋಡ ನಮ್ಮ ಬಸವಣ್ಣ
ಅಯ್ಯ ಕುರಿ ಕಾಯುವನಿಂದ ಬೆಚ್ಚನೆ ಹೊದಿಕೆ ನನದಾಯಿತು
ಕುಂಬಾರನನಿಂದ ತುಂಬಿದ ಧಾನ್ಯ ನನದಾಯಿತು
ಅಕ್ಕಸಾಲಿಗನಿಂದ ಹೊಳೆವ ಚಿನ್ನ ನನದಾಯಿತು
ಗಾರೆಯವರಿಂದ ನೆಲೆಸುವ ಮನೆ ನನದಾಯಿತು
ಇಡಿದ ಕಾಯಕವ ಮಾಡಿ ಲಿಂಗದ ನಮ್ಮ ಬಸವಣ್ಣನ ಅರಿವಾಯಿತು
**************ರಚನೆ *******************
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment