ಸಹ್ಯಾದ್ರಿ ನಿಸರ್ಗ ಕಂಡು ಕುಣಿದಿದೆ ಇಂದು ಮನವು ಜೋಗದ ನದಿ ಜಿಗಿತ ಕಂಡು ಅರಳಿದೆ ಇಂದು ತನುವು ಹಸಿರು ಹರಿದ್ವರ್ಣ ಗಂಧದ ಗುಡಿ ಸಹಬಾಳ್ವೆಯ ನಿತ್ಯ ನುಡಿ ಪ್ರೇಮೋತ್ಸವ ಪ್ರಕೃತಿ ಪ್ರೇಮೋತ್ಸವ ಮತ್ತೆ ಪ್ರೇಮೋತ್ಸವ......... ಶಿಲ್ಪಗಳ ಇತಿಹಾಸ ಕಂಡು ಶೃಂಗೇರಿಯ ಶಾರದೆಗೆ ನಮಿಸಿ ದೈವಗಳ ನಾಡು ನುಡಿ ಕನ್ನಡದ ಸವಿಯ ನುಡಿ ಪ್ರೇಮೋತ್ಸವ ಪ್ರಕೃತಿ ಪ್ರೇಮೋತ್ಸವ ಮತ್ತೆ ಪ್ರೇಮೋತ್ಸವ......... ಜಾತಿ ನೀತಿಗಳ ಮೆಟ್ಟಿ ಹಿರಿಮೆ ಗರಿಮೆ ಕುಲವ ತಟ್ಟಿ ಲೋಕವೆಂಬ ಬೆಳಕಿನಲ್ಲಿ ಬದುಕು ಆಸೆ ಹಸಿರಿನಂತೆ ಚಿಗುರಿದೆ ಪ್ರಣಯವೆಂಬ ಜೀವನದಲ್ಲಿ ಹೃದಯ ನಕ್ಕು ನಲಿದಿದೆ ಪ್ರೇಮೋತ್ಸವ ಪ್ರಕೃತಿ ಪ್ರೇಮೋತ್ಸವ ಮತ್ತೆ ಪ್ರೇಮೋತ್ಸವ......... *********ರಚನೆ******* ಡಾ. ಚಂದ್ರಶೇಖರ್ ಸಿ.ಹೆಚ್
🌹ತಾಯಿ🌹 ಹೆತ್ತವಳು ಹೊತ್ತವಳು ತಾಯಿ ಅಲ್ಲವೇ ಸಾಕಿ ಸಲುಹಿದವಳು ತಾಯಿ ಅಲ್ಲವೇ ಕರುಣೆಯ ಸಿಂದು ಬಂದು ತಾಯಿ ಅಲ್ಲವೇ ಜೀವಕೆ ಜೀವ ತೇಯ್ದವಳು ತಾಯಿ ಅಲ್ಲವೇ ನೋವಲು ನೀನು ಖುಷಿಯನ್ನು ಕೊಟ್ಟೆ ಹರಿದ ಬದುಕನ್ನು ನೀ ಜೋಡಿಸಿ ಬಿಟ್ಟೆ ತುಂಬಿದೆ ನೀನು ಅನ್ನದಿ ಖಾಲಿಯ ತಟ್ಟೆ ಪಾವನವಾಯಿತು ಈ ಹಸಿದ ಹೊಟ್ಟೆ ತಾಯಿ ಎನ್ನುವ ಪದವೇ ಅಮೃತ ನೀನು ನಮ್ಮ ಬೆಳಸಿದ ರೀತಿ ಅದ್ಬುತ ಬದುಕನ್ನು ಕಳೆವೆವು ನಾವು ನಿನ್ನ ನೆನೆಯುತ ಉಸಿರು ಮತ್ತು ಹೆಸರು ನಿನ್ನದೇ ಈ ಜೀವಿತ ***********ರಚನೆ*************** ಡಾ.ಚಂದ್ರಶೇಖರ್ ಸಿ. ಹೆಚ್
🌹ಹೃದಯ🌹 ಹೃದಯದೊಳಗೆ ನೂರು ಕವನ ಗೀಚಲೆನೆ ಸುಮ್ಮನೆ ಕನಸಿನೊಳಗೆ ಬಂದು ಬಿಡು ಹಾಗೆ ನೀನು ಮೆಲ್ಲನೆ ಮನಸು ಮನಸು ತಾಕಿದಾಗ ಪ್ರೀತಿಯಾಯ್ತು ಗಮ್ಮನೆ ನೀನು ನಾನು ಹಾಡುವಾಗ ಸಂಗೀತವಾಯ್ತು ಗಲ್ಲನೆ 🌹ಎದೆ🌹 ಎದೆಯ ಮೇಲೆ ನಿನ್ನ ಹಚ್ಚೆ ಕಾಡಿತೇಕೋ ಕೆನ್ನೆ ಮಚ್ಛೆ ಪ್ರೀತಿಯಲಿ ಮನಸು ಬಿಚ್ಚೆ ಓದುವೆ ನಾನು ಸ್ವರವನು ರಾಗ ಮಿಡಿದ ಒಲವನು 🌹ನಾಡಿ ಮಿಡಿತ 🌹 ಕಣ ಕಣದಲ್ಲೂ ನಾಡಿ ಮಿಡಿತ ನಿನ್ನ ಮೇಲೆ ನನ್ನ ಪ್ರೀತಿ ತುಡಿತ ಒಲವು ಒಂದು ಖುಷಿಯ ಹಿತ ನೀನು ತಾನೇ ನನಗೆ ಸ್ವಂತ ********ರಚನೆ ******** ಡಾ. ಚಂದ್ರಶೇಖರ್ ಸಿ.ಹೆಚ್
Comments
Post a Comment