ವಚನಗಳು -27




ಅಜ್ಞಾನ ಮನೆ ಆಳಿದೊಡೆ ಜ್ಞಾನವೆಲ್ಲಿ

ಸುಜ್ಞಾನಿ ಸಂಗವಿಲ್ಲದೊಡೆ ಒಳಿತೆಲ್ಲಿ

ಭಕ್ತಿಯೇ ಇಲ್ಲದೊಡೆ ದೇವರೆಲ್ಲಿ

ಕರ್ಮವೇ ಮನೆ ಕಾಡಿದೊಡೆ ಉಳಿವೆಲ್ಲಿ

ಕಾಯಕದಿ ಮನಸ್ಸು ನೆಟ್ಟೋಡೇ

ಲಿಂಗದ ನಮ್ಮ ಬಸವಣ್ಣನು ನಗುವನಲ್ಲೀ


ಬಲ್ಲೆ ಅಂದೋಡೆ ಬಿಟ್ಟಿತೆ ಅರಿಷಡ್ವರ್ಗ

ಒಲ್ಲೆ ಎಂದೊಡೆ ಬಿಟ್ಟಿತೆ ನಮ್ಮ ಅರಿಷಡ್ವರ್ಗ

ಒಪ್ಪಿ ಶರಣಾದೊಡೆ ಬಿಟ್ಟಿತೆ ಈ ಅರಿಷಡ್ವರ್ಗ

ಗೆಲ್ಲುವೆ ಏನಲು ಕೊಲ್ಲಲು ಬಿಟ್ಟಿತೆ ಅರಿಷಡ್ವರ್ಗ

ಕಾಯಕವ ಕೈ ಮುಗಿದು ಮಾಡು ಅರಿಷಡ್ವರ್ಗ ಬಿಟ್ಟೋಗುವುದು ನಮ್ಮ ಬಸವಣ್ಣ


ಮನವು ಹಿಂಡಿತಯ್ಯ,  ಕನಸ್ಸು ಕುಕ್ಕಿತಯ್ಯ

ಆಸೆ ಹೊಕ್ಕಿತಯ್ಯ, ಜೀವ ಬೆಂದಿತಯ್ಯ

ಅರಿಷಡ್ವರ್ಗ ಸುಟ್ಟಿತಯ್ಯ, ಭಾವನೆ ಎಕ್ಕಿತಯ್ಯ

ಚಿಂತೆ ತಾಕಿತಯ್ಯ, ಭ್ರಮೆ ಬುಸುಗುಟ್ಟಿತಯ್ಯಾ

ಕಾಯಕದ ಅರಿವಿಲ್ಲದವನಿಗೆ ಬದುಕು ಬರೆ ನಮ್ಮ ಬಸವಣ್ಣ 


******************ರಚನೆ ***************

                 ಡಾ. ಚಂದ್ರಶೇಖರ. ಸಿ. ಹೆಚ್ 

Comments

Popular posts from this blog

Author biography of Chandrashekhar Channapura Halappa

ಬಾರ್ ನನ್ನ ಗೆಳೆಯ

11. Yeah dimple