ಖಾಲಿ ಪುಟ
ನಾ ಹುಟ್ಟುವ ಮುಂಚೆ
ಈ ಜೀವನ ಒಂದು ಖಾಲಿ ಪುಟ
ನನ್ನ ಅಮ್ಮನ ಗರ್ಭದಲಿ
ನಾ ಜನಿಸಿದೆ ಮಾಡಿ ಸಣ್ಣ ಹಠ
ಬದುಕನು ಬರೆದ ಬ್ರಹ್ಮ
ನೋಡದೆ ನನ್ನ ಹಣೆಯ
ಹುಡುಕುತ ಹೊರಟೆ ನಾನು
ನನ್ನವರ ಶಪಿಸಿ ವಿಧಿಯ
ಕೂಡುತ ಕಳೆಯುವ ಒಲವು
ನಲಿವು ನೋವಲಿ ಬೆಂದ ಮನವು
ಭಾವನೆಗಳ ಮೇಲೆ ನೆನಪಿನ ಗೆಲುವು
ಕನಸ್ಸುಗಳು ಕೈ ಜಾರಿದ ಹಾಗೆ ಮನವು
ಖಾಲಿ ಜೀವನದಿ ಗೀಚಿದವನಿಗೆ
ತಿಳಿಯದೆ ಬದುಕಿನ ಒಗಟು
ಬಿಡಿಸುತ ಹೊರಟೆ ಗಾದೆಯ
ಪ್ರೀತಿ ಪ್ರಣಯದ ಸಗಟು
ಯಾರು ಗೆದ್ದರು ಈ ಜೀವನದ ಆಟ
ಬದುಕು ಸುಖ ದುಃಖದ ಓಟ
ಮಾಡುತ್ತಿರುವನು ಕಣ್ಣಿಗೆ ಬೀಳದೆ ಪಾಠ
ಸೆಳೆಯುತಿದೆ ನನ್ನ ಮಿಂಚಿನ ನೋಟ
ಮನಸ್ಸಿನ ಬೇಲಿಯಲಿ ಅರಳಿದ ಹೂವು
ವಸಂತದ ಚಿಗುರಲಿ ಅವಿತ ಮಾವು
ಪಯಣ ಹಬ್ಬಗಳ ಸಿಹಿ ಬೇವು
ದೇವರೇ ನೀಡಬೇಡ ಮನಕೆ ನೋವು
ಕಣ್ಣ ಅಂಚಿನ ನೋಟದಿ ಕಾರ್ಮೋಡದ ಮುಗಿಲು
ತಾರೆಗಳ ತೋಟದಿ ನಕ್ಷತ್ರಗಳ ಬುಗಿಲು
ಲೆಕ್ಕ ತಪ್ಪಿದೆ ಈ ಬಾಳು ಒಲವಲಿ ದಿಗಿಲು
ಬದುಕು ಬಣ್ಣದ ನೀಲಿ ಕಡಲು
**********ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment