ವಚನಗಳು -29
ಕಾಯವು ಭಕ್ತಿಯೇಂದೊಡೆ, ಜೀವವು ಭಕ್ತಿಯೆಂದೊಡೆ
ಪ್ರಾಣವೂ ಭಕ್ತಿಯೆಂದೊಡೆ, ಧನವು ಭಕ್ತಿಯೆಂದೊಡೆ
ಭಾವವು ಭಕ್ತಿಯೆಂದೊಡೆ, ದೇಹವು ಭಕ್ತಿಯೆಂದೊಡೆ
ಕಾಯಕವ ಕೈ ಮುಗಿದು ಮಾಡು ಭಕ್ತಿಯ ಪರಮಾನಂದ ನೋಡೆಂದ ನಮ್ಮ ಬಸವಣ್ಣ
ನಮ್ಮಯ ಹೊಟ್ಟೆ ಕಿಚ್ಚು ನಮ್ಮನೆ ಸುಟ್ಟಿತು
ಮಾಡಿಕೊಂಡ ಗಾಯ ಮನವ ಹುಣ್ಣಗಿಸಿತು
ಸುಖವು ಎಲ್ಲಾ ಕೇಡು ದುಃಖಗಳ ನುಂಗಿತ್ತು
ಕಾಯಕವು ಎನ್ನ ಜೀವನವ ಪಾವನ ಮಾಡಿತು ನಮ್ಮ ಬಸವಣ್ಣ
ಕೋಲು ಮುರಿದ ಕಡ್ಡಿಯಂತೆ,ನೇಣು ಬಿಗಿದ ಗೊಂಬೆಯಂತೆ
ಈ ಜೀವ ನೀ ಆಡಿಸಿದ ಬುಗುರಿಯಂತೆ
ನೀ ನುಡಿಸಿದಂತೆ ನುಡಿವೆನು, ಕುಣಿಸಿದಂತೆ ಕುಣಿವೆನು
ನಡೆಸಿದಂತೆ ನಡೆವೆನು, ನೀ ಇರಿಸಿದಂತೆ ಇರುವೆನು
ಕಾಯಕವ ಕೈ ಮುಗಿದು ಮಾಡುವೆನು ನಮ್ಮ ಬಸವಣ್ಣ
****************ರಚನೆ *****************
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment