ಸುಖವೆಲ್ಲಿದೆ




ನನ್ನವರು ನನಗೆ  ಮುಳ್ಳಾದ

ಮೇಲೆ ಬದುಕಲ್ಲಿ ಸುಖವೆಲ್ಲಿದೆ

ನಂಬಿದವರು ನನ್ನ ಚುಚ್ಚಿ ಇರಿದ

ಮೇಲೆ ಬಾಳಲ್ಲಿ ಹಿತವೆಲ್ಲಿದೆ


ಮರಳುಗಾಡಿನಲ್ಲಿ ನೀರನ್ನು ಬಯಸಿದರೆ

ಬಾಯಾರಿಕೆ ನಿಂತು ಹೋಗುವುದೇ

ಇಟ್ಟ ಗುರಿ ತಪ್ಪಿದ ಮೇಲೆ

ಬಾಣ ಬಿಡುವವನ ಬೆಲೆ ಎಲ್ಲಿದೆ


ತಿನ್ನುವ ಅನ್ನ ವಿಷವಾದ ಮೇಲೆ

ಹಸಿವ ಹೊಟ್ಟೆ ತುಂಬುವುದೇ

ಮನವು ಮರ್ಕಟವಾದ ಮೇಲೆ

ಹೊತ್ತ ದೇಹಕ್ಕೆ ಸುಖವೆಲ್ಲಿದೆ


ಬೀಜವೇ ವಿಷದಿಂದ ಇರುವಾಗ

ಬೆಳೆದ ರಾಗಿಗೆ ಉಳಿವೆಲ್ಲಿದೆ

ಸುರೊಂದು ಮಳೆಗೆ ಸೋರುವಾಗ

ಮಲಗಲು  ನೆಲೆ ಎಲ್ಲಿದೆ


ಕನಸ್ಸೊಂದು ನನ ಕೊಲ್ಲುತಿರುವಾಗ 

ಆಸೆಗಳಿಗೆ ಸಾವು ಬಳಿ ಬಂದಿದೆ

ನೆನಪುಗಳು ನನ ಸುಡುತ್ತಿರುವಾಗ

ದೇಹವು ಮುಪ್ಪಾಗದೆ


***********ರಚನೆ ****

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20