ಗಂಗೆ ಹರಿದವಳೇ
ಹರಿಯುತಿಹಾ ನದಿ ಊಕ್ಕಿ ಹರಿದಿದೆ
ಹಸಿರು ಪೈರುಗಳ ಕೋಚ್ಚಿ ಸಾಗಿದೆ
ತಡೆಯಲ್ಲಿ ನನಗೆ ಗುಡುಗುವ ಶಬ್ದ ಹೇಳಿದೆ
ನೆಲವನ್ನು ಚುಚ್ಚಿ ಮಣ್ಣು ಬರಿದಾಗಿದೆ
ನದಿಯ ಬಣ್ಣದಿ ನೆತ್ತರು ಕಂಡಂತೆ
ಹರಿವ ರಬಸಕೆ ಮನವು ಬೆಂದಂತೆ
ತಡೆ ಎಲ್ಲಿ ನನಗೆ ಕೂಗಿ ನುಡಿದಂತೆ
ನೋವಲಿ ಮನುಷ್ಯ ತೇಲಿ ಹೋದಂತೆ
ಪ್ರಕೃತಿಗೆ ತೊಡೆ ತಟ್ಟಿದ ಮನುಜ
ಮಾರಿ ಹಬ್ಬಕೆ ಬಲಿ ಹಾದಂತೆ ಹುಂಜ
ತಡಕಿದರೆ ಸಿಕ್ಕದು ನೀರಿನಲ್ಲಿ ಮುಕ್ಕಿಹುದು
ನರ ಮಾನವನ ಸೋಕ್ಕು ನೀರಿನಲ್ಲಿ ಬರಿದು
ದೇವರೇ ತಬ್ಬಿಬ್ಬು ಪ್ರಕೃತಿಯ ನರ್ತನಕೆ
ಗಂಗೆ ಹೊಡವಳೇ, ಕುಣಿದವಳೇ, ನಲಿದವಳೇ
ತಣ್ಣಗಾಗುವ ಹೊಳಗೆ ನೆಲವ ಗುಡಿಸವಳೇ
ಮಾನವವ ಆಸೆ, ಕನಸ್ಸುಗಳ ಪುಡಿ ಮಾಡವಳೇ
************ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment