2. ಹಾರ್ಮೋನುಗಳು ನಮ್ಮ ಭವಿಷ್ಯ ರೂಪಿಸುವವೇ




ಹಾರ್ಮೋನಗಳು ರಾಸಾಯನಿಕ ಸಂದೇಶವಾಹಕಗಳು ಅವುಗಳು ನೇರವಾಗಿ ರಕ್ತದಲ್ಲಿ ಸ್ರವಿಸಿ. ರಕ್ತದ       ಮೂಲಕ    ಹಾರ್ಮೋನ್ಗಳು ನಮ್ಮ ದೇಹದ ಅಂಗಗಳು ಮತ್ತು ಅಂಗಾಂಶಗಳಲ್ಲಿ ತಮ್ಮ ಕೆಲಸವನ್ನು ಮಾಡುತ್ತವೆ. ಈ ಹಾರ್ಮೋನಗಳು ಮನುಷ್ಯನ ದೇಹದಲ್ಲಿ ಹಲವಾರು ಪರಿಣಾಮಗಳನ್ನು ಉಂಟು ಮಾಡುತ್ತವೆ.

1) ಪ್ರಚೋದನೆ ಮತ್ತು ಬೆಳವಣಿಗೆಯ ಪ್ರತಿಬಂದ

2) ಎಚ್ಚರ ನಿದ್ದೆ ಚಕ್ರದ ನಿರ್ವಹಣೆ

3) ಮನಸ್ಥಿತಿಯ ಏರುಪೇರು

4) ರೋಗನಿರೋಧಕ  ವ್ಯವಸ್ಥೆಯ ಸಕ್ರಿಯ ಅಥವಾ ಪ್ರತಿಬಂದ

5) ಚಯಾಪಚಯ ಕ್ರಿಯೆಯ ನಿಯಂತ್ರಣ

6) ಮಿಲನ, ಹೋರಾಟ, ಪಲಾಯನ ಕ್ರಿಯೆಗೆ ಸಜ್ಜುಗೊಳಿಸುವುದು

7) ದೇಹವನ್ನು ನಮ್ಮ ಜೀವನದ ಹೊಸ ಹಂತಗಳಾದ ಪ್ರೌಢವಸ್ಥೆ, ಪೋಷಕ್ತವ, ಋತುಬಂದ

8) ಸಂತಾನೋತ್ಪತ್ತಿ  ಚಕ್ರದ ನಿಯಂತ್ರಣ

9) ಹಸಿವಿನ ಕಡುಬಯಕೆಗಳು

ಹಾರ್ಮೋನಗಳನ್ನು ಆರ್ನಲ್ಡ್ ಆಡೋಲ್ಫ್ ಬೆರ್ಥಡ್ (1849), ಚಾರ್ಲ್ಸ್ ಫ್ರಾನ್ಸಿಸ್ ಢಾರ್ವಿನ (1880), ಬೇಲಿಸ್ ಮತ್ತು ಸ್ಟಾರ್ಲಿಂಗ್ (1902) ಅನ್ವೇಷಣೆ ಮಾಡಿದ್ದಾರೆ.

ನಮ್ಮ ದೇಹದಲ್ಲಿ ಹಾರ್ಮೋನಗಳ ಪಾತ್ರ ದೊಡ್ಡದು ಏಕೆಂದರೆ ಅವುಗಳ ಸ್ರವಿಸುವಿಕೆ ನಮ್ಮ ದೇಹದಲ್ಲಿ ಸಾಕೋಷ್ಟ್ಟು ಪರಿಣಾಮಗಳನ್ನು ಉಂಟು ಮಾಡುತ್ತವೆ. ಹೀಗೆ ಹಾರ್ಮೋನಗಳು ಬಾಲ್ಯದಿಂದ ಪ್ರೌಢವಸ್ಥೆಯ ತನಕ ಅವುಗಳು ನಮ್ಮ ದೇಹದಲ್ಲಿ ವಿಧವಿದ ಕಾರ್ಯಗಳನ್ನು ನಿರ್ವಹಿಸುತ್ತವೆ.

ಮನುಷ್ಯನ ದೇಹದಲ್ಲಿ ವಿವಿಧ ಹಾರ್ಮೋನ್ಗಗಳು  ಮತ್ತು ಲೈಂಗಿಕಹಾರ್ಮೋನಗಳಾದ ಟೆಷ್ಟೋ ಸ್ಟೇರೋನ್, ಪ್ರೊಜೆಸ್ಟೇರೋನ, ಅಂಡ್ರೋಸ್ಟೇರೋನ, ಈಸ್ಟಾರೋನ ಮುಂತಾದವುಗಳು ಸ್ರವಿಸುತ್ತವೆ, ಇವುಗಳಿಂದ ನಮ್ಮ ದೇಹದ ಮಾನಸಿಕ ಚಲನೆಗಳು ಬದಲಾವನಣೆಯಾಗುತ್ತವೆ. ನಮ್ಮ ದೇಹದ ವ್ಯವಸ್ಥೆ ಹೀಗಿರುವಾಗ, ನಾವುಗಳು ವಿದ್ಯಾರ್ಥಿಗಳು ತಮ್ಮ ದೈನಂದಿನ ಕಾರ್ಯಗಳು ಹಾಗೂ ಶಾಲೆಯ ಪಠ್ಯದ ಚಟುವಟಿಕೆಯಲ್ಲಿ ಉತ್ತಮವಾಗಿದ್ದಾರೆ ಅಥವಾ ಇಲ್ಲವೇ ಎಂದು ತಿಳಿಯುವುದು ಕಷ್ಟಸಾಧ್ಯ.

ತಂದೆ ತಾಯಿಗಳು ತಮ್ಮ ಮಗ  ಅಥವಾ ಮಗಳನ್ನು ಶಾಲೆಗೆ ಕಳುಹಿಸಿ ಚಿಂತಿಸುತ್ತಿರಬಹುದು, ನಮ್ಮ ಮಕ್ಕಳು ಶಾಲೆಯ ಓದಿನಲ್ಲಿ ಹಿಂದೆ ಇದ್ದಾರೆ ಎಂದು, ಹಾಗೆಯೇ ನಮ್ಮ ಮಗಳು ತುಂಬಾ ಒಳ್ಳೆಯವಳು ಅವಳು ನಮ್ಮ ಮಾತನ್ನು ಸರಿಯಾಗಿ ಕೇಳುವುದಿಲ್ಲ ಯಾವೋದೊ ಹುಡುಗನನ್ನು ಪ್ರೀತಿಸುತ್ತಿದ್ದಳಂತೆ, ಆ ಹುಡುಗ ನಮ್ಮ ಹುಡುಗಿಯನ್ನು ಪ್ರೀತಿ ಪ್ರೇಮ ಎಂದು ತಲೆ ಕೆಡಿಸಿದ್ದಾನೆ, ಹೀಗೆ ತಂದೆ ತಾಯಂದಿರು ತಮ್ಮ ಮಕ್ಕಳ ಬಗ್ಗೆ ಹೇಳುವುದು ಉಂಟು ಎಲ್ಲದಕ್ಕೂ ನಾವು ಕಾರಣ ಹುಡುಕುತ ಹೊರಟರೆ ಕಂಡಿತಾ ನಮಗೆ ಮಾಹಿತಿ ಸಿಗುವುದಿಲ್ಲ.ಆದರೇ ಅವರಲ್ಲಿ ಉತ್ಪತ್ತಿ ಹಾಗುವ ಲವ್ ಹೊರ್ಮೋನ್ಗಳು ಈ ರೀತಿ ಮಾಡುವುದು ಸಹಜ ಹುಡುಗನಿಗೂ ಪ್ರೀತಿ ಹುಟ್ಟುತ್ತದೆ ಹಾಗು ಹುಡುಗಿಯರಿಗೂ ಮನಸ್ಸು ಸೆಳೆಯುತ್ತದೆ. ನಾವೆಲ್ಲ ಕೇಳಿದ್ದೇವೆ ಆ ವಯಸ್ಸೇ ಅಂತಹುದು ಎಂದು, ಆ ವಯಸ್ಸಿನಲ್ಲಿ ಸ್ರವಿಸುವ ಸೆಕ್ಸ್ ಹೊರ್ಮೋನಗಳು ತಮ್ಮ ಪರಿಣಾಮ ಬೀರಿರುತ್ತವೆ.

ನಾವುಗಳು ಮನೆಯಲ್ಲಿ  ದೂರದರ್ಶನದಿ ಸಿನಿಮಾಗಳು, ಹಾಡುಗಳು ಅಥವಾ ಧಾರಾವಾಹಿಗಳನ್ನು ವೀಕ್ಷಣೆ ಮಾಡುತ್ತೇವೆ, ಒಂದೇ ಚಾನೆಲ್ ಬೇಸರವಾದಲ್ಲಿ ಮತ್ತೊಂದು ಚಾನೆಲ್ ಗೆ ಬದಲಾಹಿಸಬಹುದು, ಅದು ಹೇಗೆ ಸಾಧ್ಯ ಎಂದರೆ ದೂರದರ್ಶನದ ರಿಮೋಟ್ ನಮ್ಮ ಬಳಿ ಇರುತ್ತದೆ . ಆದರೇ ನಮ್ಮೊಳಗೇ ಸ್ರವಿಸುವ ಹೊರ್ಮೋನಗಳು ಎಲ್ಲಿ ಹುಟ್ಟುತ್ತವೆ ಅಲ್ಲಿಂದಲೇ ಸಂಕೇತಗಳನ್ನು ನಮ್ಮ ಅಂಗಾಂಶಗಳು ಹಾಗೂ ರಕ್ತದ ಮೂಲಕ ಮೆದುಳಿಗೆ ರವಾನಿಸುತ್ತವೆ.  ಇವುಗಳ ನಿಯಂತ್ರಣ ತಂದೆ ತಾಯಿಗಳಿಂದ ಅಥವಾ ಶಿಕ್ಷಕರಿಂದ ಅಸಾಧ್ಯವಾದುದು.ಹೀಗೆ ನಾವು ನಮ್ಮ ಗೆಳೆತನವನ್ನು ನಮ್ಮ ಯೋಚನಾ ಶಕ್ತಿಗೆ ಸರಿಹೊಂದುವ ಗೆಳೆಯನನ್ನೇ ಆಯ್ಕೆ ಮಾಡಿಕೊಂಡಿರುತ್ತೇವೆ, ಅವರು ಒಳ್ಳೆಯವರು ಅಥವಾ ಕೆಟ್ಟವರು ಹಾಗಿರಬಹುದು.

ನಾವು ಹಲವಾರು ಬಾರಿ ಹೇಳುತ್ತೇವೆ ನಮ್ಮ ಪರಿಸರ ನಮ್ಮ ಬೆಳವಣಿಗೆಗೆ ಪೂರಕ ಅಥವಾ ಮಾರಕ ಎಂದು ಮಾತನಾಡುತ್ತೇವೆ ಹೀಗೆಂದರೆ ನಮ್ಮ ಸುತ್ತಮುತ್ತಲಿನ ಜನ ಅಥವಾ ಸಮಾಜ ನಮ್ಮನ್ನು ಬೇರೆಯ ದಾರಿಗೆ ಕೊಂಡು ಓಯ್ಯುವುದು ನಮ್ಮನು ಹಾಳು ಮಾಡಿದೆ ಎಂದು, ಇದಕ್ಕೆ ಕಾರಣ ನಮ್ಮ ದೇಹದಲ್ಲಿ ಸ್ರವಿಸುವ ಹಾರ್ಮೋನಗಳು ಬೇರೆ ಬೇರೆ ರೀತಿಯ ಪರಿಣಾಮ ಬೀರುತ್ತವೆ ಹಾಗೆಯೇ ತುಂಬಾ ವಯಸ್ಸಿನವರು ಚಿಕ್ಕವರನ್ನು ಪ್ರಚೋದಿಸಿರಬಹುದು.

ಹಾಗಿದ್ದರೆ ನಮಗೆ ಪ್ರಶ್ನೆ ಮೂಡಬಹುದು ನಮ್ಮ ಜೊತೆಗಾರ ಎಲ್ಲಾ ಪಾಠ ಪ್ರವಚನಗಳಲ್ಲಿ ಉತ್ತಮವಾಗಿರುತ್ತಾನೆ ನಾವು ಹಿಂದೆ ಬಿದ್ದಿರುತ್ತೇವೆ. ಯಾಕೆಂದರೆ ಹಾರ್ಮೋನ್ ಮಾಡುವ ಪರಿಣಾಮದ ಶಕ್ತಿಯನ್ನು ನಿಯಂತ್ರಿಸುವಲ್ಲಿ ನಮ್ಮ ಮನಸ್ಸು ವಿಪಲವಾಗಿದೆ. ಮನಸ್ಸು ಶಕ್ತಿಯುತವಾದರೆ ದೇಹದಿ ಆಗುವ ಪರಿಣಾಮಗಳನ್ನು ನಿಯಂತ್ರಿಸಬಹುದು.

ಯಾವಾಗಲೂ ಒಂದೇ ತರಹ ಯೋಚನೆ ಮಾಡುವವರು ಬೇಗ ಒಳ್ಳೆಯ ಸ್ನೇಹಿತರಾಗುತ್ತಾರೆ ಇದು ಸರ್ವೆ ಸಾಮಾನ್ಯ , ಆದ್ದರಿಂದ ನಾವು ಉತ್ತಮವಾಗಿ ರೂಪುಗೊಳ್ಳಲು ಹಾಗು ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಸೇವಿಸುವ ಆಹಾರ ನಮ್ಮಲ್ಲಿ ಸ್ರವಿಸುವ ಹಾರ್ಮೋನಗಳು ಸಹಕಾರ ನೀಡಿದರೆ ಮಾತ್ರವೇ ಸಾಧ್ಯ ನಾವು ಸಮಾಜದಲ್ಲಿ ಉತ್ತಮ ಮನುಷ್ಯನ್ನಾಗಿ ರೂಪುಗೋಳ್ಳಲು.

ಈಗ ನೀವೇ ಹೇಳಿ ಹಾರ್ಮೋನ ನಮ್ಮ ಭವಿಷ್ಯ ರೂಪಿಸುವವೇ?????

ದೇಹದಿ ಸ್ರವಿಸುವುದು ಹಾರ್ಮೋನ್

ನಿನ್ನ ಮನಸ್ಸಿಗೆ ಇವುಗಳೇ ಚೇರ್ಮನ್

ಆಡಿಸಿದಂತೆ ಆಡ ಬೇಕು ಸ್ಪೀಡೆರ್ಮನ್

ಚಿಂತೆ ಬೇಡ ಖುಷಿ ಪಡು ಕೂಲ್ ಮ್ಯಾನ್ .


ಆಡಿಸಿದಂತೆ ಆಡುವುದೊಂದೇ ನಮ್ಮದು ಏನಿದೆ ಇಲ್ಲಿ.ಕಷ್ಟವ ಜಯಿಸಿ ಸಂತೋಷದಿ ಮನಸ್ಸನು ಗೆಲ್ಲುವ ಇಲ್ಲಿ. ನೂರು ಚಿಂತೆ ಇದ್ದರೆ ಏನು ಮರೆತು ಕುಣಿಯುವ ಬನ್ನಿ.

***************ಲೇಖಕರು ***********

         ಡಾ. ಚಂದ್ರಶೇಖರ. ಸಿ. ಹೆಚ್ 



Comments

Post a Comment

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35