ವಚನಗಳು -28



ಎಲ್ಲಾ ವಿದ್ಯೆಯ ಕಲಿತೆ,ಆಕಾಶದಿ ಹಕ್ಕಿಯಂತೆ ಹಾರಲು ಕಲಿತೆ

ಮಂಗಳ ಗ್ರಹದಿ ಸುತ್ತಿದೆ , ಸಮುದ್ರದಿ ಈಜಿದೆ.

ದೇಶಗಳನ್ನು ನೋಡಿದೆ, ಕೋಶವನ್ನು ಓದಿದೆ

ಯಾವುದನ್ನೂ ಕಲಿತರೇನು, ವಿಧಿ ಬರೆದ ಸಾವನ್ನು ಗೆಲ್ಲಲದೀತೇ..... ನಮ್ಮ ಬಸವಣ್ಣ

 

ಸಕಲವನು ತಿಳಿದು ಉಪಯೋಗವೇನು

ನೂರು ಸ್ತೋತ್ರಗಳನ್ನು ಭಜಿಸಿ ಪ್ರಯೋಜವೇನು

ದೇವರಿಗೆ ಪಂಚಾಮೃತ ನೈವೇದ್ಯದಿ ಫಲವೇನು

ಸತ್ಸಂಗದಿ ಜ್ಞಾನಿಗಳ ಮಾತು ಕೇಳಿದರೆ ಫಲವೇನು

ನಿನ್ನ ನೀ ಅರಿಯದೆ, ಕಾಯಕವ ತಿಳಿ ಕೈ ಇಡಿದು ನಡೆಸುವನು ನಮ್ಮ ಬಸವಣ್ಣ


ಭಯ ಭೂತವಾಗಿ. ಕಾಮ ನೆಲೆಯಾಗಿ.

ಮದ ಹುಚ್ಚಾಗಿ. ಕ್ರೋದ ಕುದಿಯಾಗಿ

ಲೋಭ ನನ್ನ ಹಾಳಿ, ಮತ್ಸರ್ಯ ನನ್ನ ಚುಚ್ಚಿ

ಇರಿದು ಕೊಲ್ಲುವಾಗ.... ಮೆಚ್ಚುವ ಕಾಯಕವ ಮಾಡು

ಕೈಲಾಸದಿ ನಮ್ಮ ಬಸವಣ್ಣ ಕರೆವನು


****************ರಚನೆ *************

           ಡಾ. ಚಂದ್ರಶೇಖರ. ಸಿ. ಹೆಚ್ 

Comments

Popular posts from this blog

ನೋವು ತುಂಬಿ

ಹಣತೆ ಆಳುತಿದೆ

Author biography of Chandrashekhar Channapura Halappa