ಓ ಮಗುವೇ
ಕನಸ್ಸುಗಳ ಸಂತೆಯಲಿ
ಮನದಿ ಕೂತ ವನಿತೆ
ನನ್ನ ಓಡಲ ಅಳದಲಿ
ಮೂಡಿದ ಒಲವ ಕವಿತೆ
ಗರಿ ರೆಕ್ಕೆ ಬಿಚ್ಚಿ ಜಿಗಿದು
ಮೇಲೆ ಹಾರಲು ಕಲಿತೆ
ನಿನ್ನ ಒಲವ ನೆನಪಿನಲಿ
ಬದುಕ ನಾ ಮರೆತೆ
ನೂರು ದಾರಿ ಕಂಡರು
ನೀನೆ ನನ್ನ ಉಸಿರು
ಬಣ್ಣಗಳ ಜಾತ್ರೆಯಲಿ
ನಿನ ಹೆಸರೇ ಹಸಿರು
ಕನಸ್ಸು ಹೊತ್ತು ಸಾಗುತ
ಮಿಡಿವ ಪ್ರೀತಿ ಮಂಪರು
ಮನದಲ್ಲಿ ಆಸೆ ಮೂಡಿ
ಚಿಗುರಿದಂತೆ ಬಸಿರು
ಒಡಲಲ್ಲಿ ಪುಟ್ಟ ಹೆಜ್ಜೆ ಇಟ್ಟು
ಅಂಗಲೂ ಬಡಿವ ಸದ್ದು
ನರನಾಡಿಗಳಲಿ ಹರಿವ ರಕ್ತ
ಕುಣಿದಿದೆ ಖುಷಿಯ ಗೆದ್ದು
ಹೇಗೆ ಬರಲಿ ಹೊರ ನಾನು
ಅಮ್ಮನ ಹೊಟ್ಟೆ ಹೋದ್ದು
ಕಾಲವು ಹೇಳುತಿದೇ ಹೊರಡು
ನೀನು ನೆತ್ತರಲಿ ಜಾರಿ ಬಿದ್ದು
ಹೆತ್ತ ಕರುಳು ಪ್ರೀತಿಲಿ ಕೂಗಿದೆ
ನೀನೆ ನನ್ನ ಮುದ್ದು ಕಂದ
ನಗುವ ಮೊಗದ ಚೆಲುವ
ನೀನು ಎಷ್ಟು ಚೆಂದ
ನೋಡುತ ಮರೆತೆ ಜಗವ
ಆ ನಿನ್ನ ಸೋಜಿಗದ ಅಂದ
ಉಸಿರು ಉಸಿರು ಹೇಳಿದೆ
ಬಿಡಿಸದ ಒಲವ ಬಂದ
********ರಚನೆ **********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment