ಸಾಲು ಇರುವೆ
ಸಾಲು ಸಾಲು ಇರುವೆಗಳು
ಕಟ್ಟಿದ ಹಾಗೆ ಸೇತುವೆ
ಬಾಳಿನಲ್ಲಿ ಸಾಗಿ ಸಾಗಿ ಒಗ್ಗಟ್ಟಿನಲ್ಲಿ ನಿಂತಿವೆ
ಹೊಟ್ಟೆಗಾಗಿ ಊಟ ಹುಡುಕಿ
ಅನ್ನದ ಅಗುಳು ಸಾಗು ಹಾಕಿ
ಸಾಲು ಕಟ್ಟಿ ನಿಂತಿವೆ
ಮೂಲೆಯಲ್ಲಿ ಸಕ್ಕರೆ ಮನವ ಕಲಕಿ
ಕರುಳ ಬಗೆವ ಹಸಿವು
ನಾನು ಹೊರಟು ನಿಂತೇ ತರಲು
ದಾರಿಯಲ್ಲಿ ಗುಂಡಿ. ನೋವಾಯಿತು ಮಂಡಿ
ಹಿಂದೆ ಹಿಂದೆ ಅನ್ನದ ಹಗುಳ ನೂಕಿ
ಸೂರ್ಯನ ಬೆಳಕು ಕಂಡು,
ಇಡಿದೆ ನಾನು ಊರ ದಾರಿಯ ನಮ್ಮೂರ ಕೇರಿಯ
ಯಾರೋ ಇಟ್ಟರು ಅಕ್ಕಿ ಚೂರು
ಹರಸಿ ಬಂದರು ನನ್ನ ಅವರು
ದೇವರೆಂದು ಬೇಡಿ ನನಗೆ ಅನ್ನ ನೀಡಿ ಕೈ ಮುಗಿದು ಹೊರಟರು
ಸಾವು ಕಂಡು ಸೋತೆವು ನಾವು
ನಮ್ಮನು ನೋಡಿ ತುಳಿವರು
ನೋವ ನರ್ತನ,ಮನವ ಇಂಡಿ
ಮುರಿದರು ಕಾಲ ಮಂಡಿ
ಕಾಲಿನಲ್ಲಿ ಹೋದೇವರು ಕಣ್ಣಲಿ ನೀರು ತರಿಸುವರು
*********ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment