ವಚನಗಳು -30
ಕಾಯಕವು ನನ್ನ ಪ್ರಾಣ. ಕಾಯಕವೇ ನನ್ನ ಉಸಿರು
ಕಾಯಕವೇ ನನ್ನ ಖುಷಿ, ಕಾಯಕವೇ ನನ್ನ ದೇವರು
ಕಾಯಕವೇ ನನ್ನ ಗೆಲುವು, ಕಾಯಕವೇ ನನ್ನ ಬದುಕು
ಕಾಯಕವೇ ನನ್ನ ಫಲ, ಕಾಯಕವೇ ನನ್ನ ಬಲ
ಕಾಯಕದಿ ನಾನು ಸರ್ವಸ್ವ ಕಂಡೆನು ನನ್ನೊಡೇಯಾ ನಮ್ಮ ಬಸವಣ್ಣ
ನುಡಿವ ಮಾತಿನಲ್ಲಿ ಬಸವಣ್ಣನ ಕಾಣಿರೋ
ನೋಡುವ ನೋಟದಲ್ಲಿ ಬಸವಣ್ಣನ ಕಾಣಿರೋ
ಉಣ್ಣುವ ಊಟದಲ್ಲಿ ಬಸವಣ್ಣನ ಕಾಣಿರೋ
ಪೂಜುವ ಲಿಂಗದಲಿ ಬಸವಣ್ಣನ ಕಾಣಿರೋ
ಮಾಡುವ ಕೆಲಸದಲಿ ಬಸವಣ್ಣನ ಕಾಣಿರೋ
ಕಾಯುವನು ನಮ್ಮ ಬಸವಣ್ಣ ನೋಡಿರೋ ತಂದೆ ತಾಯಿಗಳಿರ
ಜಂಗಮ ಲಿಂಗಾಯಿತರಿಗೂ ಲಿಂಗವೆ ದೇವರು
ಮಾದರ ಲಿಂಗಯಿತರಿಗೂ ಲಿಂಗವೆ ದೇವರು
ಕುರುಬ ಲಿಂಗಾಯಿತರಿಗೂ ಲಿಂಗವೆ ದೇವರು
ವೀರಶೈವ ಲಿಂಗಾಯಿತರಿಗೂ ಲಿಂಗವೆ ದೇವರು
ಸಕಲ ಜಾತಿ ಲಿಂಗಾಯಿತರಿಗೂ ಲಿಂಗವ ಹಿಡಿದ
ಕಾಯಕವೇ ಕೈಲಾಸದ ಯೋಗಿ ನಮ್ಮ ಬಸವಣ್ಣನೆ ದೇವರು
****************ರಚನೆ **************
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment