ಏಕೆ ಹೀಗೆ
ಕನಸ್ಸುಗಳ ಸಂತೆಯಲಿ ಬೆಂದು
ಮನಸ್ಸಿನ ಚಿಂತೆಯಲಿ ನೊಂದು
ಕಾಲವ ನೋವಿನಲಿ ಕೊಂದು
ಆಸೆಗಳ ಕನಸ್ಸು ನೀನು ತಂದು
ಬಯಸಿದರೆ ಸುಖವು ಸಿಗುವುದೆಲ್ಲಿ
ಮೂರು ದಿನದ ಪಯಣ
ಪ್ರೀತಿಯ ಬೆಳಕು ಕಾರಣ
ಖುಷಿಯೇ ಇಲ್ಲಿ ಆಭರಣ
ಸಮಯ ಏಕೊ ಮರಣ
ದುಃಖವು ಏಕೆ ನನ್ನ ಕಾಡಿತಿಲ್ಲಿ
ಹೆಜ್ಜೆ ಹೆಜ್ಜೆಗೂ ಅವಮಾನ
ಒಲವ ಅಕ್ಕರೆ ಬಹುಮಾನ
ನೋವು ನಲಿವ ಯಜಮಾನ
ಇರುಳು ಬೆಳಕಿಗೆ ನಮನ
ನೊಂದ ಜೀವಕೆ ಸಾಂತ್ವನವೆಲ್ಲಿ
ಕಾಲ ಕಾರಣ ಕೇಳದೆ ಹೋಯ್ತು
ವಯಸ್ಸು ದಿನ ಕಳೆದರೆ ಹೋಯ್ತು
ಆಸೆಗಳ ಗಂಟು ದಿನವೂ ಹೆಚ್ಚಾಯ್ತು
ಕನಸ್ಸು ಆಸೆಗೆ ಮನವು ಹುಚ್ಚಯ್ತು
ಬದುಕು ಅರಿಯದ ಒಗಟಾಯ್ತು
ಯಾರು ಹೆಣೆದರು ಬಲೆಯ
ನಾನು ಶಪಿಸಿದೆ ವಿಧಿಯ
ಮನಸ್ಸು ಹೋಡುವ ನದಿಯ
ಹಾಗೆ ಬದುಕಲಿ ಹುರುಳಿತು ಸಮಯ
ಕಾರಣವಿಲ್ಲದೆ ಕಾಲದ ಕರೆಯ
************ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment