ಮಳೆ ಹನಿ
ಹನಿ ಹನಿ ಹನಿ ಹನಿ
ಚಿಟ ಪಟ ಮಳೆ ಹನಿ
ಕಣ್ಣಲೇ ಸುಡುತಿದೆ
ವಿರಹದ ಪ್ರತಿ ಧ್ವನಿ
ನೋಟ ನೋಟ
ಕಲೆತು
ನನ್ನೇ ನಾನು ಮರೆತು
ಬೀಳುವ ಮಳೆಗೆ
ಕಣ್ಣು ಕಣ್ಣು ಬೆರೆತು
ಪ್ರೀತಿ ಬಂತು ಹಾಗೆ
ಮಳೆ ಹನಿ ನಿಂತ ಮೇಗೆ
ಹೃದಯದಲ್ಲಿ
ನಡುಕ
ಕೈ ಒಮ್ಮೆ ಇಡುಕ
ಒಲವು ನಿನ್ನ
ಕರೆದು
ನುಡಿಯಿತು
ಇಂದು
ಬಾರೆ ನನ್ನ ಚೆಲುವೆ
ಒಲವ ಮಳೆಯಲೇಕೆ
ನೆನೆವೆ
ಕೈ ಇಡಿದು ನಡೆವೆ
ಮನದ ಆಸೆ
ಇಂದು
ಮಿಂಚಿನಂತೆ
ಬಂದು
ಕೂಗಿ ಕೂಗಿ ಕರೆಯಿತು
ಲವ್ ಯು ಎಂದು ಹೇಳಿತು
ತಾರೆಗಳ ತೋಟ
ತಾಗಿತ್ತು ನೋಟ
ನನ್ನ ಎದೆಯ
ಮೇಲೆ ಪ್ರೀತಿಯ ಆಟ
ಕೈಲಿ ಇಡಿದ ಕೊಡೆ
ಮಳೆ ನೀಲ್ತು ನಡೆ
ಪ್ರೀತಿ ಏಕೊ ಮೌನ
ನಮ್ಮ ನೋಟ ಕವನ
ಹನಿ ಹನಿ ಹನಿ ಹನಿ
ಚಿಟ ಪಟ ಮಳೆ ಹನಿ
ಕಣ್ಣಲೇ ಸುಡುತಿದೆ
ವಿರಹದ ಪ್ರತಿ ಧ್ವನಿ
***********ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Super poem
ReplyDelete