ದೇವರು ಎಲ್ಲಿ ಮಾಟವೆ ಇಲ್ಲಿ



ನನ್ನಮ್ಮ ಮುಂಜಾನೆ ಎದ್ದು

ನಿದ್ದೆಯ ಗೆದ್ದು,ಕಣ್ಮುಚ್ಚಿ ಕಣ್ಣೂಜ್ಜಿ

 ಹಾಸಿಗೆಯ ಮಡಿಸಿ, ನೀರಿನ ಒಲೆಗೆ ಊರಿ ಹಾಕಿ

ಸ್ನಾನದಿ ಮಿಂದೆದ್ದು, ಹೂವು ಕಿತ್ತು ಪೂಜೆಗೆ ತಂದು,

ಪೂಜೆಗೆ ಸಕಲವನು ಅಣಿಗೊಳಿಸಿ

ಭಕ್ತಿಯಲ್ಲಿ ಬೇಡುವಳು.

 ತಂದಿಟ್ಟ ದೇವರುಗಳ ತಿಮ್ಮಪ್ಪ ಕಾಯೋ,

ಶಿವನೇ, ಹರನೇ, ಮಂಜುನಾಥನೆ,

ಸುಬ್ರಮಣ್ಯನೆ, ಕರಿಬಸವೇಶ್ವರನೇ,

ಈಗೆ ಸಾಲು ಸಾಲು ದೇವರು....

ಭಕ್ತಿಯಲಿ ಪೂಜಿ ಹೂವಲ್ಲಿ ಸಿಂಗರಿಸಿ...

 ಕರ್ಪೂರದ ಆರತಿಯ ಮಾಡಿ

ದೇವರ ನಾಮವನು ಹಾಡಿ

ಕರೆವಳು ದೇವರ ಕಷ್ಟವ ನಿಗೂ.

 ಮನೆಯವರ ಯೋಗ ಕ್ಷೇಮದಿ ಸಾಗುವಂತೆ ಮಾಡು

ದೇವರು ಕಂಡಿಲ್ಲ ಪೂಜೆಯು ನಿಂತಿಲ್ಲ

ಯಾರೋ ಮಾಡಿಸಿದ್ದಾರಂತೆ ಮಾಟ

ಅಮ್ಮಂಗೆ ಕೈ ಮುಗಿದು ಪಟ್ಟಣದಿ ತಗಡುಗಳು.

. ನಿಂಬೆಹಣ್ಣು, ತಾಯತ, ತಾಳಿ, ತಗಡಿನಲಿ

 ಬಿಡಿಸಿದ ಕೈ ಮುರಿದ ಗೊಂಬೆ.. ಹಂದಿಯ ಕೂದಲು.

 ಹರಿಶಿನ ಕುಂಕುಮ, ತ್ರಿಶುಲ.... ಇಟ್ಟು ಕಳಿಸಿದ್ದಾನೆ

 ಪಂಡಿತನು

ಮನೆಯ ಹೆಸರ ಹೇಳಿ,

ಅದು ಚಲಿಸುತ್ತಿದೆಯಂತೆ ಭೂಮಿಯೊಳಗೆ.....

ಲೋಹಗಳಿಗೆ ಭೂಮಿಯಲಿ ಚಲನವುಂಟು......

 ಹರಿದು ಬಂದು ನಮ್ಮನೆಯ ಸುಡುತ ಉಂಟು

ಗೋಳಿಟ್ಟು ಅತ್ತು ಕರೆದು

 ಪಕ್ಕದ ಊರ ದೇವರ ತಂದು ಕೀಳಿಸಿದಳು ಮಾಟಾ....

ಸಿಕ್ಕ ಲೋಹಗಳನ್ನು ಬೆಂಕಿಯಲ್ಲಿ ಸುಟ್ಟು......

ಕಷ್ಟಗಳನ್ನು ದೇವರಿಗೆ ಬಿಟ್ಟು

ಬೇಡುತಿಹಳು ಅಮ್ಮ ಮತ್ತೆ ದೇವರ........

ಮತ್ತೆ ಇರಬಹುದೇ ಮಾಟದ ಅಪಸ್ವರ

ದೇವರು ಮೇಲೋ ದೆವ್ವವೇ ಮೇಲೋ,

ಮಾಡಿಸಿದ ಮಾಂತ್ರಿಕನ

ಯುಕ್ತಿಯ ಶಕ್ತಿಯೇ ಮೇಲೋ......

ಜೀವನ ಸಾಗಿಸಿ ದೇವರಿಗೆ ಒಂದಿಸಿ

 ಕಷ್ಟಗಳ ಸಹಿಸಿ ಬದುಕು ಕಟ್ಟೀಹಳು

ದೇವರ ಹೆಸರಲ್ಲಿ ನೆಮ್ಮದಿ ಇಲ್ಲದ ಉಸಿರಲ್ಲಿ

ಕಾಣದ ಕಣ್ಣು ಮುಕ್ಕಿಸುತ್ತಿದೆ ಮಣ್ಣು

ಜೀವನವು ಉಣ್ಣು ತಿನ್ನಲಾಗುತ್ತಿಲ್ಲಾ ದೇವರಿಗೆ ಇಟ್ಟ ಹಣ್ಣು

ಬದುಕು ಸಾಕೆ ಜೀವ ಯಾಕೆ ಬೇಕೋ

ನರಳುತಿಹಾ ಮನಸ್ಸಿಗೆ ಮುಕ್ತಿ ಶಕ್ತಿ ನೀಡುವನೇ ದೇವರು

ಅಜ್ಞಾನ, ಮೂಢನಂಬಿಕೆ, ಮೌಢ್ಯತೆ ತುಂಬಿರುವ

ಈ ನಾಡಿನಲಿ ವಿಜ್ಞಾನಿಗಳಿಗೆ ಕೆಲಸ ಸಿಕ್ಕರೆ

ದುಬೈನಲ್ಲಿ ನೀರಿನೊಳಗೆ ರೈಲು ಹೋದಂತೆ

ಭೂಮಿಯಲ್ಲಿ ಲೋಹಗಳ ಚಲನೆ ಸಾಧ್ಯವೇ ತಿಳಿದು

ಲೋಹಗಳು ಚಲಿಸುವಂತ್ತಿದ್ದರೆ. ಹೊಸದೊಂದು

ಆವಿಷ್ಕಾರವಾಗಿ ಅಜ್ಞಾನದ ಮನಸ್ಸುಗಳಿಗೆ

ವಿಜ್ಞಾನ ತಿಳಿದು.........

ದೇವರ ಆವಿಷ್ಕಾರವೇ ಹಾಗಬಹುದು


ವೈದ್ಯರೆ ಹೇಳಿ ಊಟ ಮಾಡುವ ಆಹಾರದಲ್ಲಿ

ಕುಡಿಯುವ ಚಹದಲ್ಲಿ, ಕಾಫಿ, ಹಾಗು ಜ್ಯೂಸು....

ನರಗಳ.... ಜೊತೆ ಆಟವಾಡುವ...... ಬೆರೆಸಿದ ಕೆಮಿಕಲ್

ಗಳು ತೊಂದರೆ ಕೊಟ್ಟು......... ಆಸ್ಪತ್ರೆಗೆ ಹೋಗಿ

ಮಾತ್ರೆಗಳು ನುಂಗುವುದು........ ಮಾಟವೇ

ದೇವರ ಆವಿಷ್ಕಾರ ಆಗುವುದೇ............... ಇದನ್ನೇ

ಇರಬೇಕು ಜನರು ಮಾಟಾ ಎಂದು ಕರೆಯುವುದು


*********ರಚನೆ *******

ಡಾ. ಚಂದ್ರಶೇಖರ ಸಿ. ಹೆಚ್ 

Comments

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20