ಮೂರು ದಿನದ ಬದುಕು
ಮೂರು ದಿನದ ಈ ಬದುಕು
ಜಯಿಸುಲು ಪ್ರೀತಿ ಹುಡುಕು
ಆಸೆಗಳೇ ಇಲ್ಲಿ ಕೆಡುಕು
ನೆನಪುಗಳ ಹಾಕು ಮೆಲುಕು
ಸುಟ್ಟ ಗಾಯಗಳು ಎಷ್ಟೋ
ಮಾದ ನೋವುಗಳು ಎಷ್ಟೋ
ಕಾಡಿದ ಕನಸ್ಸುಗಳು ಎಷ್ಟೋ
ತಿಂದ ಕಹಿ ನೆನಪು ಎಷ್ಟೋ
ಮನದಿ ಹಾಗೆ ಬಂದು ಹೋಗಿ
ಬದುಕು ಈಗ ಒಲವ ಮಾಗಿ
ಪ್ರೀತಿಯಲಿ ಈ ಜೀವ ಕೂಗಿ
ವಾಸಿಯದಂತೆ ಪ್ರೀತಿ ರೋಗಿ
ಕನಸ್ಸುಗಳ ಸಂತೆಯಲಿ ನಾನು
ಮನಸ್ಸಿನ ಚಿಂತೆಯಲಿ ನಾನು
ಜೀವ ಏಕೊ ನೋವಲಿ ಬೆದರಿದೆ
ಕಹಿ ನೆನಪಿನಿಂದ ಕೂಗಿ ಒದರಿದೆ
ಕಾರ್ಮೋಡವೊಂದು ಭೂಮಿಗೆ
ಸುರಿಸಿದಂತೆ ಒಲವೆ ಜೇನ ಮಳೆ
ನೆನೆದು ಪ್ರೀತಿಯಲಿ ತುಂಬಿ ಇಳೆ
ಬರಡು ಬದುಕಲಿ ಹಸಿರು ಬೆಳೆ
ನಾನು ಎಂಬ ಮಾತು ಬಲು ವಿಷ
ತೊಳೆದು ಅಹಂಕಾರದ ಕಸ
ಹುಡುಕು ಸಿಹಿಯ ರಸ ನಿಮಿಷ
ಸುಖದಿ ಬಾಳಲಿ ಬಂದು ಹರುಷ
***********ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment