ಮುನ್ನುಡಿ
ಒಡೆದ ಮನಸ್ಸಿಗೆ ಇಡಿಯಲೇಗೆ ಕನ್ನಡಿಯ
ದೇವರು ಬರೆದ ಬದುಕಿಗೆ ಮುನ್ನುಡಿಯ
ಆಡಿಸಿದ ಅಟಿಕೆಯಂತೆ ಜೀವನ ಓ ಗೆಳೆಯ
ಕೋಲು ಮುರಿಯಲಿಲ್ಲ ಹಾವು ಸಾಯಲಿಲ್ಲ ತಿಳಿ ಗಾದೆಯ
ಕಾಲಿ ಹಾಳೆ ಮೇಲೆ ಗೀಚಿದೆ ಕವನ
ಒಲವೆ ನನ್ನುಸಿರು ಬದುಕು ನಿನ್ನ ಹೆಸರು
ಕಾಲದ ಕೊಲಮಿಂಚಿಗೆ ಭೂಮಿ ಹಸಿರು
ಜೀವನದಿ ನಗುತಿರು ದುಃಖವ ಮರೆಯುತಿರು
ಅನುಭವದಿ ಕಲಿತ ಪಾಠ ಎಲ್ಲಿಯೂ ದೊರಕದು
ನೋವಿನಲ್ಲಿ ಮಾಗಿದ ಮನಸ್ಸು ಎಂದು ಸೋಲದು
ಸತ್ಯದ ನೆಲೆಯಲಿ ಧರ್ಮ ಸುಳ್ಳು ಎಂಬ ಕರ್ಮ
ಮಡಿವಂತಿಕೆಯ ನೆರಳು ಉದುರಿದಂತೆ ಅರಳು
ಕಾಣದ ಕೈಯಲ್ಲಿ ಬದುಕಿನ ಸೂತ್ರ
ಸುಮ್ನೆ ಬಜಿಸಿದರೆ ಸಿಕ್ಕುವುದೇ ಪಾತ್ರ
ನೋವು ನಲಿವುಗಳ ಪ್ರಪಂಚ ಸುತ್ತಿದೆ ನೇತ್ರ
ಕರ್ಮವ ಕಳೆಯಲು ತೀರ್ಥ ಯಾತ್ರ
ಕನಸ್ಸುಗಳ ಗೂಡಲಿ ಬದುಕಿನ ಪಯಣ
ಮರೆ ಮಾಚಿದಂತೆ ಒಲವ ತಳಿರು ತೋರಣ
ಬಯಕೆಯ ಹೋತ್ತಾ ನಿನ್ನಯ ಚಿತ್ರಣ
ಕಣ್ಣು ಮುಚ್ಚಿ ಬಿಡುವ ಹೊಳಗೆ ಜೇವವೇ ಮರಣ
**********ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment