Posts

Showing posts from February, 2022

ಕೊರೊನ

Image
  ಯಾರು ಎತ್ತರು ನಿನ್ನ ಕಾಡುತಿರುವೆ ಇನ್ನ ದೇಹ ಹೋಕ್ಕು ಮಾಡುತ್ತಿರುವೆ ನರ್ತನ ಯುವರ್ ನೋಟೋರಿಯಸ್ ಕೊರೊನ ವಯಸ್ಸ ಎಲ್ಲೇ ಮೀರಿ ನಡಿದಿದೆ ನಿನ್ನ ನಗಾರಿ ಜೀವದ ಮೇಲೆ ಸವಾರಿ ರುದ್ರ ನರ್ತನ ತೋರಿ ನೀನು ಅದೇ ಮಾರಿ  ಯುವರ್ ನೊಟೋರಿಯಸ್ ಕೊರೊನ  ಸಾವು ನೋವು ಸೂರೆ ಮಾಡಿ ಹೆಣದ ದೇಹ ಹೋತ್ತು ಒಯ್ಯುವಾರಿಲ್ಲ ಮನುಷ್ಯನ ಜೀವಕೆ ಬೆಲೆಯೇ ಇಲ್ಲ ಕಷ್ಟವೆಕೋ ಕಾಡಿದೆಯೇಲ್ಲಾ ಯುವರ್ ನೊಟೋರಿಯಸ್ ಕೊರೊನ ಪ್ರೀತಿ ಮನವ ಕಿತ್ತು ಹೋದೆ ಬೆಂಕಿಯಲ್ಲಿ ಸುಟ್ಟು ಹೋದೆ ಮಣ್ಣಿನಲ್ಲಿ ಅವಿತು ಹೋದೆ ಗಾಳಿಯಲ್ಲಿ ತೇಲಿ ಹೋದೆ ಐ ಹೇಟ್ ಯು ಕೊರೊನ  ಕಟ್ಟಿದ ಬದುಕು ಚೂರಾಯ್ತು ಮನಸ್ಸು ಏಕೋ ಮಸಣವಾಯ್ತು ವೈದ್ಯರೆ ನಿಜ ದೇವರಾಯ್ತು ಜೀವನವೇ ಬೇಸರವಾಯ್ತು ಯು ಕಿಲ್ಲಡ್ ಲೈಫ್ ಕೊರೊನ..,..... ಕೊರೊನ ******ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಕನ್ನಡಿ

Image
ನಿನ್ನ ರೂಪ ನನ್ನಲ್ಲಿ ಸೆರೆಯಾಯ್ತು ನನ್ನ ಕಣ್ಣಲಿ ಕೆನ್ನೆಯೇಕೋ ಕೆಂಪು ಮುತ್ತು ಇಟ್ಟರೆ ತಂಪು ನೋಡಲು ನಿನ್ನ ಅಂದ ಕಣ್ಣಸಾಲದು ಪ್ರೀತಿ ಬಂದ ನೋಡುತ ನಿನ್ನನೇ ಮರೆತೇ ನಾ ನನ್ನನ್ನೇ ನೋಡಬೇಕು ನೀನು ನನ್ನ ಕ್ಷಣ ಮರೆತು ಹಾಗೆ ನಿನ್ನ ಮಧುರ ಮಾತು ಎಷ್ಟು ಚೆನ್ನಾ  ನೀನು ನಿನಗೆ ಅಪ್ಪಟ ಚಿನ್ನ  ಮುಚ್ಚು ಮರೆಯಿಲ್ಲ ನನಗೆ ನಾನೆ ಬೇಕು ನಿನಗೆ ಮಧುರ ಕ್ಷಣದ ಬೆಸುಗೆ ನೀನೇ ಒಲವು ಕೊನೆಗೆ  ಬೆತ್ತಲೆಯಾಗೋ ದೇಹ ಉಸಿರ ಏರಿಳಿತಾದ ಮೋಹ  ಯಾಕೋ ಕನಸಿನ ದಾಹ ಮತ್ತೆ ನೋಡಬೇಕು ನಿನ್ನನೇ ಎದರುಬಂದು ನಿಲ್ಲು ಸುಮ್ಮನ್ನೆ ನನ್ನ ನಾ ಪ್ರೀತಿ ಮಾಡಿ ಮನಸ್ಸು ಎತ್ತಿನ ಗಾಡಿ ಪ್ರತಿ ಬಿಂಬ ನನ್ನನೇ ಬೇಡಿ ಮಾಡಿದೆ ಏಕೋ ಮೊಡಿ ನಿನ್ನ ಪೀತಿಸುವ ನನ್ನಯ ಹೆಸರೇ ಕನ್ನಡಿ **********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಒಲವಿನ ಗಿಣಿ

Image
  ನನ್ನ ಬದುಕು ಬರಿದಾಯ್ತು ನಿನ್ನ ನಗುವಿಗೆ ಮನಸು ಸೋತೋಯ್ತು ನಿನ್ನ ಕನಸಿಗೆ  ಪ್ರೀತಿ ಪಂಜರದಿ ನಾನು ಬಂದಿ ಗಿಣಿ  ನೀನೇ ನನ್ನ ಹೃದಯದ ಯುವರಾಣಿ  ರೆಕ್ಕೆ ಬಿಚ್ಚಿ ಹೇಗೆ ಹಾರಲಿ ನಿನ್ನ ಒಲವ ದೋಚಿ ಬಿಡಿಸು ನನ್ನ ಪಂಜರದಿ ನಿನ್ನ ಒಲವ ಚಾಚಿ  ನಿಂತಲ್ಲೇ ಸೆಳೆವ ನಿನ್ನ ಚೆಲುವು ಸುಮ್ಮನೆ ನನ್ನ ಕಾಡಿದೆ  ಸೆರೆ ಹಿಡಿಯುವ ಬಯಕೆ ಮನದಲ್ಲಿ ಮನೆ ಮಾಡಿದೆ  ಬಾರೆ ಬಳಿ ಚೆಲುವೆ ನನ್ನ ಪ್ರೀತಿ ನಗುವೇ ಮನದಾಸೆಗೆ ಏಕೋ ಬರವೇ ನೋಡಿ ನಿನ್ನ ಮಿಡಿದಿದೆ ನೂರೆಂಟು ಬಯಕೆ ನಿನ್ನ ಹೊತ್ತು ಜಿಗಿಯುವ ಅಸೆ ನಭಕೆ  ಜೀವನದಿ ಸಕಿಯಾಗು ನನ ಬಾಳ ಬೆಳಕಾಗು ಮನ ತುಂಬಿ ಬಂದ ಕನಸಿಗೆ ಜೊತೆಯಾಗು ಜೀವನದಿ ಮುದ್ದು ಗಿಣಿಯಾಗು  ********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ನನ್ನವಳು

Image
ಬೆಳದಿಂಗಳ ಬೆಳಕಿನಲಿ ಚೆಲುವೊಂದ ಕಂಡೆ ನಸುನಗುವ ಮುದ್ದಾದ ನಕ್ಷತ್ರದ ಗೂಡಲ್ಲಿ ಹೊಳೆಯುವ ಚಂದ್ರನ ಕಂಡೆ ಬಿಳಿ ಹಾಲನಂತೆ ಮೋಡದ ಮರೆಯಲಿ ಚಲಿಸುವ ಚಂದ್ರನ ಬಿಂಬದಿ ನನ್ನಯ ಹುಡುಗಿಯ ಚೆಲುವ ಕಂಡೆ ಮರೆಯೋಗೋ ಮುನ್ನ ಸೆರೆ ಹಿಡಿದು ಬೆಳಕು ಕೊನೆಯಾಗೋ ಒಲವ ಪಡೆದು  ನಕ್ಷತ್ರದ ಊರಲ್ಲಿ ಅವಳ ತೇರು ಸೀರಿಯಲ್ ಸೆಟ್ ಬೆಳಕಲಿ ನನ್ನವಳ ಮುದ್ದು ನಗುವು ಜೋರು ಬಾಳುಕಾಡೊ ಬಳ್ಳಿ ನನ್ನವಳು ನುಲಿಯುತಿರುವ  ಅವಳ ನೋಡಿರಲು  ಕಣ್ಣ ಹೊಡೆದು ಉಲ್ಕೆ ಬಿದ್ದಂತೆ ಹುಣ್ಣಿಮೆಯ ಚಂದ್ರ ನಾಚಿ ನಕ್ಕಂತೆ ಮರೆಯಾದ ಬದುಕಿಗೆ ಬೆಳಕು ತಂದವಳು ಬೆರಗಾಗೋ ಚೆಂದದ ಸೊಬಗು ನನ್ನವಳು ಹುಣಿಮ್ಮೆಯ ಬೆಳದಿಂಗಳು  ****-*ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್

ನಗುವ ಬಾಲ್ಯ

Image
  ನಾನು ಸೇರಿದ ಶಿಶು ವಿಹಾರ ಆಟದ ನವಿರ ಬುದ್ದಿ ಕೇಂದ್ರ ಅಡಿದೆ ಆಟ ಅಂಗನವಾಡಿಲಿ ಕುದೆರೆ ಹೇರಿ ಕುಣಿದು  ಟೀಚರಮ್ಮಾ  ಹೇಳಿ ಕೊಟ್ರು ಅ, ಆ. ಈ ಇ.......... 1,2,3,4 ಹನ್ನೆರಡು ಆದ್ರೆ ಊಟ ಅಜ್ಜಿ ಕೊಟ್ಟ ಸಿಹಿ ಪಾಯಿಸ.. ಸವಿದು ಸವಿದು ತಿಂದು ಹಿಟ್ಟಿನುಂಡೆ ಕರೆಯಿತು ಕೈ ಬಿಸಿ  ಹೊರೆಟೆವು ನಾವು ಮನೆಗೆ..... ಕಾಲ ಕಳೆದು..... ದಿನಗಳದ ಮೇಲೆ ಅಪ್ಪ ಸೇರಿಸಿದರು ಶಾಲೆಗೆ ಕಿವಿಯ ಮುಟ್ಟಿ ನೋಡಿ ನನ್ನ ವಯಸ್ಸು ತಿಳಿದು ಕೂರಲು ಹೇಳಿದರು ಒಂದನೇ ತರಗತಿಗೆ ಶುರುವಾಯ್ತು ಶಿಕ್ಷಣ ಹೇಳಿ ಕೊಟ್ರು ಕನ್ನಡ ಮೇಸ್ಟ್ರು ಕವನ ಧರಣಿ ಮಂಡಲ ಮಧ್ಯದೊಳಗೆ ಕಲಿತು ಕುಣಿದು ನಾವೂ ಹಾರಿಸಿದೆವು ಗಾಳಿಪಟ, ಕುಂಟೆ ಪಿಲ್ಲೆ ಹಾಡಿ ಅಡಿಗೆ ಗುಡಿಗೆ ಆಟವಾಡಿ  ಮನೆಗೆ ಬಂದು ಪಾಠ ಓದಿ ಅವ್ವ ಸುಟ್ಟ ಬೆಣ್ಣೆ ರೊಟ್ಟಿ ಕೆಂಪು ಚಟ್ನಿ ಎಷ್ಟು ರುಚಿಯು ಆದಿನ  ಎಲ್ಲಿ ಹೋಯ್ತು ಆದಿನ ಬೂಸ್ಟ್ ಕುಡಿದು ಅ ಕ್ಷಣ ಕಾಲ ಕಳೆದು ನೆನೆಪ ಸವಿದು ಶುರುವಾದ ಶಿಕ್ಷಣ *******ರಚನೆ ******** ಡಾ. ಚಂದ್ರಶೇಖರ್. ಸಿ. ಹೆಚ್

ಮನಸ್ಸೆಲ್ಲ ಚೂರಾಗಿದೆ

Image
  ಮನಸೆಲ್ಲ ನೋವೆಲ್ಲಾ                       ಯಾಕಾಗಿದೆ ಒಲವೇಕೋ ಬರುತ್ತಿಲ್ಲ                        ಏನಾಗಿದೆ ನೋವಿಂದಲೇ ಕಥೆಯೊಂದು.... ಶುರುವಾಗಿದೆ ಕಂಡ ಕನಸುಗಳ ಸಾವಗಿದೆ,,ಮನಸೆಲ್ಲ ಚೂರಾಗಿದೆ, ಕಂಡ ಕನಸುಗಳ ಸಾವಗಿದೆ,  ಮನಸೆಲ್ಲ ಚೂರಾಗಿದೆ ಪ್ರೀತಿ ಬೆಸುಗೆಯೂ ಹೃದಯ ಕಡಿದಿದೆ......... ಏಕೇನೋ ರಕ್ತ ಸುರಿದಿದೆ ಮನಸ್ಸು ಮುರಿದಿದೆ  ದೂರವಾಗಲೂ ...... ಬೇಕೇನೋ ನೂರು ಮಾತುಗಳ ಮುರಿದು ಎಲ್ಲೇ ದಾಟಿದೆ... ಒಲವೇಕೋ ನೋವಿಂದಲೇ ಕಥೆಯೊಂದು ಶುರುವಾಗಿದೆ ಕಂಡ ಕನಸುಗಳ ಸಾವಗಿದೆ,,ಮನಸೆಲ್ಲ ಚೂರಾಗಿದೆ, ಕಂಡ ಕನಸುಗಳ ಸಾವಗಿದೆ, ಮನಸೆಲ್ಲ ಚೂರಾಗಿದೆ ನಾಲ್ಕು ಋತುಗಳು ಸೋತು ನಿಂತಿವೆ ಒಲವ ಸೇರಿಸಲು....... ಮುಂದೇನೋ 💐 ತುಳಿದ ಸಪ್ತಾಪದಿ ಗಟ್ಟಿಮೇಳುವು ಮೂರು ಗಂಟು ಕೀಳುತಿದೆ...,.... ಯಾಕೇನೋ ಒಲವ ಜಾತ್ರೆಗೆ ಬಂದ ದೇವರು ಸುಮ್ಮನಾಗಿಹನು......... ಇನ್ನೇನೋ ನೋವಿಂದಲೇ ಕಥೆಯೊಂದು ಶುರುವಾಗಿದ ಕಂಡ ಕನಸುಗಳ ಸಾವಗಿದೆ,,ಮನಸೆಲ್ಲ ಚೂರಾಗಿದೆ, ಕಂಡ ಕನಸುಗಳ ಸಾವಗಿದೆ,  ಮನಸೆಲ್ಲ ಚೂರಾಗಿದೆ ಮನಸೆಲ್ಲ ನೋವೆಲ್ಲಾ                       ಯಾಕಾಗಿದೆ ಒಲವೇಕೋ ಬರುತ್ತಿಲ್ಲ                        ಏನಾಗಿದೆ ನೋವಿಂದಲೇ ಕಥೆಯೊಂದು.... ಶುರುವಾಗಿದೆ ಕಂಡ ಕನಸುಗಳ ಸಾವಗಿದೆ,ಮನಸೆಲ್ಲ ಚೂರಾಗಿದೆ, ಕಂಡ ಕನಸುಗಳ ಸಾವಗಿದೆ  ಮನಸೆಲ್ಲ ಚೂರಾಗಿದೆ *********ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್

ನೋವಾಗಿದೆ ಮನಸ್ಸೊಳಗೆ

Image
ತನ ನನ್ನ ನ್ನನರೇ.... ತನ ನನ್ನ ನ್ನನರೇ..... ತನ ನನ್ನ ನ್ನನರೇ...ತನ ನನ್ನ ನ್ನನರೇ ನೋವಾಗಿದೆ ಮನಸ್ಸೊಳಗೆ ......... ದುಮ್ಮಿಕ್ಕಿದೆ (ಕಣ್ಣೀರ್ ಒಳಗೊಳಗೇ )  ನೀ ಆಡೋ ತುಂಟಾಟವೆಲ್ಲಾ  ನನ್ನ ನೆನಪಿಗೆ ಬಂದ ಹಾಗೆ  ನೀ ಹೊಡಿ ಹೋಗುವಾಗ  ನನ್ನ ಎದೆ ಬಡಿತ ನಿಂತ ಹಾಗೆ  ನಿನಿಯಂಥ  ಮೋಸಗಾತಿಯೇ..... ಹೇ  ನೋವಾಗಿದೆ ಮನಸ್ಸೊಳಗೆ  ದುಮ್ಮಿಕ್ಕಿದೆ (ಕಣ್ಣೀರ್ ಒಳಗೊಳಗೇ )  ಹಾ... ಹಾ.... ಹಾ...... ಹಾ. ಹಾ  ಈಗ ಈಗ ಏಕೋ ಏನೋ  ನನ್ನನ್ನು ನೀ ಕೊಂಧ ಹಾಗೆ  ದೇವದಾಸ ಹಾಗೂದೆ ನಾನು...... ನಶೆಯಲ್ಲಿ ತೆಲೋದೆ     ನೀ ನಗುವಾಗ...  ನೀ ಬಂದು ಕರೆದಾಗ  ಕಳೆದೋದೆ ನನಹಾಗ್  ನೀ ಕಣ್ಣ ಒಡೆದಾಗ   ..... ಹಾ..... ಹಾ..... ಮರೆತೋದೆ ನನ್ನಹಾಗ  ನೋವಾಗಿದೆ ಮನಸ್ಸೊಳಗೆ   ದುಮ್ಮಿಕ್ಕಿದೆ (ಕಣ್ಣೀರ್ ಒಳಗೊಳಗೇ ನೀ ಆಡೋ ತುಂಟಾಟವೆಲ್ಲಾ  ನನ್ನ ನೆನಪಿಗೆ ಬಂದ ಹಾಗೆ  ನೀ ಹೊಡಿ ಹೋಗುವಾಗ  ನನ್ನ ಎದೆ ಬಡಿತ ನಿಂತ ಹಾಗೆ  ನಿನಿಯಂಥ  ಮೋಸಗಾತಿಯೇ..... ಹೇ  ನೋವಾಗಿದೆ ಮನಸ್ಸೊಳಗೆ  ದುಮ್ಮಿಕ್ಕಿದೆ (ಕಣ್ಣೀರ್ ಒಳಗೊಳಗೇ ) ತನ ನನ್ನ ನ್ನನರೇ.... ತನ ನನ್ನ ನ್ನನರೇ..... ತನ ನನ್ನ ನ್ನನರೇ...ತನ ನನ್ನ ನ್ನನರೇ... ಹೇ...... ಹೇ......

ಬಣ್ಣಿಸಲಿ ಹೇಗೆ

Image
ಪದಗಳಲಿ ಹೇಗೆ ಕಟ್ಟಿ ಕೊಡಲಿ ನಿನ್ನ ಚೆಲುವ ಬಣ್ಣದ ಕುಂಚದಲ್ಲಿ ಹೇಗೆ ಚಿತ್ರೀಸಲಿ ನಿನ್ನ ಬಿಂಭವ ನಾ ಹೇಗೆ ಸೆರೆಯಿಡಿಯಲ್ಲಿ ಬಳುಕುವ ನಡುವ ನಾ ಹೇಗೆ ಬಣ್ಣಿಸಲಿ ನನ್ನ ಮುದ್ದು ಒಲವ ಸೃಷ್ಟಿಸಿದ ಬ್ರಹ್ಮ ಮ್ಯಾಜಿಕ್ ಪಡ್ಡೆ ಹುಡುಗರ ಟಾನಿಕ್ ನೋಡಲಿಲ್ಲ ಅಂದ್ರೆ  ಪೆನಿಕ್ ಮುಟ್ಟಿದರೆ ಹಾಗೇ  ಶಾಕ್  ನಿನ್ ಕಂಡ್ರೆ ಏಕೋ ಫುಲ್ ಕಿಕ್  ಕಣ್ಣ ನೋಟ ಹೈ ವೋಲ್ಟೇಜ್ ಬ್ಯಾಟರಿ ನಕ್ಕಾಗ ನೀನು ಹೊಡೆದಂಗಾಯಿತು ಲಾಟರಿ ಹುಡುಗಿ ನಾ ಹೇಗೆ  ಬರೆಯಲಿ ಕವನ ನಿನ್ನ ನೋಡಿ ಏಕೋ ಹಾಗುತಿಲ್ಲ ಪದಗಳ ಜನನ *********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಜೀವನದಲ್ಲೇನಿದೆ ಗಮ್ಮತ್ತು

Image
ಹುಟ್ಟಿದಾಗ ಅಮ್ಮ ಅತ್ತಳು ಮುದ್ದು ಕಂದನ ಹೆತ್ತಳು ಜೀವನದ ನೋಗವ ಹಿಡಿದ ಅಪ್ಪ ಹೆಗಲು ಕೊಟ್ಟ ನೀ ಕೂರಲು ಬೆಳೆದು ಬೆಳೆದು ನೀ ಶಾಲೆ ಸೇರಿದೆ ನಿನ್ನ ಸಾಕಾಲು ಅಪ್ಪ ಸುಟ್ಟ ಜೀವನವ ದುಡಿದ ಕಂತೆ ಕಂತೆ ಹಣವ ನೀನು ಬೆಳೆಯಲು ಅಮ್ಮ ಅನ್ನ ಬೇಯಿಸಿ ನಿನ್ನ ಸಾಕಿ ಸಾಲುವಿದಳು ಮುಗಿಸಿದೆ ನೀನು ಕಾಲೇಜನು ಕಾಣದೆ ನಲಿದೆ ಬದುಕಿನ ಮೋಜನು ಉದ್ಯೋಗ ಹುಡುಕಿ  ಮದುವೆಯಾದ ಮುದ್ದು ಹುಡುಗಿಯ ಕಾಲ ಎಷ್ಟು ಬೇಗ ಕಳೆಯಿತು ತಿಳಿಯಲಿಲ್ಲ ಜೀವನದ ಗುಟ್ಟು ತಿಳಿಯವೂಳಗೆ ನಿನ್ನ ಕಂದ ಬೆಳೆದನಲ್ಲ ತಂದೆ ತಾಯಿಗೆ ವಯಸ್ಸಾಯಿತು ರೋಗಗಳು ಶುರುವಾಯ್ತು ಸಾಕಲಾರದೆ ನೀನು ತಂದೆ ತಾಯಿ ಪ್ರಾಣ ಹಿಂಡಿದೆ ಹಾಗೆ ಹೀಗೆ ಕಾಲ ಹುರುಳಿತು ಅಪ್ಪ ಅಮ್ಮ ಸತ್ತರು ಫೋಟೋಕೊಂದು ಹಾರ ಗೋಡೆಗೆ ನೇತು ಹಾಕಿದ ದಾರ ಯೋಚನೆ ಮಾಡಿದಾಗ ಖುಷಿಯ ಕ್ಷಣವೂ ಮನಸ್ಸಿಗೆ ಬಂತು ನೋವಿನ ಕ್ಷಣವೂ ಮನಸ್ಸನು ತಿಂತು ಮತ್ತೇನಿದೆ ಜೀವನದಲ್ಲಿ ಮಣ್ಣಾಗ ಬೇಕು ಆರು ಮೂರಡಿ ಗುಂಡಿಯಲ್ಲಿ ಕೊನೆಗೆ ನೆನೆದಾಗ  ಅನಿಸಿತು ಜೀವನದಲ್ಲೇನಿದೆ ಗಮ್ಮತ್ತು ಇದುವೆನಾ ಮನುಜ ನಿನ್ನ ಕಿಮ್ಮತ್ತು *******ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್

ಮುದ್ದು ಗಿಣಿ

Image
ಮುದ್ದಾದ ಹುಡುಗಿ ನೀ ತುಂಬಾ ಬೆಡಗಿ ನಾ ಹಾಗೆ ಕರಗಿ ನೀರಾದೆ ಮರುಗಿ ಹೃದಯದ ಬಡಿತ ಮನಸಿನ ಮಿಡಿತ ಒಲವಿನ ಸೆಳೆತ ಸಿಲುಕಿ ಹಾಗೇ ಕರಾಗುತಾ ಒಲವ ಚಡಪಡಿಕೆ ಕನಸುಗಳ ಮರೀಚಿಕೆ ನಿನಗಾಗಿ ತಡಪಡಿಕೆ ಸೇರಲು ಕನವರಿಕೆ ಪ್ರೀತಿ ಸುಳಿಯಲಿ ಸಿಲುಕಿ ನಿನ್ನನ್ನು ಹುಡುಕಿ ಕನಸುಗಳ ಕೆದಕಿ ಹೊರಬಂತು ಸಡಗರ ಮುದ್ದಾದ ನಿನಗೆ ನೋಟ ಸಾಕೆನೆಗೆ ಪ್ರೀತಿ ಅಪ್ಪುಗೆ ಬಯಸಿದೆ ಬೆಸುಗೆ ಬಳಿ ಬಾರೆ ಒಲವೇ ಬಯಸಿದೆ ಮನವು ನಿನ್ನೆ ನನ್ನ ಒಲವು *******ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್

ಸೀರೆಯ ಸೆಳೆವು

Image
ಹೇಳುವೆ ನಾನು ಒಂದೂ ಕಥೆಯ ಮಹಾಭಾರತ ನಡೆದ ಒಂದೂ ವ್ಯಥೆಯ ಅಣ್ಣ ತಮ್ಮಂದಿರ ನಡುವೆ ಜಗಳ ಶಕುನಿ ಶುರು ಮಾಡಿದ ದಾಯಾದಾಟದ ಗಾಳ ಪಾಂಡವರು ಸೋತರು ಪಗಡೆ ಯಾಟದಿ ರಾಜ್ಯವ ನೋಡಿ ಕೌವರವರ ಗೆಲುವಿನ ಸಾಮ್ರಾಜ್ಯವ ಭೂಮಿಯ ಮೇಲೆ ಕೌವರವರ ಸಂಭ್ರಮ ದೃತ್ತಿಗೆಟ್ಟು ಕುಳಿತಃ ಪಾಂಡವರ ಭ್ರಮ ಸೋತ ಖುಷಿಯಲಿ ದುರ್ಯೋದನ  ಪಾಂಚಲಿಯ ಕರೆಯಲು ಪಂಚಲಿಯು ಬರಲು ಒಲ್ಲೆ ಏ ನ್ನಲ್ಲೂ ಸಭೆಗೆ ಕರೆಸಿ ದುರ್ಯೋಧನ ಸೀರೆಯ ಸೆಳೆಯಲು ದ್ರೌಪದಿಯು ಬೇಡಿದಳು ಕೃಷ್ಣ ನನ್ನ  ಕಾಪಾಡು ಕೃಷ್ಣ ನನ್ನ ಮಾನವನ್ನ ಕೃಷ್ಣನ್ನು ಕೊಟ್ಟ ಸೀರೆಯು ಕಾಪಾಡಿತು ದ್ರೌಪದಿಯ ಮಾನವನ್ನ ಸಿಟ್ಟಿಗೆದ್ದ ಪಾಂಡವರು ಸಾರಿದರು ಯುದ್ಧವನ್ನ ಯುದ್ಧದಿ ದುರ್ಯೋಧನನ ಸೋಲಿಸುವರುಂಟೆ ಭೀಮನ ಶಕ್ತಿ ಸಾವಲೆಸೆಯುವುದುಂಟೆ ಹೋರಾಟದಿ ಬಿದ್ದನು ಭೀಮನು ನೆಲಕೆ ದುರ್ಯೋಧನ ಹೊಡೆದ ಗದೆಯಾ ಬಲಕೆ  ಕೃಷ್ಣನು ತೋರಿದ ತೊಡೆಯನ್ನ ಅರಿತ ಭೀಮನು ದುರ್ಯೋದನನ ಸೆಳೆವನ್ನ  ಭೀಮನು  ಸೀಳಿದ ದುರ್ಯೋದನನಾ ತೊಡೆಯನ್ನ ಶಕುನಿ ಮಿಟಿದ ಪಗಡೇಯಾಟ ಕೌರವ ಪಾಂಡವರ ನಡುವೆ ಯುದ್ಧದ ಆಟ  ತೆಗೆಯಿತು ಕೌರವರ ಜೀವನವ ತೋರಿತು ಕೃಷ್ಣನ ಚಾಣಕ್ಷತನವ *********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ನಸೀಬು ಕಾರಬು

Image
ವಿದ್ಯುತ್ ಸ್ಪರ್ಶಕೆ ಹತ್ತಿಹುದು ಬೆಂಕಿ ಚಾಚಿಹದು ನಾಲಗೆಯ ಸುಡುತಿಹದು ಗಿಡಮರಗಳ ಊರಿಯುತಿಹದು ಬೆಂಕಿ ಚಟ ಚಟನೆ ಹಾರುತಿಹದು ಗಾಳಿಯೊಡನೆ ಭರ ಭರನೇ ಗಿಡಮರ ಬಳ್ಳಿ ವನ್ಯ ಜೀವಿಗಳ ರೋಧನೆ ವೇದನೆ ನೋವ ಇನ್ನು ಬರಿಸನೇ ಬೇಡುತಿಹವು ಜೀವಿಗಳು ಬದುಕು ನನಗೆ ಬೇಕು ಬೆಂಕಿ ನಂದಿದರೆ ಸಾಕು ತಡೆಯುವರು ಯಾರು ಕೆಂಪನೆಯ  ಕೆಂಡ ಹರಿಸಿಹದು ಪ್ರಾಣಿಗಳ ಸುಟ್ಟ ನೆತ್ತರ ಮುಂಡ ಬದುಕುಳಿದ ಮರಗಳು ರೋದಿಸಿಹವು ನೋವಲ್ಲಿ ಸುಟ್ಟ ಸಣ್ಣ ಹುಳುಗಳು ಸಾವಿನ ವ್ಯಥೆಯಲ್ಲಿ ನೆಲ್ಲವೆಲ್ಲ ಕಪ್ಪು ಮೈದಾನ ಮನ  ಕಲಕಿತು ಯಾಕೋ ತನು ಮರುಗಿತು ಸಾಕೋ ಜೀವ ಬಯದಿ ಹಸಿರು ಹಾಯಿತು ಮೈ ಬಾಚಿ ಬೂದಿ ಕಣ್ಣ ಬಿಟ್ಟು ನೋಡವಳಗೆ ಜೀವ ಹಾಯಿತು ನೆಲ ಸಾಮಾಧಿ ಸುಟ್ಟ ಬೆಂಕಿಗೆ ಕೆಟ್ಟಿದೆ ಬೂತಾಯಿಯ ನಸೀಬು ಯಾರು ನೀಡುವರು ಹತ್ತಿಹ ಬೆಂಕಿಗೆ ಜಾವಭು ಒಮ್ಮೆ ನೋಡಿ ಏಳೋ ನಾವಭು ಯಾಕೋ ಏನೋ ನಸೀಬು ಬಲು ಕಾರಬು  ********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಗುಲ್ಮೋಹರ

Image
ಕೆಂಪು ಕೆಂದುಟಿಯಲಿ ನಗುವ ನಯನದ ಹೂವೆ ಹಸಿರು ಎಲೆಯಾಲಿ ಅರಳಿದ ಕೆಂಪು ಕೆನ್ನೆಯ ಚೆಲುವೆ ಹೂವ ಅರಳಿ ಮರ ತುಂಬಿ ನನ್ನ ಭಾವನೆಗಳ ಮನೆ ತುಂಬಿ ಕೆಂಪು ಚಾವಣಿಯಾದೆ ಮರಕೆ ನನ್ನ ಕನಸ್ಸುಗಳ ಅರಕೆ ಹಬ್ಬದಿ ಎತ್ತು ಕರುಗಳ ಎಗಲೇರಿ ಗಂಟೆ ಸದ್ದಿನ ಸಪ್ಪಳಕೆ ನೀ ಅರಳಿ ಬಸವನ ದಿಬ್ಬಣ ನಡೆವಾಗ ದಾರಿಯಲಿ ನೋಡುಗರ ಮನ ಸೆಳೆದ ಗುಲ್ಮೋಹರದ ಹೂವೆ ಕೆಂಪು ಕೆನ್ನೆಯ ಕೆಂದುಟಿಯ ಚೆಲುವೆ ಮೊಗ್ಗ ಅರಳಿ ನೆಲದಲ್ಲಿ ನಗುವಾಗ ಕೆಂಪು ಗಂಬಳ ಹಾಸಿದಂತೆ ಕಂಡಿತು ನಾ ನೋಡಿ ದಾರಿಯಲಿ ನಡೆವಾಗ ಮನವು ಕರಗಿತು ಒಲವು ತುಂಬಿತು ********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಕವಿಯದೇನಾ

Image
ಕವಿಯದೇನಾ ಕವಿಯದೇನಾ ಬಾವನೆಗಳ ಕನಸಾ ಕವನ ಗೀಚಿ ಕನಸ್ಸುಗಳ  ಸವಿಯ ಗೋಚಿ ಮನಸ್ಸುಗಳ ಮಾತು ದೋಚಿ ದ್ವೇಷ ಅಸೂಯೆಗಳ ಕಳಚಿ ಮಧುರ ಕ್ಷಣವೂ ಅರಳುವ ಸಮಯದಿ ಕವಿಯದೇನಾ ಕವಿಯದೇನಾ ಮೊಗ್ಗೋಂದೂ ಅರಳಿ ಹೂವಾಗಿ ದುಂಬಿಯೊಂದು ಹೂವ ಮುತ್ತಿಟ್ಟು ತನಗಾಗಿ ಸಿಹಿಯ ಕೂಡಿಟ್ಟು ಪ್ರೀತಿಯ ಸೋಗಡ ಬಚ್ಚಿಟ್ಟು ಸಿಹಿಯ ಸವಿಯುವ ಕ್ಷಣದಿ ಕವಿಯದೇನಾ ಕವಿಯದೇನಾ ಪ್ರಕೃತಿಯ ಸೌಂದರ್ಯವ ವರ್ಣಿಸಿ ಬೆಟ್ಟದಿ ಹಸಿರು ಮರ ಹುಂಕರಿಸಿ ನದಿಯೊಂದು ಮೈ ತುಂಬಿ ಹರಿದು ಹನಿ ನೀರು ಇಬ್ಬನಿಯಾಗಿ ಬೀಳುವ ಸಮಯದಿ ನನ್ನ ನಾ ಮರೆತು ಕವಿಯದೇನಾ ಕಂಡ ಕನಸ ಗೀಚೋ ಕವಿಯದೇನಾ ಪ್ರೀತಿಯ ನಲ್ಲೆಯ ಕುಡಿ ನೋಟ ಮುಂಗುರಳ ಕೂದಲ ಮುದ್ದಾಟ ನಗುವಿನ ಪ್ರೀತಿಯ ತುಂಟ ಕಳ್ಳಾಟ  ಒಲವ ಸೋಗದಲಿ ಸೌಂದರ್ಯ ನನ್ನ ಸೆಳೆವಾಗ ಮೌನದಿ ಮೂಕ ಕವಿಯದೇನಾ  ಕವಿಯದೇನಾ ***********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಮೋಸಗಾತಿಯೇ

Image
ಹೂವಿನ ಗಿಡದ ಕಾಣದ ಮುಳ್ಳಿನ  ಮೋಸಕೆ ಬಲಿಯಾದೆ ನಾ ನನ್ನ ಕನಸಿನ ಅರಮನೆಗೆ ಕೊಳ್ಳಿಯಾದೇ ನೀ  ನಿನ್ನ ಆಡಿದ ಆಟದಿ ಬುಗುರಿಯಾದೇನಾ ತಿರುಗುತಾ ನನ್ನೇ ನಾ ಮರೆತೋದೆ ನಾ ಒಲವ ಮರೆತು ಮೋಸವ ಹರಿತು ನೆಲೆಯನು ಹುಡುಕಿ ಬಲೆಯಲ್ಲಿ ಸಿಲುಕಿ ಹೃದಯವ ತಿವಿದು ರಕ್ತವು ಹರಿದು ಕೂಗಿತು ನಿನ್ನ ಮೋಸಗಾತಿಯೇ ಮನಸ್ಸು ಮುರಿದು ಬದುಕು ಸವೆದು ಸುರಿವ ಮಳೆಯಲಿ ಕನಸ ಕರೆದು  ಹರಿವ ನೀರು ಕನಸ ತೊಳೆದು ದಾರಿ ಕಾಣದ ಹುಚ್ಚು ಪ್ರೇಮಿ ನಾ ಯಾಕೆ ಹೀಗೆ ಅಣೆಬರಹ ಶಪಿಸಿ ದೇವರೇ ನನ್ನ   ಪ್ರೀತಿಗೆ ಮಾಡಿದೆ ಘಾಸಿ ಆದರೂ ಏಕೋ ಕೊನೆ ಅಸೆ ಮತ್ತು ಬೇಡಿದೆ ನಿನ್ನ ಪ್ರೀತಿಯ  ಹತ್ತಿದ ಹುಚ್ಚು ಹೊತ್ತಿದೆ ಕಿಚ್ಚು ಬೇಡೆನು ಏನು ನಾನು ನಿನ್ನನ್ನು ಮೋಸಗಾತಿಯೇ ಪ್ರೀತಿ ಪಾತಾಕಿಯೇ ದ್ರೋಹ ಮಾಡಿದೆ ನಂಬಿಕೆ ಚೂರು ಮಾಡಿದೆ ಮುಗ್ದ ಮನಸಿಗೆ ಮಸಣವ ತೋರಿದೆ ********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಕೊಲ್ಲು ಕೊಲ್ಲೆನ್ನುವರಯ್ಯ

Image
ಹಾಲು ಕುಡಿಯದ ಹಾವಿನಾ ಉತ್ತಕ್ಕೆ ಹಾಲು ಏರೆವರಯ್ಯ ನಡು ದಾರಿಯಲ್ಲಿ ಹಾವು ಕಂಡರೆ ಬೆಚ್ಚಿ ಓಡಿ ಓಡಿ ಕೊಲ್ಲು ಕೊಲ್ಲೆನ್ನುವರಯ್ಯ  ಮನುಷ್ಯ ಕಷ್ಟಕ್ಕೆ ಆಸರೆಯಾದಾಗ ಬೇಷ ಬೇಷ ಅನ್ನುವರಯ್ಯ ಮನುಷ್ಯ ನೋವಲ್ಲಿ ಬಿದ್ದಾಗ ಮೂಲೆಗೆ ನೂಕು ನೂಕುತಾ    ಕೊಲ್ಲು ಕೊಲ್ಲೆನ್ನುವರಯ್ಯ  ಕಾಗೆ ಬಂದು ಮನೆ ಮುಂದೆ ಕಾಳನು ಎಕ್ಕುವಾಗ ದೂರ ಹೋಡಿಸುತಾ ಕೊಲ್ಲು ಕೊಲ್ಲೆನ್ನುವರಯ್ಯ  ಸತ್ತ ಸಮಾಧಿಯ ಮುಂದೆ ಮೃಸ್ಟಾನ್ನ ಭೋಜನ ಬಡಿಸಿ ಸ್ವರ್ಗಕ್ಕೆ ದಾರಿ ತೆರೆಯುವುದು ಬಂದು ತಿನ್ನು ಎನ್ನುವರಯ್ಯ ದಾರಿಯಲ್ಲಿ ಕುಡುಕನ ನೋಡಿ ಕುಡಿದ ಬಿದ್ದ ಕುಡುಕ ಎಂಬುವರಯ್ಯ ಯಾರಿಗೂ ಕಾಣದ ಹಾಗೆ    ಕುಡಿದು ನಾನು ಕುಡುಕನ್ನಲ್ಲ ಸಾಮಾಜಿಕ ಚಿಂತಕ ಎನ್ನುವರಯ್ಯ ನಾಲ್ಕು ಜನಕೆ ಅನ್ನ ದಾನ ಮಾಡಿ ದೇವರ ಕೃಪೆ ಎಂದು ಹೇಳಿ  ಸಮಾಧಾನ ಪಡಿಸಿ ಕೊಳ್ಳುವರಯ್ಯ ಮನೆಯ ಬಾಗಿಲಿಗೆ ಅನ್ನ ಬೇಡಲು ಬಂದ  ಬಿಕ್ಷಕನಿಗೆ ಹೊಡೆದು ಹುಚ್ಚ ಕೊಲ್ಲು ಕೊಲ್ಲೆನ್ನುವರಯ್ಯ  ಕೊಳದಲ್ಲಿ ಮೀನು ಹಿಡಿದು ತಿಂದು ತೆಗುವರಯ್ಯ ಮೊಸಳೆಯೂ ಕಂಡರೆ ಕೊಲ್ಲು ಕೊಲ್ಲೆನ್ನುವರಯ್ಯ ಮುದ್ದಾದ ಮೇಕೆಯ ತಂದು ಹುಲ್ಲು ಹಾಕಿ ಬ್ಯಾ ಎಂದು ಮುದ್ದಾಡಿವರಯ್ಯ ಬೆಳೆದ ಮೇಕೆಯ ಮಾಂಸ ನೋಡಿ ಅಮ್ಮನ ಅರಕೇಯಿದೆ ಕೊಲ್ಲು ಕೊಲ್ಲೆನ್ನುವರಯ್ಯ  *********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಕಥೆ ನೂರು

Image
ಬದುಕು ಒಂದೂ ನೂರು ಕಥೆ ಹೇಳಿದೆ ಮೂನ್ನೂರು ನಡೆದ ಘಟನೆ ಸಾವಿರಾರು ಕನಸುಗಳ ಸಂತೆಯ ತೇರು ಪಯಣದಲಿ  ನೊಂದು ಜೀವನದಿ  ಬೆಂದು ಘಟನೆಗಳು  ಕೊಂದು ಬದುಕನ್ನು  ತಿಂದು ಮುಗಿಸಿದವು ಕಥೆಯ ನನ್ನಯ ನೂರೆಂಟು ವ್ಯಥೆಯ ಬಾಳ ಪುಟದಲ್ಲಿ ಚಿತ್ತಾರ ನಲಿವ ನಯನ ಸಾಕ್ಷಾತ್ಕಾರ ಬದುಕು ಕಟ್ಟಿದ ರೀತಿ ಅಮರ ಕಥೆಯೂ ಬಲು ಘೋರ ದಾರಿಯು ಬದುಕ ಮುಚ್ಚಿ ಕಂಡ ಕನಸುಗಳ ಕೊಚ್ಚಿ ನನ್ನ ಹೃದಯವ ಚುಚ್ಚಿ ನಿದಿರೆ ಬಾರದೆ ರಾತ್ರಿ ನಾ ಬೆಚ್ಚಿ ದೇವರ ನೆನೆದೆ ಜೀವನವ ಸವಿದೆ *********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಮಣ್ಣಋಣ

Image
  ನಾನು ಎಂದು ಮೆರೆದೇವರೆಲ್ಲ ಮಣ್ಣು ದ್ವೇಷ ಎಂಬುದು ಮಾನವೀಯತೆಯ ಹುಣ್ಣು ಕಾಲವೆಂಬುದು ದೇವರು ಕೊಟ್ಟ ಹೆಣ್ಣು ನೋಡಲು ನಿಂತಾವನೆ ದೇವರ ಕಣ್ಣು ಯಾರಿಗೆ ಹೇಳಲಿ ನಾ ಸಾರಿ ಬದುಕು ನೋವಿನ ಚೂರಿ ಮಸಣವೂ ಕರೆವುದು ಕೇರಿ ಕಟ್ಟಲು ಸಾವಿನ ಘೋರಿ ಸತ್ತ ಶವದ ಬೀಜವು ಒಂದೇ ಮಾನವೀಯತೆಯ ಮುಂದೆ ಕನಸುಗಳ ಬದುಕ ಕೊಂದೆ ನೋವು ನಲಿವಲಿ ಬೆಂದೆ ಎಗರುತಿಹಾದು ನನ್ನಯ ಕಿಚ್ಚು ಇಂದು ನಂಗೇಕೋ ರಚ್ಚು ಮನಸು ಮಾಗದು ಹುಚ್ಚು ಕನಸು ಜೇವನವ ಕಚ್ಚು ಕಾಲ ಹೇಳುವುದು ಉತ್ತರ ಹರಿಸಿ ಬದುಕಿನ ನೆತ್ತರ ಮಣ್ಣಲಿ ಬೀಜವು ಹೆಮ್ಮರ ನಡೆವುದು ದೇವರ ವಿಧಿ ಬರ  ಯಾರಿಗೆ ಬೇಕು ಈ ಪಯಣ ನೋವು ಗೆಲುವಿನ ಮರಣ ಸಾವು ನೋವಿನ ಜನನ ತೀರಿಸಲಿ ಎಗೆ ಈ ಮಣ್ಣ ಋಣ ********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ದೋಣಿ ಶಿಖರ

Image
  ಬದುಕು ಬವಣೆ ಪರ್ವತ ಸಾಗಿಸು ಜೀವನ ಅತಿರಥ ನೋವು ಗೆಲುವು ಶಾಶ್ವತ ಮನಸು ಏಕೋ ಮಹಾರಾಥ ನೋವು ನಲಿವ ಮರೆತು ತೂಗುತ್ತಿರುವ ದೋಣಿಯೇ  ನೀರ ಮೇಲೆ ಸಾಗುತಿರುವ ಬದುಕ ಮರೆತ ಸಾವ ಚಾಳಿಯೇ ನೀರವೊಳಗೆ ನಿನ್ನ ಶಿಕರ ನೋಡಲೆಷ್ಟು ಸಡಗರ ದಾರಿಯಲ್ಲಿ ಸಾಗುತಿರಲು ಅಲೆಗೆ ಸಿಕ್ಕು ನಲುಗುತಿರಲು ನೋವೆ ಕೊನೆ ಆಹಾಹಕಾರ ಮುಳುಗು ತಿರುವ ದೋಣಿ ಕಾಲ ತಿರುಗುತ್ತಿರುವ ಏಣಿ ಮನಸು ಮಸಣದ ಹೋಣಿ ಸಾವ ಕಾಯುತ್ತಿರುವ ಮಾಣಿ ನಗುವ ನಲಿವೆ ಮಾನವತ ಬದುಕು ಬಾಳ ಕಾಯುತ ನಿಂತ ನೀರು ಮರುಗುತಾ ದೇವನೊಬ್ಬ ಕೊನೆಗೆ ಶಾಶ್ವತ ******ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಒಂಟಿ ನಾನೀಗ

Image
ಪ್ರೀತಿ ಮನೆಯಲಿ ಒಂಟಿ ನಾನೀಗ ನಿನ್ನ ನೆನಪುಗಳು ಸುಡುತ್ತಿವೆ ನನಗೀಗ ಉದುರಿದ ತರಗೇಲೆಯು ಮರದ ಅನುರಾಗ ತನ್ನಯ ಹಸಿರು ಕನಸ ಸುಟ್ಟಂತೆ ಹೀಗಾ ಬರಡು ಭೂಮಿಯಲಿ ಸುಡುವ ಮರಳಂತೆ ಪ್ರೀತಿ ಮಳೆಯ ಹನಿ ಕೂಡ ನೋವಲ್ಲಿ ಮಾಯಾದ ರೀತಿ ಮನಸ್ಸು ಬೇಯ್ಯುತ್ತಿದೆ ಕನಸು ಕರಗುತಿದೆ ಒಲವು ಸುಡುತಿದೆ ಕಾಡಗಿಚ್ಚು ಅತ್ತಿದ ರೀತಿ ಪ್ರೀತಿ ಮನೆಯಲ್ಲಿ ಒಂಟಿ ನಾನೀಗ ಸುಡುವ ನೆನಪುಗಳೇ ಸಂಗಾತಿ ನಂಗೀಗ *********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ತೇಲುವ ದೋಣಿ

Image
ಏ ನನ್ನ ಸ್ನೇಹ ದೋಣಿಯೇ  ನೀರಿನಲ್ಲಿ ಮುಳುಗಿ ನೀನು ತೆಲುತಾ ನಗುತಾ ನಲಿವೆ  ಅಲೆಗಳ ಹೊಡೆತಕೆ ನಲಿಯುವೆ ನಿನ್ನ ಮೇಲೆ ನಿಂತ ನನ್ನ ಮಗುವಿನಂತೆ ಪ್ರೀತಿಯಲಿ ಸಲವಿ ತೂಗಿ ತೂಗಿ ಒಲವೇ ಮೆರೆವೆ ನಿನಗೆ ಯಾರು ಸಾಟಿಯು ಕಡಲ  ನೀರು ನಿನ್ನ ಮುತ್ತಿಟ್ಟಾಗ ತಾಕಿ ನಿನ್ನ ಮೈ ಸವರಿದಾಗ ಹಾಗೆ ತೂಗಿ ಒಮ್ಮೆ ಬಾಗಿ ಜೀವ ಅಲೆಯ ಜೀವಿಗಳ ಸಲಹುವುವೆ ನೀನು ಬಾಗಿ ನೀನು ತೂಗಿ ಬೆದರುವಾಗ ನೋಡಿ ನಿನ್ನ ನಗುವರು ಅಲೆಗಳಿಗೆ ಹೆದರದೆ ಗಾಳಿಗೆ ನಲುಗದೆ ಮಜಾ ನೋಡಡುವವರಲೆಕ್ಕಿಸದೆ ಪ್ರೀತಿಗೆ ಪ್ರಾಣ ಕೊಟ್ಟು  ಜೇವಿಗಳ ಲೆಕ್ಕಕಿಟ್ಟು ದಡಕೆ ನಮ್ಮ ಬಿಟ್ಟು ಬದುಕ ಗೂಡಿಗೆ ಬಿಟ್ಟು ಹೊರಟೆ ನೀನು ನೀರಿಗೆ ********ರಚನೆ ******-** ಡಾ. ಚಂದ್ರಶೇಖರ. ಸಿ. ಹೆಚ್