ಮಣ್ಣಋಣ

 


ನಾನು ಎಂದು ಮೆರೆದೇವರೆಲ್ಲ ಮಣ್ಣು

ದ್ವೇಷ ಎಂಬುದು ಮಾನವೀಯತೆಯ ಹುಣ್ಣು

ಕಾಲವೆಂಬುದು ದೇವರು ಕೊಟ್ಟ ಹೆಣ್ಣು

ನೋಡಲು ನಿಂತಾವನೆ ದೇವರ ಕಣ್ಣು


ಯಾರಿಗೆ ಹೇಳಲಿ ನಾ ಸಾರಿ

ಬದುಕು ನೋವಿನ ಚೂರಿ

ಮಸಣವೂ ಕರೆವುದು ಕೇರಿ

ಕಟ್ಟಲು ಸಾವಿನ ಘೋರಿ


ಸತ್ತ ಶವದ ಬೀಜವು ಒಂದೇ

ಮಾನವೀಯತೆಯ ಮುಂದೆ

ಕನಸುಗಳ ಬದುಕ ಕೊಂದೆ

ನೋವು ನಲಿವಲಿ ಬೆಂದೆ


ಎಗರುತಿಹಾದು ನನ್ನಯ ಕಿಚ್ಚು

ಇಂದು ನಂಗೇಕೋ ರಚ್ಚು

ಮನಸು ಮಾಗದು ಹುಚ್ಚು

ಕನಸು ಜೇವನವ ಕಚ್ಚು


ಕಾಲ ಹೇಳುವುದು ಉತ್ತರ

ಹರಿಸಿ ಬದುಕಿನ ನೆತ್ತರ

ಮಣ್ಣಲಿ ಬೀಜವು ಹೆಮ್ಮರ

ನಡೆವುದು ದೇವರ ವಿಧಿ ಬರ 


ಯಾರಿಗೆ ಬೇಕು ಈ ಪಯಣ

ನೋವು ಗೆಲುವಿನ ಮರಣ

ಸಾವು ನೋವಿನ ಜನನ

ತೀರಿಸಲಿ ಎಗೆ ಈ ಮಣ್ಣ ಋಣ



********ರಚನೆ *********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಭಾವಗೀತೆ -51

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ