ಒಲವಿನ ಗಿಣಿ
ನನ್ನ ಬದುಕು ಬರಿದಾಯ್ತು
ನಿನ್ನ ನಗುವಿಗೆ
ಮನಸು ಸೋತೋಯ್ತು
ನಿನ್ನ ಕನಸಿಗೆ
ಪ್ರೀತಿ ಪಂಜರದಿ ನಾನು ಬಂದಿ ಗಿಣಿ
ನೀನೇ ನನ್ನ ಹೃದಯದ ಯುವರಾಣಿ
ರೆಕ್ಕೆ ಬಿಚ್ಚಿ ಹೇಗೆ ಹಾರಲಿ
ನಿನ್ನ ಒಲವ ದೋಚಿ
ಬಿಡಿಸು ನನ್ನ ಪಂಜರದಿ
ನಿನ್ನ ಒಲವ ಚಾಚಿ
ನಿಂತಲ್ಲೇ ಸೆಳೆವ ನಿನ್ನ ಚೆಲುವು
ಸುಮ್ಮನೆ ನನ್ನ ಕಾಡಿದೆ
ಸೆರೆ ಹಿಡಿಯುವ ಬಯಕೆ
ಮನದಲ್ಲಿ ಮನೆ ಮಾಡಿದೆ
ಬಾರೆ ಬಳಿ ಚೆಲುವೆ
ನನ್ನ ಪ್ರೀತಿ ನಗುವೇ
ಮನದಾಸೆಗೆ ಏಕೋ ಬರವೇ
ನೋಡಿ ನಿನ್ನ ಮಿಡಿದಿದೆ
ನೂರೆಂಟು ಬಯಕೆ
ನಿನ್ನ ಹೊತ್ತು ಜಿಗಿಯುವ ಅಸೆ ನಭಕೆ
ಜೀವನದಿ ಸಕಿಯಾಗು
ನನ ಬಾಳ ಬೆಳಕಾಗು
ಮನ ತುಂಬಿ ಬಂದ
ಕನಸಿಗೆ ಜೊತೆಯಾಗು
ಜೀವನದಿ ಮುದ್ದು ಗಿಣಿಯಾಗು
********ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment