ಸೀರೆಯ ಸೆಳೆವು
ಹೇಳುವೆ ನಾನು ಒಂದೂ ಕಥೆಯ
ಮಹಾಭಾರತ ನಡೆದ ಒಂದೂ ವ್ಯಥೆಯ
ಅಣ್ಣ ತಮ್ಮಂದಿರ ನಡುವೆ ಜಗಳ
ಶಕುನಿ ಶುರು ಮಾಡಿದ ದಾಯಾದಾಟದ ಗಾಳ
ಪಾಂಡವರು ಸೋತರು ಪಗಡೆ ಯಾಟದಿ ರಾಜ್ಯವ
ನೋಡಿ ಕೌವರವರ ಗೆಲುವಿನ ಸಾಮ್ರಾಜ್ಯವ
ಭೂಮಿಯ ಮೇಲೆ ಕೌವರವರ ಸಂಭ್ರಮ
ದೃತ್ತಿಗೆಟ್ಟು ಕುಳಿತಃ ಪಾಂಡವರ ಭ್ರಮ
ಸೋತ ಖುಷಿಯಲಿ ದುರ್ಯೋದನ ಪಾಂಚಲಿಯ ಕರೆಯಲು
ಪಂಚಲಿಯು ಬರಲು ಒಲ್ಲೆ ಏ ನ್ನಲ್ಲೂ
ಸಭೆಗೆ ಕರೆಸಿ ದುರ್ಯೋಧನ ಸೀರೆಯ ಸೆಳೆಯಲು
ದ್ರೌಪದಿಯು ಬೇಡಿದಳು ಕೃಷ್ಣ ನನ್ನ
ಕಾಪಾಡು ಕೃಷ್ಣ ನನ್ನ ಮಾನವನ್ನ
ಕೃಷ್ಣನ್ನು ಕೊಟ್ಟ ಸೀರೆಯು ಕಾಪಾಡಿತು ದ್ರೌಪದಿಯ ಮಾನವನ್ನ
ಸಿಟ್ಟಿಗೆದ್ದ ಪಾಂಡವರು ಸಾರಿದರು ಯುದ್ಧವನ್ನ
ಯುದ್ಧದಿ ದುರ್ಯೋಧನನ ಸೋಲಿಸುವರುಂಟೆ
ಭೀಮನ ಶಕ್ತಿ ಸಾವಲೆಸೆಯುವುದುಂಟೆ
ಹೋರಾಟದಿ ಬಿದ್ದನು ಭೀಮನು ನೆಲಕೆ
ದುರ್ಯೋಧನ ಹೊಡೆದ ಗದೆಯಾ ಬಲಕೆ
ಕೃಷ್ಣನು ತೋರಿದ ತೊಡೆಯನ್ನ
ಅರಿತ ಭೀಮನು ದುರ್ಯೋದನನ ಸೆಳೆವನ್ನ
ಭೀಮನು ಸೀಳಿದ ದುರ್ಯೋದನನಾ ತೊಡೆಯನ್ನ
ಶಕುನಿ ಮಿಟಿದ ಪಗಡೇಯಾಟ
ಕೌರವ ಪಾಂಡವರ ನಡುವೆ ಯುದ್ಧದ ಆಟ
ತೆಗೆಯಿತು ಕೌರವರ ಜೀವನವ
ತೋರಿತು ಕೃಷ್ಣನ ಚಾಣಕ್ಷತನವ
*********ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment