ನಸೀಬು ಕಾರಬು
ವಿದ್ಯುತ್ ಸ್ಪರ್ಶಕೆ
ಹತ್ತಿಹುದು ಬೆಂಕಿ
ಚಾಚಿಹದು ನಾಲಗೆಯ
ಸುಡುತಿಹದು ಗಿಡಮರಗಳ
ಊರಿಯುತಿಹದು ಬೆಂಕಿ ಚಟ ಚಟನೆ
ಹಾರುತಿಹದು ಗಾಳಿಯೊಡನೆ ಭರ ಭರನೇ
ಗಿಡಮರ ಬಳ್ಳಿ ವನ್ಯ ಜೀವಿಗಳ ರೋಧನೆ
ವೇದನೆ ನೋವ ಇನ್ನು ಬರಿಸನೇ
ಬೇಡುತಿಹವು ಜೀವಿಗಳು
ಬದುಕು ನನಗೆ ಬೇಕು
ಬೆಂಕಿ ನಂದಿದರೆ ಸಾಕು
ತಡೆಯುವರು ಯಾರು
ಕೆಂಪನೆಯ ಕೆಂಡ
ಹರಿಸಿಹದು ಪ್ರಾಣಿಗಳ
ಸುಟ್ಟ ನೆತ್ತರ ಮುಂಡ
ಬದುಕುಳಿದ ಮರಗಳು
ರೋದಿಸಿಹವು ನೋವಲ್ಲಿ
ಸುಟ್ಟ ಸಣ್ಣ ಹುಳುಗಳು
ಸಾವಿನ ವ್ಯಥೆಯಲ್ಲಿ
ನೆಲ್ಲವೆಲ್ಲ ಕಪ್ಪು ಮೈದಾನ
ಮನ ಕಲಕಿತು ಯಾಕೋ
ತನು ಮರುಗಿತು ಸಾಕೋ
ಜೀವ ಬಯದಿ ಹಸಿರು
ಹಾಯಿತು ಮೈ ಬಾಚಿ ಬೂದಿ
ಕಣ್ಣ ಬಿಟ್ಟು ನೋಡವಳಗೆ
ಜೀವ ಹಾಯಿತು ನೆಲ ಸಾಮಾಧಿ
ಸುಟ್ಟ ಬೆಂಕಿಗೆ ಕೆಟ್ಟಿದೆ
ಬೂತಾಯಿಯ ನಸೀಬು
ಯಾರು ನೀಡುವರು
ಹತ್ತಿಹ ಬೆಂಕಿಗೆ ಜಾವಭು
ಒಮ್ಮೆ ನೋಡಿ ಏಳೋ ನಾವಭು
ಯಾಕೋ ಏನೋ ನಸೀಬು ಬಲು ಕಾರಬು
********ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment