ಕನ್ನಡಿ



ನಿನ್ನ ರೂಪ ನನ್ನಲ್ಲಿ

ಸೆರೆಯಾಯ್ತು ನನ್ನ ಕಣ್ಣಲಿ

ಕೆನ್ನೆಯೇಕೋ ಕೆಂಪು

ಮುತ್ತು ಇಟ್ಟರೆ ತಂಪು


ನೋಡಲು ನಿನ್ನ ಅಂದ

ಕಣ್ಣಸಾಲದು ಪ್ರೀತಿ ಬಂದ

ನೋಡುತ ನಿನ್ನನೇ

ಮರೆತೇ ನಾ ನನ್ನನ್ನೇ


ನೋಡಬೇಕು ನೀನು ನನ್ನ

ಕ್ಷಣ ಮರೆತು ಹಾಗೆ ನಿನ್ನ

ಮಧುರ ಮಾತು ಎಷ್ಟು ಚೆನ್ನಾ 

ನೀನು ನಿನಗೆ ಅಪ್ಪಟ ಚಿನ್ನ 


ಮುಚ್ಚು ಮರೆಯಿಲ್ಲ ನನಗೆ

ನಾನೆ ಬೇಕು ನಿನಗೆ

ಮಧುರ ಕ್ಷಣದ ಬೆಸುಗೆ

ನೀನೇ ಒಲವು ಕೊನೆಗೆ 


ಬೆತ್ತಲೆಯಾಗೋ ದೇಹ

ಉಸಿರ ಏರಿಳಿತಾದ ಮೋಹ 

ಯಾಕೋ ಕನಸಿನ ದಾಹ

ಮತ್ತೆ ನೋಡಬೇಕು ನಿನ್ನನೇ

ಎದರುಬಂದು ನಿಲ್ಲು ಸುಮ್ಮನ್ನೆ


ನನ್ನ ನಾ ಪ್ರೀತಿ ಮಾಡಿ

ಮನಸ್ಸು ಎತ್ತಿನ ಗಾಡಿ

ಪ್ರತಿ ಬಿಂಬ ನನ್ನನೇ ಬೇಡಿ

ಮಾಡಿದೆ ಏಕೋ ಮೊಡಿ

ನಿನ್ನ ಪೀತಿಸುವ ನನ್ನಯ ಹೆಸರೇ ಕನ್ನಡಿ


**********ರಚನೆ ********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20