ಕಥೆ ನೂರು
ಬದುಕು ಒಂದೂ ನೂರು
ಕಥೆ ಹೇಳಿದೆ ಮೂನ್ನೂರು
ನಡೆದ ಘಟನೆ ಸಾವಿರಾರು
ಕನಸುಗಳ ಸಂತೆಯ ತೇರು
ಪಯಣದಲಿ ನೊಂದು
ಜೀವನದಿ ಬೆಂದು
ಘಟನೆಗಳು ಕೊಂದು
ಬದುಕನ್ನು ತಿಂದು
ಮುಗಿಸಿದವು ಕಥೆಯ
ನನ್ನಯ ನೂರೆಂಟು ವ್ಯಥೆಯ
ಬಾಳ ಪುಟದಲ್ಲಿ ಚಿತ್ತಾರ
ನಲಿವ ನಯನ ಸಾಕ್ಷಾತ್ಕಾರ
ಬದುಕು ಕಟ್ಟಿದ ರೀತಿ ಅಮರ
ಕಥೆಯೂ ಬಲು ಘೋರ
ದಾರಿಯು ಬದುಕ ಮುಚ್ಚಿ
ಕಂಡ ಕನಸುಗಳ ಕೊಚ್ಚಿ
ನನ್ನ ಹೃದಯವ ಚುಚ್ಚಿ
ನಿದಿರೆ ಬಾರದೆ ರಾತ್ರಿ ನಾ ಬೆಚ್ಚಿ
ದೇವರ ನೆನೆದೆ ಜೀವನವ ಸವಿದೆ
*********ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment