ಜೀವನದಲ್ಲೇನಿದೆ ಗಮ್ಮತ್ತು
ಹುಟ್ಟಿದಾಗ ಅಮ್ಮ ಅತ್ತಳು
ಮುದ್ದು ಕಂದನ ಹೆತ್ತಳು
ಜೀವನದ ನೋಗವ ಹಿಡಿದ ಅಪ್ಪ
ಹೆಗಲು ಕೊಟ್ಟ ನೀ ಕೂರಲು
ಬೆಳೆದು ಬೆಳೆದು
ನೀ ಶಾಲೆ ಸೇರಿದೆ
ನಿನ್ನ ಸಾಕಾಲು ಅಪ್ಪ
ಸುಟ್ಟ ಜೀವನವ
ದುಡಿದ ಕಂತೆ ಕಂತೆ ಹಣವ
ನೀನು ಬೆಳೆಯಲು
ಅಮ್ಮ ಅನ್ನ ಬೇಯಿಸಿ
ನಿನ್ನ ಸಾಕಿ ಸಾಲುವಿದಳು
ಮುಗಿಸಿದೆ ನೀನು ಕಾಲೇಜನು
ಕಾಣದೆ ನಲಿದೆ ಬದುಕಿನ ಮೋಜನು
ಉದ್ಯೋಗ ಹುಡುಕಿ
ಮದುವೆಯಾದ ಮುದ್ದು ಹುಡುಗಿಯ
ಕಾಲ ಎಷ್ಟು ಬೇಗ ಕಳೆಯಿತು
ತಿಳಿಯಲಿಲ್ಲ
ಜೀವನದ ಗುಟ್ಟು ತಿಳಿಯವೂಳಗೆ
ನಿನ್ನ ಕಂದ ಬೆಳೆದನಲ್ಲ
ತಂದೆ ತಾಯಿಗೆ ವಯಸ್ಸಾಯಿತು
ರೋಗಗಳು ಶುರುವಾಯ್ತು
ಸಾಕಲಾರದೆ ನೀನು
ತಂದೆ ತಾಯಿ ಪ್ರಾಣ ಹಿಂಡಿದೆ
ಹಾಗೆ ಹೀಗೆ ಕಾಲ ಹುರುಳಿತು
ಅಪ್ಪ ಅಮ್ಮ ಸತ್ತರು
ಫೋಟೋಕೊಂದು ಹಾರ
ಗೋಡೆಗೆ ನೇತು ಹಾಕಿದ ದಾರ
ಯೋಚನೆ ಮಾಡಿದಾಗ
ಖುಷಿಯ ಕ್ಷಣವೂ
ಮನಸ್ಸಿಗೆ ಬಂತು
ನೋವಿನ ಕ್ಷಣವೂ
ಮನಸ್ಸನು ತಿಂತು
ಮತ್ತೇನಿದೆ ಜೀವನದಲ್ಲಿ
ಮಣ್ಣಾಗ ಬೇಕು ಆರು
ಮೂರಡಿ ಗುಂಡಿಯಲ್ಲಿ
ಕೊನೆಗೆ ನೆನೆದಾಗ ಅನಿಸಿತು
ಜೀವನದಲ್ಲೇನಿದೆ ಗಮ್ಮತ್ತು
ಇದುವೆನಾ ಮನುಜ ನಿನ್ನ ಕಿಮ್ಮತ್ತು
*******ರಚನೆ *******
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment