ದೋಣಿ ಶಿಖರ
ಬದುಕು ಬವಣೆ ಪರ್ವತ
ಸಾಗಿಸು ಜೀವನ ಅತಿರಥ
ನೋವು ಗೆಲುವು ಶಾಶ್ವತ
ಮನಸು ಏಕೋ ಮಹಾರಾಥ
ನೋವು ನಲಿವ ಮರೆತು
ತೂಗುತ್ತಿರುವ ದೋಣಿಯೇ
ನೀರ ಮೇಲೆ ಸಾಗುತಿರುವ
ಬದುಕ ಮರೆತ ಸಾವ ಚಾಳಿಯೇ
ನೀರವೊಳಗೆ ನಿನ್ನ ಶಿಕರ
ನೋಡಲೆಷ್ಟು ಸಡಗರ
ದಾರಿಯಲ್ಲಿ ಸಾಗುತಿರಲು
ಅಲೆಗೆ ಸಿಕ್ಕು ನಲುಗುತಿರಲು
ನೋವೆ ಕೊನೆ ಆಹಾಹಕಾರ
ಮುಳುಗು ತಿರುವ ದೋಣಿ
ಕಾಲ ತಿರುಗುತ್ತಿರುವ ಏಣಿ
ಮನಸು ಮಸಣದ ಹೋಣಿ
ಸಾವ ಕಾಯುತ್ತಿರುವ ಮಾಣಿ
ನಗುವ ನಲಿವೆ ಮಾನವತ
ಬದುಕು ಬಾಳ ಕಾಯುತ
ನಿಂತ ನೀರು ಮರುಗುತಾ
ದೇವನೊಬ್ಬ ಕೊನೆಗೆ ಶಾಶ್ವತ
******ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment