ಮೋಸಗಾತಿಯೇ



ಹೂವಿನ ಗಿಡದ ಕಾಣದ ಮುಳ್ಳಿನ 

ಮೋಸಕೆ ಬಲಿಯಾದೆ ನಾ

ನನ್ನ ಕನಸಿನ ಅರಮನೆಗೆ ಕೊಳ್ಳಿಯಾದೇ ನೀ 

ನಿನ್ನ ಆಡಿದ ಆಟದಿ ಬುಗುರಿಯಾದೇನಾ

ತಿರುಗುತಾ ನನ್ನೇ ನಾ ಮರೆತೋದೆ ನಾ


ಒಲವ ಮರೆತು ಮೋಸವ ಹರಿತು

ನೆಲೆಯನು ಹುಡುಕಿ ಬಲೆಯಲ್ಲಿ ಸಿಲುಕಿ

ಹೃದಯವ ತಿವಿದು ರಕ್ತವು ಹರಿದು

ಕೂಗಿತು ನಿನ್ನ ಮೋಸಗಾತಿಯೇ


ಮನಸ್ಸು ಮುರಿದು ಬದುಕು ಸವೆದು

ಸುರಿವ ಮಳೆಯಲಿ ಕನಸ ಕರೆದು 

ಹರಿವ ನೀರು ಕನಸ ತೊಳೆದು

ದಾರಿ ಕಾಣದ ಹುಚ್ಚು ಪ್ರೇಮಿ ನಾ


ಯಾಕೆ ಹೀಗೆ ಅಣೆಬರಹ ಶಪಿಸಿ

ದೇವರೇ ನನ್ನ 

 ಪ್ರೀತಿಗೆ ಮಾಡಿದೆ ಘಾಸಿ

ಆದರೂ ಏಕೋ ಕೊನೆ ಅಸೆ

ಮತ್ತು ಬೇಡಿದೆ ನಿನ್ನ ಪ್ರೀತಿಯ 


ಹತ್ತಿದ ಹುಚ್ಚು ಹೊತ್ತಿದೆ ಕಿಚ್ಚು

ಬೇಡೆನು ಏನು ನಾನು ನಿನ್ನನ್ನು

ಮೋಸಗಾತಿಯೇ ಪ್ರೀತಿ ಪಾತಾಕಿಯೇ

ದ್ರೋಹ ಮಾಡಿದೆ ನಂಬಿಕೆ ಚೂರು ಮಾಡಿದೆ

ಮುಗ್ದ ಮನಸಿಗೆ ಮಸಣವ ತೋರಿದೆ



********ರಚನೆ *********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ನೋವು ತುಂಬಿ

ಹಣತೆ ಆಳುತಿದೆ

Author biography of Chandrashekhar Channapura Halappa