ಕೊಲ್ಲು ಕೊಲ್ಲೆನ್ನುವರಯ್ಯ



ಹಾಲು ಕುಡಿಯದ ಹಾವಿನಾ

ಉತ್ತಕ್ಕೆ ಹಾಲು ಏರೆವರಯ್ಯ

ನಡು ದಾರಿಯಲ್ಲಿ ಹಾವು

ಕಂಡರೆ ಬೆಚ್ಚಿ ಓಡಿ ಓಡಿ

ಕೊಲ್ಲು ಕೊಲ್ಲೆನ್ನುವರಯ್ಯ 


ಮನುಷ್ಯ ಕಷ್ಟಕ್ಕೆ ಆಸರೆಯಾದಾಗ

ಬೇಷ ಬೇಷ ಅನ್ನುವರಯ್ಯ

ಮನುಷ್ಯ ನೋವಲ್ಲಿ ಬಿದ್ದಾಗ

ಮೂಲೆಗೆ ನೂಕು ನೂಕುತಾ   

ಕೊಲ್ಲು ಕೊಲ್ಲೆನ್ನುವರಯ್ಯ 


ಕಾಗೆ ಬಂದು ಮನೆ ಮುಂದೆ

ಕಾಳನು ಎಕ್ಕುವಾಗ ದೂರ ಹೋಡಿಸುತಾ

ಕೊಲ್ಲು ಕೊಲ್ಲೆನ್ನುವರಯ್ಯ 

ಸತ್ತ ಸಮಾಧಿಯ ಮುಂದೆ

ಮೃಸ್ಟಾನ್ನ ಭೋಜನ ಬಡಿಸಿ

ಸ್ವರ್ಗಕ್ಕೆ ದಾರಿ ತೆರೆಯುವುದು

ಬಂದು ತಿನ್ನು ಎನ್ನುವರಯ್ಯ



ದಾರಿಯಲ್ಲಿ ಕುಡುಕನ ನೋಡಿ

ಕುಡಿದ ಬಿದ್ದ ಕುಡುಕ ಎಂಬುವರಯ್ಯ

ಯಾರಿಗೂ ಕಾಣದ ಹಾಗೆ   

ಕುಡಿದು ನಾನು ಕುಡುಕನ್ನಲ್ಲ

ಸಾಮಾಜಿಕ ಚಿಂತಕ ಎನ್ನುವರಯ್ಯ


ನಾಲ್ಕು ಜನಕೆ ಅನ್ನ ದಾನ ಮಾಡಿ

ದೇವರ ಕೃಪೆ ಎಂದು ಹೇಳಿ 

ಸಮಾಧಾನ ಪಡಿಸಿ ಕೊಳ್ಳುವರಯ್ಯ

ಮನೆಯ ಬಾಗಿಲಿಗೆ ಅನ್ನ ಬೇಡಲು ಬಂದ 

ಬಿಕ್ಷಕನಿಗೆ ಹೊಡೆದು ಹುಚ್ಚ

ಕೊಲ್ಲು ಕೊಲ್ಲೆನ್ನುವರಯ್ಯ 



ಕೊಳದಲ್ಲಿ ಮೀನು ಹಿಡಿದು

ತಿಂದು ತೆಗುವರಯ್ಯ

ಮೊಸಳೆಯೂ ಕಂಡರೆ

ಕೊಲ್ಲು ಕೊಲ್ಲೆನ್ನುವರಯ್ಯ


ಮುದ್ದಾದ ಮೇಕೆಯ ತಂದು

ಹುಲ್ಲು ಹಾಕಿ ಬ್ಯಾ ಎಂದು

ಮುದ್ದಾಡಿವರಯ್ಯ

ಬೆಳೆದ ಮೇಕೆಯ ಮಾಂಸ ನೋಡಿ

ಅಮ್ಮನ ಅರಕೇಯಿದೆ ಕೊಲ್ಲು ಕೊಲ್ಲೆನ್ನುವರಯ್ಯ 


*********ರಚನೆ *********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20