ತೇಲುವ ದೋಣಿ
ಏ ನನ್ನ ಸ್ನೇಹ ದೋಣಿಯೇ
ನೀರಿನಲ್ಲಿ ಮುಳುಗಿ ನೀನು
ತೆಲುತಾ ನಗುತಾ ನಲಿವೆ
ಅಲೆಗಳ ಹೊಡೆತಕೆ ನಲಿಯುವೆ
ನಿನ್ನ ಮೇಲೆ ನಿಂತ ನನ್ನ
ಮಗುವಿನಂತೆ ಪ್ರೀತಿಯಲಿ ಸಲವಿ
ತೂಗಿ ತೂಗಿ ಒಲವೇ ಮೆರೆವೆ
ನಿನಗೆ ಯಾರು ಸಾಟಿಯು
ಕಡಲ ನೀರು ನಿನ್ನ ಮುತ್ತಿಟ್ಟಾಗ
ತಾಕಿ ನಿನ್ನ ಮೈ ಸವರಿದಾಗ
ಹಾಗೆ ತೂಗಿ ಒಮ್ಮೆ ಬಾಗಿ
ಜೀವ ಅಲೆಯ ಜೀವಿಗಳ ಸಲಹುವುವೆ
ನೀನು ಬಾಗಿ ನೀನು ತೂಗಿ
ಬೆದರುವಾಗ ನೋಡಿ ನಿನ್ನ ನಗುವರು
ಅಲೆಗಳಿಗೆ ಹೆದರದೆ ಗಾಳಿಗೆ ನಲುಗದೆ
ಮಜಾ ನೋಡಡುವವರಲೆಕ್ಕಿಸದೆ
ಪ್ರೀತಿಗೆ ಪ್ರಾಣ ಕೊಟ್ಟು
ಜೇವಿಗಳ ಲೆಕ್ಕಕಿಟ್ಟು
ದಡಕೆ ನಮ್ಮ ಬಿಟ್ಟು
ಬದುಕ ಗೂಡಿಗೆ ಬಿಟ್ಟು
ಹೊರಟೆ ನೀನು ನೀರಿಗೆ
********ರಚನೆ ******-**
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment