ನಗುವ ಬಾಲ್ಯ
ನಾನು ಸೇರಿದ ಶಿಶು ವಿಹಾರ
ಆಟದ ನವಿರ ಬುದ್ದಿ ಕೇಂದ್ರ
ಅಡಿದೆ ಆಟ ಅಂಗನವಾಡಿಲಿ
ಕುದೆರೆ ಹೇರಿ ಕುಣಿದು
ಟೀಚರಮ್ಮಾ ಹೇಳಿ ಕೊಟ್ರು
ಅ, ಆ. ಈ ಇ..........
1,2,3,4
ಹನ್ನೆರಡು ಆದ್ರೆ ಊಟ ಅಜ್ಜಿ ಕೊಟ್ಟ ಸಿಹಿ ಪಾಯಿಸ.. ಸವಿದು
ಸವಿದು ತಿಂದು
ಹಿಟ್ಟಿನುಂಡೆ ಕರೆಯಿತು ಕೈ ಬಿಸಿ
ಹೊರೆಟೆವು ನಾವು ಮನೆಗೆ.....
ಕಾಲ ಕಳೆದು.....
ದಿನಗಳದ ಮೇಲೆ ಅಪ್ಪ ಸೇರಿಸಿದರು ಶಾಲೆಗೆ
ಕಿವಿಯ ಮುಟ್ಟಿ ನೋಡಿ ನನ್ನ
ವಯಸ್ಸು ತಿಳಿದು
ಕೂರಲು ಹೇಳಿದರು ಒಂದನೇ
ತರಗತಿಗೆ
ಶುರುವಾಯ್ತು ಶಿಕ್ಷಣ
ಹೇಳಿ ಕೊಟ್ರು ಕನ್ನಡ ಮೇಸ್ಟ್ರು ಕವನ
ಧರಣಿ ಮಂಡಲ ಮಧ್ಯದೊಳಗೆ
ಕಲಿತು ಕುಣಿದು ನಾವೂ
ಹಾರಿಸಿದೆವು ಗಾಳಿಪಟ, ಕುಂಟೆ ಪಿಲ್ಲೆ ಹಾಡಿ
ಅಡಿಗೆ ಗುಡಿಗೆ ಆಟವಾಡಿ
ಮನೆಗೆ ಬಂದು ಪಾಠ ಓದಿ
ಅವ್ವ ಸುಟ್ಟ ಬೆಣ್ಣೆ ರೊಟ್ಟಿ
ಕೆಂಪು ಚಟ್ನಿ ಎಷ್ಟು ರುಚಿಯು ಆದಿನ
ಎಲ್ಲಿ ಹೋಯ್ತು ಆದಿನ ಬೂಸ್ಟ್ ಕುಡಿದು ಅ ಕ್ಷಣ
ಕಾಲ ಕಳೆದು ನೆನೆಪ ಸವಿದು
ಶುರುವಾದ ಶಿಕ್ಷಣ
*******ರಚನೆ ********
ಡಾ. ಚಂದ್ರಶೇಖರ್. ಸಿ. ಹೆಚ್
Comments
Post a Comment